ಮಕ್ಕಳ ಭವಿಷ್ಯ ರೂಪಿಸುವ ಪರೀಕ್ಷೆ ಇದಾಗಿದೆ

ಲೋಕದರ್ಶನವರದಿ

ರಾಣೇಬೆನ್ನೂರು ಜೂ.21: ಮಕ್ಕಳ ಭವಿಷ್ಯ ರೂಪಗೊಳ್ಳುವ ಸಂದರ್ಭದ ಪ್ರಥಮ ಹಂತದ ಈ ಎಸ್ಎಸ್ಎಲ್ಸಿ ಪರೀಕ್ಷೆಯೂ ಅತ್ಯಂತ ಆಶಾದಾಯಕವಾಗಿರುತ್ತದೆ.  ಆದರೆ, ಕೋವಿಡ್-19ನಿಂದಾಗಿ ಪರೀಕ್ಷೆ ನಡೆಸುವುದೇ ಬೇಡವೇ ಎನ್ನುವ ಗೊಂದಲದಲ್ಲಿ ಸಕರ್ಾರ ಮತ್ತು ಮಕ್ಕಳು ಚಿಂತಾಕ್ರಾಂತರಾಗಿದ್ದರು. ಇಂತಹ ಸಂದರ್ಭದಲ್ಲಿ ಶಿಕ್ಷಣ ಸಚಿವರು ಅತ್ಯಂತ ವೈಜ್ಞಾನಿಕವಾಗಿ ಚಿಂತನೆ ನಡೆಸಿ ಮುಂಜಾಗೃತಾ ಕ್ರಮವಹಿಸಿ ಮಕ್ಕಳ ಭವಿಷ್ಯ ಕಮರಿ ಹೋಗಬಾರದು ಎನ್ನುವ ದೃಷ್ಠಿಯಿಂದಾಗಿ ಇದೀಗ ಪರೀಕ್ಷೆ ನಡೆಸಲು ಸನ್ನದ್ದವಾಗಿದೆ.  ಶಿಕ್ಷಕರು ಮತ್ತು ಮಕ್ಕಳು ಅತ್ಯಂತ ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ನಡೆಯಲಿರುವ ಪರೀಕ್ಷೆಯನ್ನು ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ನಡೆಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಅವರು ಶುಕ್ರವಾರ ಇಲ್ಲಿನ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ, ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

        ಸಕರ್ಾರ ಬೇಕು-ಬೇಡಗಳ ಮಧ್ಯ ಭಾರಿ ಚಿಂತನೆ ನಡೆಸಿ ಅಂತಿಮವಾಗಿ ಗಟ್ಟಿ ನಿಲುವು ತಾಳಿ ಈಗಾಗಲೇ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಸಿ ಅತ್ಯಂತ ಯಶಸ್ವಿ ಕಂಡಿದೆ.   ಅದೇ ರೀತಿ ಎಸ್ಎಸ್ಎಲ್ಸಿ ಪರೀಕ್ಷೆಯೂ ಅತ್ಯಂತ ಪರಿಣಾಮಕಾರಿಯಾಗಿ ನಡೆಸಿ ಉತ್ತಮ ಫಲಿತಾಂಶ ಬರುವುದರ ಜೊತೆಗೆ ಅವರ ಬಗ್ಗೆ ಅತ್ಯಂತ ಕಾಳಜಿ ವಹಿಸಿ ಯಾವುದೇ ತೊಂದರೆ ಬಾರದಂತೆ ಶಿಕ್ಷಕರು ಮತ್ತು ಇಲಾಖೆ ಕಟ್ಟು-ನಿಟ್ಟನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತಾಲೂಕಿನಲ್ಲಿ ಪರೀಕ್ಷೆಗಾಗಿ ಸಿದ್ಧತೆಗೊಳಿಸಿರುವ ಎಲ್ಲಾ ಪರೀಕ್ಷಾ ಕೇಂದ್ರಗಳು ಪರೀಕ್ಷೆಯ ಪೂರ್ವಭಾವಿಯಾಗಿ ಅಲ್ಲಿ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಬೇಕು ಮತ್ತು ಎರಡೆರಡು ಬಾರಿ ಸ್ಯಾನಿಟರೈಸ್ ಸಿಂಪಡಿಸಲು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ನಗರಸಭೆ ಗ್ರಾಸಿಂ ಮತ್ತು ಅಗ್ನಿಶಾಮಕ ದಳದ ವಾಹನಗಳು ಬಳಸಿಕೊಳ್ಳಬೇಕು.   ಇಲ್ಲಿ ಮಕ್ಕಳ ಆರೋಗ್ಯದ ಜೊತೆಗೆ ಅಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಶಿಕ್ಷಕರ ಆರೋಗ್ಯವೂ ಸಹ ಆಡಳಿತಕ್ಕೆ ಬಹಳ ಮುಖ್ಯವಾಗಿದೆ. 

 ಒಟ್ಟಾರೆಯಾಗಿ ಕಟ್ಟು-ನಿಟ್ಟಿನ ಕ್ರಮ ಕೈಗೊಳ್ಳಬೇಕು ಜೊತೆಗೆ ಮಕ್ಕಳ ಆರೋಗ್ಯ ದೃಷ್ಠಿಯಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರನ್ನೇ ಒದಗಿಸಬೇಕು.  ಇದರಲ್ಲಿ ನಿರ್ಲಕ್ಷ್ಯತೆವಹಿಸಿದರೇ, ಅಲ್ಲಿನ ಅಧಿಕಾರಿಗಳೆ ಹೊಣೆ ಹೋರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ತಹಶೀಲ್ದಾರ ಬಸನಗೌಡ ಕೊಟೂರ, ನಗರಸಭೆ ಪೌರಾಯುಕ್ತ ಡಾ|| ಎನ್.ಮಹಾಂತೇಶ, ಆರೋಗ್ಯ ಇಲಾಖೆ ಆಡಳಿತಾಧಿಕಾರಿ ಡಾ|| ಎಸ್. ಸಂತೋಷಕುಮಾರ, ತಾಲೂಕಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಶ್ಯಾಮರಾವ್ ಕಾಂಬಳೆ, ಡಿವೈಎಸ್ಪಿ ಟಿ.ವಿ.ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ, ದೈಹಿಕಶಿಕ್ಷಣಾಧಿಕಾರಿ ಎ.ಬಿ.ಚಂದ್ರಶೇಖರ, ತಾ.ಪಂ ವ್ಯವಸ್ಥಾಪಕ ಬಿ.ಎಸ್.ಶಿಡೇನೂರ ಸೇರಿದಂತೆ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಶಿಕ್ಷಕರು, ಪರೀಕ್ಷಾ ಮೇಲ್ವಿಚಾರಕ ವ್ಯವಸ್ಥಾಪಕರು, ಶಿಕ್ಷಕರು ಪಾಲ್ಗೊಂಡಿದ್ದರು. 

ಇದೇ ಸಂದರ್ಭದಲ್ಲಿ300ಕ್ಕೂ ಹೆಚ್ಚು ವಿದ್ಯಾಥರ್ಿಗಳಿಗೆ ಮಾಸ್ಕ್ ಮತ್ತು ಶುದ್ಧ ಕುಡಿಯುವ ನೀರಿನ ಬಾಟಲ್ಗಳನ್ನು ವಿತರಿಸಿ ಪರೀಕ್ಷೆಯಲ್ಲಿ ಎಲ್ಲರೂ ಯಶಸ್ವಿ ಸಾಧಿಸಬೇಕು ಎಂದು ಶುಭಹಾರೈಸಿದರು.