ಧಾರವಾಡ 02: ಬದಲಾದ ಸಂದರ್ಭದಲ್ಲಿ ಉದ್ಯಮವಾಗಿರುವ ಪತ್ರಿಕಾ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಸಿಕೊಳ್ಳುವುದರ ಜೊತೆಗೆ ಸಾಮಾಜಿಕ ಆರೋಗ್ಯ ಕಾಪಾಡುವುದು ಹೇಗೆ ಎನ್ನುವ ಪ್ರಮುಖ ಸವಾಲು ಎದುರಿಸುತ್ತಿದೆ ಎಂದು ವಾತರ್ಾ ಮತ್ತು ಪ್ರಸಾರ ಇಲಾಖೆ ಹಿರಿಯ ಸಹಾಯಕ ನಿದರ್ೇಶಕ ಮಂಜುನಾಥ ಡೊಳ್ಳಿನ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಕನರ್ಾಟಕ ವಿದ್ಯಾವರ್ಧಕ ಸಂಘವು ದಿ. ಆರ್. ಸಿ. ನಾಗಮ್ಮನವರ ದತ್ತಿ ಅಂಗವಾಗಿ ಏರ್ಪಡಿಸಿದ್ದ `ಪತ್ರಿಕಾ ದಿನಾಚರಣೆ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
175 ವರ್ಷಗಳ ಹಿಂದೆ ಕನ್ನಡದ ಮೊದಲ ಪತ್ರಿಕೆ `ಮಂಗಳೂರು ಸಮಾಚಾರ' ಪ್ರಕಟವಾಯಿತು. ಅಲ್ಲಿಂದ ಇಲ್ಲಿಯವರೆಗೆ ಮುದ್ರಣ ಮಾಧ್ಯಮದಲ್ಲಿ ಹಲವು ಮಹತ್ತರ ಬದಲಾವಣೆಗಳಾಗಿವೆ. ಆರಂಭದಲ್ಲಿ ಹೋರಾಟ ಮತ್ತು ಚಳುವಳಿಯ ಭಾಗವಾಗಿ ಪತ್ರಿಕೆಗಳು ಬೆಳೆದರೆ. ಪ್ರಸ್ತುತ ಉದ್ಯಮದ ಭಾಗವಾಗಿವೆ. ಪತ್ರಕರ್ತರ ಬಳಿ ಇರಬೇಕಾದ ಪತ್ರಿಕೋದ್ಯಮ, ಉದ್ಯಮದಾರರ, ಕಂಪನಿಗಳ ಕೈಗೆ ಸಿಲುಕಿದೆ. ಪತ್ರಕರ್ತರು ಅವರ ಮಾಲೀಕರ ಹಾಗೂ ಸಂಪಾದಕರ ಸೂಚನೆಯಂತೆ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಒಂದೆಡೆ ಈ ರೀತಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದರೆ, ಇನ್ನೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಆ ಅಭಿವ್ಯಕ್ತಿ ಸ್ವಾತಂತ್ರ್ಯ ಮಿತಿ ಮೀರಿದೆ. ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವೇ, ಇಲ್ಲವೇ ಎನ್ನುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಿಕಾ ರಂಗದ ಜೀವಮಾನ ಸಾಧನೆಗೆ ದಿ. ಆರ್.ಸಿ. ನಾಗಮ್ಮನವರ ಸ್ಮರಣಾರ್ಥ ನೀಡುವ ``ಸಾಧನಾ ರಾಷ್ಟ್ರೀಯ ಪ್ರಶಸ್ತಿ'' ಸ್ವೀಕರಿಸಿ ಕಾರವಾರದ `ಕರಾವಳಿ ಮುಂಜಾವು' ದಿನಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ಮಾತನಾಡಿ, ನಿರಂತರವಾಗಿ ಪ್ರಯೋಗಗಳಿಗೆ ಒಳಪಡಿಸಿದ್ದು `ಕರಾವಳಿ ಮುಂಜಾವು' ಪತ್ರಿಕೆಯ ಸಾಧನೆ. ಅದರೊಂದಿಗೆ ನಾನಿದ್ದದ್ದೆ ಪ್ರಶಸ್ತಿ ದೊರೆಯಲು ಕಾರಣ. ಪತ್ರಿಕಾ ರಂಗದಲ್ಲಿ ಪಾವಿತ್ರ್ಯತೆ ಇರಬೇಕು ಎನ್ನುವುದು ಸಹಜ ಬಯಕೆ. ಕರಾವಳಿಯ ಜನ ಪತ್ರಿಕೆಯನ್ನು ಸಂಪೂರ್ಣ ನಂಬುವಂತೆ ಕಟಿಬದ್ಧವಾಗಿ ಶ್ರಮಿಸಿದ ಫಲವೇ ಆ ಭಾಗದಲ್ಲಿ ರಾಜ್ಯಮಟ್ಟದ ಅನಾರೋಗ್ಯಕರ ಸ್ಪಧರ್ೆಗಳ ಮಧ್ಯೆಯೂ ಪತ್ರಿಕೆ ಗಟ್ಟಿಯಾಗಿ ಬೆಳೆಯಲು ಸಾಧ್ಯವಾಯಿತು.
