ಗಾಂಧಿನಗರ, ನವೆಂಬರ್ 14 : ಗುಜರಾತ್ನಲ್ಲಿ ದಾಖಲೆಯ ಶೇಕಡ 146 ರಷ್ಟು ಮಳೆಯಾಗಿದ್ದು ಇದು ಕಳೆದ 30 ವರ್ಷಗಳ ಯಾವುದೇ ಒಂದು ವರ್ಷದಲ್ಲಿ ಮೂರನೇ ಅತಿ ಹೆಚ್ಚು ಎಂದು ಪರಿಹಾರ ಆಯುಕ್ತರ ಕಚೇರಿ ಗುರುವಾರ ತಿಳಿಸಿದೆ.
ಗುಜರಾತ್ ಪರಿಹಾರ ಆಯುಕ್ತರ ಕಚೇರಿ ನೀಡಿದ ಅಧಿಕೃತ ಮಾಹಿತಿಯಲ್ಲಿ ಈ ಅಂಶ ಹೇಳಲಾಗಿದೆ.
ಮುಂಗಾರು ಅಲ್ಲದ ಅವಧಿಯಲ್ಲಿ ಒಂಬತ್ತು ಪ್ರತಿಶತದಷ್ಟು ಮಳೆ ದಾಖಲಾಗಿದೆ ಎಂದು ಮಾಹಿತಿ ತಿಳಿಸಿದೆ; ಜೂನ್ ಮಧ್ಯದಲ್ಲಿ ಮುಂಗಾರಿಗೆ ಮೊದಲೇ ವಾಯು ಮತ್ತು ಕಾರು ಚಂಡಮಾರುತದ ಪ್ರಭಾವದಿಂದಾಗಿ ಕಳೆದ 24 ಗಂಟೆಗಳಲ್ಲಿ ಐದು ಜಿಲ್ಲೆಗಳಲ್ಲಿ ಒಟ್ಟು 13 ತಾಲ್ಲೂಕುಗಳಲ್ಲಿ ಮಳೆಯಾಗಿದ್ದು, ಸುರೇಂದ್ರನಗರ ಜಿಲ್ಲೆಯ ಧ್ರಂಗಾಧ್ರಾದಲ್ಲಿ 60 ಮಿಲೀಮೀಟರ್ ಮಳೆಯಾಗಿದೆ. ಬನಸ್ಕಂತ ಹಾಗೂ ಕಚ್ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಆಲಿಕಲ್ಲು ಮಳೆಯಾಗಿದೆ.
ಗುರುವಾರ ಮತ್ತು ಶುಕ್ರವಾರದಂದು ರಾಜ್ಯದ ಕೆಲವು ಭಾಗಗಳಲ್ಲಿ ಸಾದರಣಾ ಮಳೆ ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ಎಂದು ಮುನ್ಸೂಚನೆ ನೀಡಿದೆ.
ವರ್ಷದಲ್ಲಿ ಇದು ರಾಜ್ಯದಲ್ಲಿ ಮೂರನೇ ಅತಿ ಹೆಚ್ಚಿನ ಮಳೆಯಾಗಿದೆ.
1994 ರಲ್ಲಿ ಅತಿ ಹೆಚ್ಚು 1245 ಮತ್ತು 2006 ರಲ್ಲಿ ಒಟ್ಟು 1223 ಮಿಲಿ ಮೀಟರ್ ಮಳೆಯಾಗಿತ್ತು.