ಅವರು ನಾವು ಪಡೆದದ್ದನ್ನು ಸಮಾಜಕ್ಕೆ ಮರಳಿ ಕೊಡುವ ಗುಣವಿರಬೇಕು: ಪ್ರಕಾಶ ಶೆಟ್ಟಿ

They should have the quality to give back to the society what we have received: Prakash Shetty

ಅವರು ನಾವು ಪಡೆದದ್ದನ್ನು ಸಮಾಜಕ್ಕೆ ಮರಳಿ ಕೊಡುವ ಗುಣವಿರಬೇಕು: ಪ್ರಕಾಶ ಶೆಟ್ಟಿ 

ಹಾವೇರಿ 28: ಮಂಡ್ಯದಲ್ಲಿ ಇತ್ತೀಚೆಗೆ ಜರುಗಿದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಸಮಾಜ ಸೇವೆಗಾಗಿ ಸನ್ಮಾನವನ್ನು ಪಡೆದ ಹೊಟೆಲ್ ಉದ್ಯಮಿ ಪ್ರಕಾಶ ಶೆಟ್ಟ ಅವರಿಗೆ ಹಾವನೂರ ಪ್ರತಿಷ್ಠಾನದಿಂದ ಸನ್ಮಾನಿಸಲಾಯಿತು.  

ಇಲ್ಲಿಯ ವಿರೂಪಾಕ್ಷ ಹಾವನೂರ ಅವರ ಸ್ವಗೃಹದಲ್ಲಿ ನಡೆದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪ್ರಕಾಶ ಶೆಟ್ಟಿ ಅವರು ನಾವು ಪಡೆದದ್ದನ್ನು ಸಮಾಜಕ್ಕೆ ಮರಳಿ ಕೊಡುವ ಗುಣವಿರಬೇಕು. ಯಾವುದೇ ವಿಷಯವನ್ನು ನಮ್ಮಕ್ಕಿಂತ ಚೆನ್ನಾಗಿದ್ದರೆ,ಅದನ್ನು ಗುರುತಿಸಿ ಗೌರವಿಸುವ ಗುಣಗೌರವವನ್ನು ಪಡೆದಾಗ ಒಂದು ನೆಮ್ಮದಿ ಇರುತ್ತದೆ.ಸಮಾಜದಲ್ಲಿ ನಮ್ಮನ್ನು ನೋಡುವ ಕಣ್ಣುಗಳಿಗೆ ಸದಾ ವಿನಮ್ರರಾಗಿರಬೇಕೆಂದು ಹೇಳಿದರು.  

ಹಾವನೂರ ಪ್ರತಿಷ್ಠಾನದ ಅಧ್ಯಕ್ಷರಾದ ವಿರೂಪಾಕ್ಷ ಹಾವನೂರ ಮಾತನಾಡಿ ಸಮಾಜ ಸೇವೆಯಲ್ಲಿ ನಮಗೊಂದು ಮಾದರಿ ಪ್ರಕಾಶ ಶೆಟ್ಟಿ ಅವರು ಎಂದು ಹೇಳಿ ವಿನಯ,ವಿವೇಕಗಳಿಗೆ ಸಾಕಾರಮೂರ್ತಿ ಎಂದರು.  

ಹಿರಿಯ ಸಾಹಿತಿ ಸತೀಶ ಕುಲಕರ್ಣಿ,ಲೈನ್ಸ್‌ ಕ್ಲಬ್‌ನ ಅಧ್ಯಕ್ಷರಾದ ಸುಭಾಸ ಹುಲ್ಯಾಳದ,ಕಲಾವಿದ ಕರಿಯಪ್ಪ ಹಂಚಿನಮನಿ,ಗುರುಪಾದಗೌಡ ಪಾಟೀಲ,ಪ್ರಭು ರಿತ್ತಿ,ಗೀತಾ ಹಾವನೂರ,ಜಿ.ಎಂ.ಓಂಕಾರಣ್ಣನವರ,ಡಾ. ಅಂಬಿಕಾ ಹಂಚಾಟೆ,ನೇತ್ರಾ ಅಂಗಡಿ, ಪೃಥ್ವಿರಾಜ ಬೆಟಗೇರಿ, ಶ್ರೀದೇವಿ ಹಾವನೂರ,ಕು.ಮಾನಸಾ ಹಾವನೂರ ಮುಂತಾದವರು ಇದ್ದರು.