ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಕೊರತೆಯಿಲ್ಲ; ಧರ್ಮೆಂದ್ರ ಪ್ರಧಾನ್

ಕೊಲ್ಕತ್ತಾ,  ಜ 12:          ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಕೊರತೆಯಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೆಂದ್ರ ಪ್ರಧಾನ್   ಭಾನುವಾರ  ಹೇಳಿದ್ದಾರೆ. ಅಂತಾರಾಷ್ಟ್ರೀಯ ಬೆಳವಣಿಗೆಗಳನ್ನು ಕೇಂದ್ರ ಸರ್ಕಾರ   ಅತ್ಯಂತ ಸೂಕ್ಷ್ಮವಾಗಿ  ಗಮನಿಸುತ್ತಿದೆ ಎಂದು ಅವರು  ಸ್ಪಷ್ಟಪಡಿಸಿದರು. 

ಕಾರ್ಯಕ್ರಮವೊಂದರಲ್ಲಿ  ಭಾಗವಹಿಸಲು   ಇಲ್ಲಿಗೆ  ಆಗಮಿಸಿರುವ  ಕೇಂದ್ರ ಸಚಿವರು, ಮಾಧ್ಯಮಗೊಳಂದಿಗೆ ಮಾತನಾಡಿ,  ಮಧ್ಯಪ್ರಾಚ್ಯದಲ್ಲಿ ಸಂಘರ್ಷದ  ನಡುವೆಯೂ  ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ  ಕಚ್ಚಾ ತೈಲ ಬೆಲೆಗಳು  ಸ್ಥಿರವಾಗಿವೆ.   ಪರಿಸ್ಥಿತಿಯನ್ನು ಇನ್ನೂ ಕಾದು ನೋಡಬೇಕಾಗಿದೆ.  ಆದರೆ ಯಾವುದೇ ಭಯ ಭೀತಿ  ಪಡುವ ಆಗತ್ಯವಿಲ್ಲ  ಎಂದು ಅವರು ಸಚಿವರು  ವಿಶ್ವಾಸ ವ್ಯಕ್ತಪಡಿಸಿದರು. 

ಅಂತರರಾಷ್ಟ್ರೀಯ  ಬೆಳವಣಿಗೆಗಳನ್ನು   ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ.  ಪ್ರಮುಖವಾಗಿ, ಒಪೆಕ್, ಒಪೆಕ್  ಪ್ಲಸ್ ಮತ್ತು ಒಪೆಕ್ ಯೇತರ  ದೇಶಗಳೊಂದಿಗೆ ಕಚ್ಚಾ ತೈಲ ಬೆಲೆಗಳ ಸಂಬಂಧ  ನಿರಂತರ ಸಮಾಲೋಚನೆ ನಡೆಸುತ್ತಿದೆ  ಎಂದು ಅವರು ಹೇಳಿದರು.   

ವಿಶ್ವದ ಆರ್ಥಿಕ  ಸುಸ್ಥಿರತೆಗೆ,  ಶಾಂತಿ  ನೆಲೆಸಲು  ಶ್ರಮಿಸುವಂತೆ   ಕಚ್ಚಾ  ತೈಲ ಉತ್ಪಾದಿಸುವ ದೇಶಗಳು, ಜವಾಬ್ದಾರಿಯುತ   ರಾಷ್ಟ್ರಗಳಿಗೆ  ಭಾರತ ಮನವಿ ಮಾಡುತ್ತಿದೆ  ಎಂದು ಸಚಿವರು ಹೇಳಿದರು.