ಧಾರವಾಡ 17: ಸಂಗೀತ ಮತ್ತು ನೃತ್ಯ ಸಾಧನೆಯಲ್ಲಿ ಯಾರುತಲ್ಲೀನತೆ ಹೊಂದುತ್ತಾರೋ ಅವರು ಮಾತ್ರ ಸಾಧಕರಾಗುತ್ತಾರೆ ಎಂದು ಧಾರವಾಡ ಹಿಂದೂಸ್ತಾನಿ ಗಾಯಕ ಡಾ.ಮೃತ್ಯಂಜಯ ಶೆಟ್ಟರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ಶ್ರೀ ಎಸ್.ಎಸ್. ಎಲಿಗಾರ ಮತ್ತು ದಿ.ಶ್ರೀ ಅಮರೇಶಎಸ್. ಎಲಿಗಾರ (ಯಲಿಗಾರ) ಸ್ಮರಣಾರ್ಥದತ್ತಿ ಅಂಗವಾಗಿ ಕುಮಾರ ಶಮಂತಕ ಕೆ.ಜಿ. ಕಲಾರ್ಣ ಟ್ರಸ್ಟ್, ಧಾರವಾಡ ಅವರಿಂದ ಆಯೋಜಿಸಿದ್ದ ಭರತ ನಾಟ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ನೃತ್ಯ ಮತ್ತು ಸಂಗೀತ ಇವುಗಳು ದೇವರಿಗೆ, ನಿಸರ್ಗಕ್ಕೆ ಪ್ರಿಯವಾದದ್ದು.ದೇವರಿಗೆ ನಮ್ಮಲ್ಲಿರುವಂತಹ ಸಂಪತ್ತು ಬೇಕಾಗಿಲ್ಲ. ನಮ್ಮಲ್ಲಿರುವಂತಹ ಸಂಗೀತ, ನೃತ್ಯ ಕಲೆ ಬೇಕಾದದ್ದು. ಇತಿಹಾಸವನ್ನು ನೋಡಿದಾಗ ಪುರಾಣ, ಪುಣ್ಯ ಕಥೆಗಳಲ್ಲಿ ಕೇಳಿದಾಗ ಎಷ್ಟೋ ನೃತ್ಯಗಾರರು, ಸಂಗೀತಗಾರರು ತಮ್ಮ ಅಚಲ ಸಾಧನೆಯಿಂದ ನಿಸರ್ಗವನ್ನೆ ತಮ್ಮ ಮುಷ್ಟಿಯಲ್ಲಿ ಪಡೆದು ಮಳೆ ಸುರಿಸಿದ್ದಾರೆ. ಹಬ್ಬ, ಹರಿದಿನಗಳಲ್ಲಿ ಪ್ರಮುಖ ಕಾರ್ಯಗಳಲ್ಲೂ ಒಂದೊಂದು ಶುಭ ಕಾರ್ಯಗಳಿಗೂ ಒಂದೊಂದು ತರವಾದ ಕಲೆಗಳ ಅವಶ್ಯಕತೆಯಿದೆ.
ಮನುಷ್ಯನಲ್ಲಿ ನೃತ್ಯ, ಸಂಗೀತ ಕಲೆಗಳು ಆದಿ ಅನಾದಿ ಕಾಲದಿಂದಲೂ ಬಳುವಳಿಯಾಗಿ ಬಂದಿವೆ. ಶುಭ ಕಾರ್ಯಗಳಲ್ಲಿ ಸೋಬಾನ ಪದ, ಕರಡಿಮಜಲು, ಭಜನೆ ಇತ್ಯಾದಿಗಳನ್ನು ಪ್ರತಿದಿನ ನೋಡುತ್ತಿದ್ದೇವೆ. ಸಂಗೀತಗಾರರು, ನೃತ್ಯಗಾರರು ಹಣದ ಬೆನ್ನು ಹತ್ತದೆ, ಸಾಧನೆಯಲ್ಲಿ ತಲ್ಲೀನರಾಗಬೇಕು. ಸಾಧನೆ ನಮಗೆ ಏನೂ ಬೇಕೋ ಅದನ್ನು ನೀಡುತ್ತದೆ.ಸಂಗೀತದಲ್ಲಿ ಸಾಧನೆ ಮಾಡಿದ ಬಸವರಾಜರಾಜಗುರು, ಮಲ್ಲಿಕಾರ್ಜುನ ಮನಸೂರ, ಪಂಚಾಕ್ಷರಿ ಮತ್ತಿಗಟ್ಟಿ, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್‌ಇವರೆಲ್ಲರೂ ಸಾಧನೆಯ ಶಿಖರವನ್ನೇರಿದವರು.ಈ ಸಾಧಕರುಜನರ ಮನಸ್ಸಿನಲ್ಲಿ ಅಚ್ಚಳಿಯದೇ ಅವರ ಸಾಧನೆಯಿಂದ ಉಳಿದಿದ್ದಾರೆ. ನಾನು ಸಹ ಚಿಕ್ಕವನಿದ್ದಾಗ ಹೆಜ್ಜೆಯನ್ನು ಹಾಕುತ್ತಾ ಬೆಳೆದು ಬಂದವನು. ಇವತ್ತು ನೃತ್ಯ ಪ್ರದರ್ಶಿಸುತ್ತಿರುವ ಕು.ಶಮಂತಕಕೆ.ಜಿ.ಇವನು ಈ ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ್ದಾನೆ. ಮುಂದೆ ಇವನು ನಮ್ಮದೇಶದ ನಾಟ್ಯ ಪರಂಪರೆಯನ್ನು ಶ್ರೀಮಂತಗೊಳಿಸಲಿ ಎಂದು ಹಾರೈಸುತ್ತೇನೆ ಎಂದರು.
ಮುಖ್ಯ ಅತಿಥಿಗಳಾಗಿ ಗದಗ ಪಂ.ಪಂಚಾಕ್ಷರಿ ಗವಾಯಿಗಳವರ ಸಂಗೀತಮಹಾವಿದ್ಯಾಲಯದ ಪ್ರಾಚಾರ್ಯೆ ಸುಮಿತ್ರಾ ಕಾಡದೇವರಮಠ ಮಾತನಾಡಿದರು. ದತ್ತಿ ಆಶಯ ಕುರಿತು ವಿಜಯಲಕ್ಷ್ಮಿ ವಾಲಿ ಮಾತನಾಡಿದರು.
ಗುರು ಸವಿತಾ ಹೆಗಡೆ ಹಾಗೂ ಅತುಲ್ ಬಾಲು, ಚೆನೈ ಅವರ ಶಿಷ್ಯ ಕು.ಶಮಂತಕ ಕೆ.ಜಿ. ಮತ್ತು ಕು.ಮಿಹಿರ ಭರತನಾಟ್ಯ ಪ್ರಸ್ತುತಪಡಿಸಿದರು.ಸತೀಶತುರಮರಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶಂಕರ ಹಲಗತ್ತಿ, ಎಂ.ಎಂ.ಚಿಕ್ಕಮಠ, ಜಗದೀಶ ಕಾಡದೇವರಮಠ, ಜಯಶ್ರೀ, ಅಶೋಕ ಚಿಕ್ಕೋಡಿ ಸೇರಿದಂತೆ ಮುಂತಾದವರಿದ್ದರು.