ಪಣಜಿ, ಜೂನ್ 8, ಲಾಕ್ ಡೌನ್ ಕಾರಣಕ್ಕೆ ಸಿಲುಕಿಕೊಂಡಿದ್ದ ಸಾವಿರಾರು ವಲಸೆ ಕಾರ್ಮಿಕರು ಒಡಿಶಾ ಮತ್ತು ಜಾರ್ಖಂಡ್‌ಗೆ ವಿಶೇಷ ಶ್ರಮಿಕ್ ರೈಲಿನಲ್ಲಿ ತವರು ರಾಜ್ಯಕ್ಕೆ ಹೊರಟಿದ್ದಾರೆ. ಈ ರೈಲಿನಲ್ಲಿ ಎರಡು ರಾಜ್ಯಗಳ 3095ಹೆಚ್ಚು ವಲಸೆ ಕಾರ್ಮಿಕರರು ಇದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಶೇಷ ಶ್ರಮಿಕ್ ಎಕ್ಸ್‌ಪ್ರೆಸ್ ಮಡ್ಗಾಂವ್ ರೈಲ್ವೆ ನಿಲ್ದಾಣದಿಂದ ಕಟಕ್ ಮೂಲಕ ಒಡಿಶಾದಕ್ಕೆ ಹೊರಟಿದ್ದರೆ ಮತ್ತೊಂದು, ಎರಡನೇ ವಿಶೇಷ ರೈಲು ಜಾರ್ಖಂಡ್ ಗೆ ಹೊರಟಿದೆ .ರಾಜಧಾನಿ ಪಣಜಿಯಿಂದ ಇಲ್ಲಿಯವರೆಗೆ 7, 4351 ಕಾರ್ಮಿರಕನ್ನು ಅವರ ರಾಜ್ಯಗಳಿಗೆ ಶ್ರಮಿಕ್ ರೈಲುಗಳ ಮೂಲಕ ಗೆ ಕಳುಹಿಸಲಾಗಿದೆ.ಇಡೀ ಕಾರ್ಯಾಚರಣೆಯನ್ನು ದಕ್ಷಿಣ ಮತ್ತು ಉತ್ತರ ಗೋವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ.