ನವದೆಹಲಿ, ಡಿ ೨೫, ಮುಸ್ಲಿಮರು ಜೀವಿಸಲು ವಿಶ್ವದಾದ್ಯಂತ ೧೫೦ ಕ್ಕೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳಿವೆ,
ಹಿಂದೂಗಳು ಕೇವಲ ಭಾರತ ದೇಶದಲ್ಲಿ ಮಾತ್ರ ಬದುಕಬೇಕಾದ ಪರಿಸ್ಥಿತಿ ಇದೆ
ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ
ಬರುವ ಮುಸ್ಲಿಮೇತರ ಶರಣಾರ್ಥಿಗಳಿಗೆ ಭಾರತೀಯ ಪೌರತ್ವ ಕಲ್ಪಿಸುವ ಕಾನೂನನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು
ಅವರು ಆಕ್ರೋಶ ವ್ಯಕ್ತಪಡಿಸಿದರು. ಗುಜರಾತ್ ಮುಖ್ಯಮಂತ್ರಿ ರೂಪಾನಿ, ಸಬರಮತಿ ಆಶ್ರಮದ ಬಳಿ ಪೌರತ್ವ ಕಾಯ್ದೆಯನ್ನು ಬೆಂಬಲಿಸುವ
ಬೃಹತ್ ಸಮಾವೇಶ ಉದ್ದೇಶಿಸಿ
ಮಾತನಾಡಿದರು. ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಭಿಪ್ರಾಯಗಳಿಗೆ
ವಿರುದ್ಧವಾಗಿ ಕಾಂಗ್ರೆಸ್ ವ್ಯವಹರಿಸುತ್ತಿದೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.ದೇಶ ವಿಭಜನೆ ನಡೆದ ಸಮಯದಲ್ಲಿ, ಪಾಕಿಸ್ತಾನದಲ್ಲಿ ಶೇ ೨೨ರಷ್ಟಿದ್ದ ಹಿಂದೂ ಧರ್ಮೀಯರ ಜನ ಸಂಖ್ಯೆ
ದೌರ್ಜನ್ಯ, ಹಿಂಸಾಚಾರ ಹಾಗೂ ಅತ್ಯಾಚಾರಗಳಿಂದಾಗಿ ಪ್ರಸ್ತುತ
ಕೇವಲ ಶೇ ೩ಕ್ಕೆ ಇಳಿಕೆಯಾಗಿದೆ. ಹಾಗಾಗಿ, ಹಿಂದೂಗಳು ಭಾರತಕ್ಕೆ ಮರಳಲು ಬಯಸುತ್ತಿದ್ದಾರೆ, ಅವರು ಭಾರತದಲ್ಲಿ
ಘನತೆಯಿಂದ ಬದುಕುಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಸ್ಲಿಮರು ವಿಶ್ವದ ೧೫೦ ದೇಶಗಳಲ್ಲಿ ಎಲ್ಲಿ ಬೇಕಾದರೂ ಜೀವಿಸಬಹುದು, ತೆರಳಬಹುದು ಆದರೆ, ಹಿಂದೂಗಳಿಗೆ
ಜಗತ್ತಿನಲ್ಲಿ ಆಶ್ರಯ ಕಲ್ಪಿಸುವ ದೇಶವೆಂದರೆ ಭಾರತ ಮಾತ್ರ.
ಅವರಿಗೆ ಇಲ್ಲಿಗೆ ಬಂದರೆ
ನಿಮಗೇನು ಸಮಸ್ಯೆ ಎಂದು ಕಾಂಗ್ರೆಸ್ ಪಕ್ಷವನ್ನು ರೂಪಾನಿ ಪ್ರಶ್ನಿಸಿದರು.