ತಮಗೆ ಸಮಾಜ, ಜಾತಿಗಳ ಮೇಲೆ ನಂಬಿಕೆ ಇಲ್ಲ. ಸ್ವತಃ ಬೆವರಿನಿಂದಲೇ ಈ ಮಟ್ಟಕ್ಕೆ ಬೆಳೆದಿದ್ದೇನೆ. ಪತ್ರಿಕೆಯಲ್ಲಿ ಹಲವು ಪ್ರಯೋಗಗಳ ಮೂಲಕ ಜನರನ್ನು ತಲುಪಿದ್ದು, ಇನ್ನೂ ಸೃಜನಾತ್ಮಕವಾಗಿ ಪತ್ರಿಕೆ ಬೆಳೆಸುವ ಪ್ರಯತ್ನ ನಿರಂತರ ಮಾಡುತ್ತೇನೆ ಎಂದ ಅವರು ಮೋಹನ ನಾಗಮ್ಮನವರ ತಂದೆ ಹೆಸರಿನಲ್ಲಿ ಪ್ರಶಸ್ತಿ ಸಿಕ್ಕಿದ್ದು ಸಂತಸ ತಂದಿದೆ. ಪ್ರಶಸ್ತಿಗಳ ಹಣವನ್ನು ದುರ್ಬಲ ವರ್ಗದ ವಿದ್ಯಾಥರ್ಿಗಳ ಅಧ್ಯಯನಕ್ಕೆ ನೀಡುತ್ತೇನೆ. ಹಾಗೆಯೇ ಪತ್ರಿಕೆಯ ಲಾಭದಲ್ಲಿ ಇಂತಿಷ್ಟು ಹಣವನ್ನು ದುರ್ಬಲರ ಅನುಕೂಲಕ್ಕಾಗಿಯೇ ನೀಡುತ್ತೇನೆ ಎಂದರು.
ಹಿರಿಯ ಪತ್ರಕರ್ತರು, ಸಂಘದ ಅಧ್ಯಕ್ಷರೂ ಆದ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಷ್ಟ್ರೀಯ ಸಾಧನಾ ಮಹಿಳಾ ಚಿಂತನಾ ವೇದಿಕೆ ಅಧ್ಯಕ್ಷರಾದ ಡಾ. ಇಸಬೆಲ್ಲಾ ಝೇವಿಯರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಡಾ. ಎಸ್. ಬಿ. ಜೋಗುರ ಸನ್ಮಾನಿತರ ಪರಿಚಯ ಮಾಡಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ವಿಶ್ವೇಶ್ವರಿ ಹಿರೇಮಠ ಪ್ರಶಸ್ತಿಪತ್ರ ವಾಚನ ಮಾಡಿದರು. ಸಂಘದ ಕೋಶಾಧ್ಯಕ್ಷರಾದ ಕೃಷ್ಣ ಜೋಶಿ ಸ್ವಾಗತಿಸಿದರು. ದತ್ತಿದಾನಿ ಸಾಹಿತಿ, ಕ.ವಿ.ವ.ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ ನಾಗಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಜುಲೈ ತಿಂಗಳ ದತ್ತಿ ಕಾರ್ಯಕ್ರಮಗಳ ಸಂಯೋಜಕರಾದ ಬಸವಪ್ರಭು ಹೊಸಕೇರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ವಂದಿಸಿದರು. ವೀಣಾ ಚಿಕ್ಕಮಠ ಪ್ರಾರ್ಥನೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಘ ಕಾಯರ್ಾಧ್ಯಕ್ಷರಾದ ಶಿವಣ್ಣ ಬೆಲ್ಲದ, ಕಾರ್ಯಕಾರಿ ಸಮಿತಿ ಸದಸ್ಯ ಎಸ್. ಬಿ. ಗಾಮನಗಟ್ಟಿ ಹಾಗೂ ಸೇತುರಾಮ ಹುನಗುಂದ, ಬಸವಲಿಂಗಯ್ಯ ಹಿರೇಮಠ, ಕೆ. ಎಚ್. ನಾಯಕ, ನಿಜನಗೌಡ ಪಾಟೀಲ, ದೇವೆಂದ್ರಪ್ಪ ಮರಳಪ್ಪನವರ, ಹರೀಶ ನಾಯಕ ವಕೀಲರು ಹಾಗೂ ಕಾರವಾರದಿಂದ ಆಗಮಿಸಿದ ಹಿರೇಗುತ್ತಿ ಕುಟುಂಬ ವರ್ಗದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.