ಲೋಕದರ್ಶನ ವರದಿ
ರಾಣೇಬೆನ್ನೂರು: ಮೇ.21: ಮುಂಗಾರು ಹಂಗಾಮು ಈಗಾಗಲೇ ಆರಂಭವಾಗಿದ್ದು, ರೈತರು ಕೃಷಿ ಕಾಯಕವನ್ನು ಆರಂಭಿಸಲು ಮುಂದಾಗಿದ್ದಾರೆ. ಎಲ್ಲ ರೀತಿಯಲ್ಲಿ ಇಲಾಖೆಯು ಬೀಜ-ಗೊಬ್ಬರಗಳ ಪೂರೈಕೆಗೆ ಮುಂದಾಗಿದ್ದು, ಯಾವುದೇ ಅಭಾವ ಇಲ್ಲ ಎನ್ನುವ ಮಾಹಿತಿ ಇದೆ. ಯಾರೂ ಅಭಾವ ಇದೆ ಎನ್ನುವ ಭಾವನೆ ಇಟ್ಟುಕೊಳ್ಳಬಾರದು. ಸತತ ಬರಗಾಲದಿಂದ ರೈತ ಅಪಾರ ನಷ್ಟ ಅನುಭವಿಸಿದ್ದಾನೆ. ಈ ಬಾರಿ ಮಳೆ ಚನ್ನಾಗಿ ಆಗುವ ಬಹುನಿರೀಕ್ಷೆಯು ರೈತಸಮುದಾಯ ಹೊಂದಿದ್ದು, ಸರಿಯಾದ ರೀತಿಯಲ್ಲಿ ಕೃಷಿ ಕಾಯಕವನ್ನು ಮಾಡಲು ಮುಂದಾಗಬೇಕು ಎಂದು ಕಾಕೋಳ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಏಕನಾಥ ಬಾನುವಳ್ಳಿ ಹೇಳಿದರು.
ಅವರು ಇಲ್ಲಿನ ಪಿಬಿರಸ್ತೆಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಅಧಿಕೃತವಾಗಿ ಸಕರ್ಾರದ ರಿಯಾಯತಿ ದರದಲ್ಲಿ ಕೊಡಮಾಡುವ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಾಸಕ ಅರುಣಕುಮಾರ ಪೂಜಾರ ಅವರು ಅಧಿಕೃತವಾಗಿ ಸಹಾಯಧನದ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿ ತಾಲೂಕಿನಲ್ಲಿ ಯಾವುದೇ ರೀತಿಯಲ್ಲಿ ಕೊರತೆಯಿಲ್ಲ. ಯಾವ ರೈತರು ಮುಗಿ ಬೀಳುವ ಅವಶ್ಯಕತೆಯಿಲ್ಲ. ಉತ್ತಮ ಗುಣಮಟ್ಟದ ಬೀಜಗಳನ್ನೇ ಪಡೆಯುವ ನಿಟ್ಟಿನಲ್ಲಿ ತಾವೆಲ್ಲರೂ ಮುಂದಾಗಬೇಕು. ಯಾವುದೇ ಕಾರಣಕ್ಕೂ ಖುಲ್ಲಾ ಬೀಜಗಳನ್ನು ಪಡೆಯಬಾರದು. ಇದರಿಂದ ಆಥರ್ಿಕ ಹಾನಿಯನ್ನು ಅನುಭವಿಸಬೇಕಾಗುತ್ತದೆ. ಇಲಾಖೆ ಈಗಾಗಲೇ ಖುಲ್ಲಾ ಬೀಜ ಮಾರುವವರ ಮೇಲೆ ಸಂಪೂರ್ಣ ನಿಗಾಇಟ್ಟು ಜಾಗೃತಿ ವಹಿಸಿದೆ. ಅಂತಹವರ ಮೇಲೆ ಕ್ರಮವನ್ನು ಸಹ ಕೈಗೊಳ್ಳಲಾಗುತ್ತಿದೆ ಎಂದರು.
ಮಾತನಾಡಿದ ಸಹಾಯಕ ಕೃಷಿ ಅಧಿಕಾರಿ ನಾಗರಾಜ್ ಅಚಾರ್ ಅವರು 2020-21ನೇ ಸಾಲಿನ ಮುಂಗಾರು ಹಂಗಾಮು ಆರಂಭವಾಗಿದ್ದು, ಅದಕ್ಕಾಗಿ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲು ರೈತ ಸಂಪರ್ಕ ಕೇಂದ್ರದ ಮೂಲಕ ಇಂದು ಅಧಿಕೃತವಾಗಿ ಶಾಸಕರು ಚಾಲನೆ ನೀಡಿದ್ದಾರೆ. ಕೃಷಿ ಸಂಪರ್ಕ ಕೇಂದ್ರದಲ್ಲಿ ಶೇಂಗಾ, ಸೋಯಾಬಿನ್, ಹೆಸರು, ತೊಗರಿ, ಹೈಬ್ರಡ್ ಜೋಳ, ನವಣೆ ಸೇರಿದಂತೆ ವಿವಿಧ ಕಂಪನಿಗಳ ಮೆಕ್ಕೆಜೋಳಗಳ ಪ್ಯಾಕೆಟ್ಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ಸಾಮಾನ್ಯ ರೈತರಿಗೆ ಪ್ಯಾಕೆಟ್ಗೆ 100ರೂ., ಪರಿಶಿಷ್ಠ ಜಾತಿ-ಪರಿಶಿಷ್ಟ ಪಂಗಡಕ್ಕೆ 150 ರೂ.ಗಳ ಸಹಾಯಧನ ದೊರೆಯಲಿದೆ ಎಂದರು.ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿದರ್ೇಶಕ ಎಚ್.ಬಿ.ಗೌಡಪ್ಪಳವರ, ಜಿಪಂ ಸದಸ್ಯೆ ಗದಿಗೆವ್ವ ದೇಸಾಯಿ, ತಾ.ಪಂ. ಅಧ್ಯಕ್ಷೆ ಗೀತಾ ವಸಂತ ಲಮಾಣಿ, ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಮುಖಂಡರಾದ ಮಂಜುನಾಥ ಓಲೇಕಾರ, ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ ಸೇರಿದಂತೆ ಮತ್ತಿತರ ಗಣ್ಯರು, ರೈತರು ಪಾಲ್ಗೊಂಡಿದ್ದರು.