ಬದುಕಿನಲ್ಲಿ ಆಶಾಭಾವನೆ ಇರಬೇಕು: ಡಾ. ಅಲ್ಲಮಪ್ರಭು ಶ್ರೀಗಳು

ಬೆಳಗಾವಿ 12ಃ  ತಂದೆ, ತಾಯಿ ಹಾಗೂ ಗುರುಗಳ ಆಶೀವರ್ಾದವಿದ್ದರೆ ಜಗತ್ತನೇ ಗೆಲ್ಲಬಹುದು. ಯಶಸ್ಸನ್ನು ಕಾಣಬಹುದು. ಧನಾತ್ಮಕ ಯೋಜನೆ ಮತ್ತ ನಿರೀಕ್ಷೆಗಳಿದ್ದಲ್ಲಿ ಸಾಧನೆಗಳು ತಾನಾಗಿ ಒಲಿಯುತ್ತವೆ. ಬದುಕಿನಲ್ಲಿ ಆಶಾಭಾವನೆ ಇರಬೇಕು. ಜೀವನದ ಮೌಲ್ಯಗಳನ್ನು ರೂಪಿಸುತ್ತ ಸಮಯಪ್ರಜ್ಞೆ ಅಳವಡಿಸಿಕೊಳ್ಳಬೇಕು. ಶ್ರದ್ಧೆಯಿಂದ  ಕಲಿತು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ವಿದ್ಯಾ ಸಂಸ್ಥೆಯ ಹೆಸರನ್ನು ಬೆಳಗಿಸಬೇಕು. ಎಂದು. ರುದ್ರಾಕ್ಷಿಮಠ ನಾಗನೂರು-ಬೆಳಗಾವಿಯ ಡಾ|| ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.

    ಅಗಸಗಿ ಗ್ರಾಮದ ಆರ್.ಎ.ಪರ್ವತೆ ಪದವಿ ಪೂರ್ವ ಮಹಾವಿದ್ಯಾಲಯದ  2019-2020 ನೇ ಸಾಲಿನ ವಾಷರ್ಿಕೋತ್ಸವ ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾಥರ್ಿಗಳ ಬಿಳ್ಕೋಡುಗೆ ಹಾಗೂ ಬಹುಮಾನ ವಿತರಣಿ ಸಮಾರಂಭವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

    ನಂತರ ರಾಜಶೇಖರ ಪಟ್ಟಣಶೆಟ್ಟಿ, ಆರ್.ಜಿ.ಮಠ. ಬಿ.ಎಫ್. ಕಲ್ಲಣ್ಣವರ ಮಾತನಾಡಿದರು.  ಈ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ರುದ್ರಾಕ್ಷಿಮಠ ನಾಗನೂರು-ಬೆಳಗಾವಿಯ ಶ್ರೀ ಮ.ನಿ.ಪ್ರ. ಡಾ|| ಅಲ್ಲಮಪ್ರಭು ಮಹಾಸ್ವಾಮಿಗಳುವಹಿಸಿದರು. ಡಾ|| ವ್ಹಿ.ಎನ್.ಕೋರಧಾನ್ಯಮಠರವರು, ಆರ್.ಆರ್. ಮಧಾಳೆ ಉಪಸ್ಥಿತರಿದ್ದರು.ಎಫ್.ಬಿ.ಮೇಟಿ ಸ್ವಾಗತಿಸಿದರು. ಪಿ.ಕೆ. ಮತ್ತಿಕೊಪ್ಪ ನಿರೂಪಿಸಿದರು, ಎಸ್.ಕೆ. ಸೂಡಿ ವಂದಿಸಿದರು.