ನಿತೀಶ್ ಕಡೆಗಣಿಸುವ ಪ್ರಶ್ನೆಯೇ ಇಲ್ಲ : ಅಮಿತ್ ಶಾ

ಮುಂಬೈ, ಅ 17:     ಬಿಹಾರದಲ್ಲಿ ನಡೆಯಲಿರುವ ಉಪಚುನಾವಣೆಗಳನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಯಕತ್ವದಲ್ಲೇ ಎದುರಿಸುವುದಾಗಿ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

ಈ ಮೂಲಕ  ಬಿಜೆಪಿ ಮತ್ತು  ಜೆಡಿಯು ನಡುವೆ ಯಾವುದೇ  ಬಿಕ್ಕಟ್ಟು ಇಲ್ಲ ಮತ್ತು ಮೇಲಾಗಿ ನಿತೀಶ್ ಅವರನ್ನು ಕಡೆಗಣಿಸುವ ಪ್ರಶ್ನೆಯೂ ಇಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ.   ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶದಲ್ಲಿ  ಅಮಿತ್ ಶಾ  ಈ ವಿಷಯ ಸ್ಪಷ್ಟಪಡಿಸಿದ್ದಾರೆ 

ಇತ್ತೀಚೆಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಯು  ನಾಯಕರ  ವಾಗ್ದಾಳಿಯಿಂದ ನಿತೀಶ್  ಬಹಳ ನೊಂದು ಕೊಂಡಿದ್ದರು. ಇದನ್ನು  ಕೇಂದ್ರದ ಬಿಜೆಪಿ ನಾಯಕರು ಸರಿಪಡಿಸಬೇಕು ಎಂಬ ಅಸಮಾಧಾನದ   ಹೇಳಿಕೆ ನೀಡಿದ್ದ ಬೆನ್ನಲ್ಲೇ ಅಮಿತ್ ಶಾ ನಿಲುವು ಸಹ ಹೊರಬಿದ್ದಿದೆ. 

 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಗುಂಪು ಹಲ್ಲೆ ಘಟನೆಗಳು ಹೆಚ್ಚಾಗಿದೆ ಎಂಬ ಆರೋಪವನ್ನು ಸಹ ಸಾರಾಸಗಟಾಗಿ  ತಿರಸ್ಕರಿಸಿದ್ದಾರೆ. ಗುಂಪು ಹಲ್ಲೆ ಘಟನೆಗಳನ್ನು ಬಿಜೆಪಿ ಸರ್ಕಾರ ತನಿಖೆ ನಡೆಸಿ ಶಂಕಿತರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ನೀವು ಇದಕ್ಕೆ ರಾಜಕೀಯ ಬಣ್ಣ ಕಟ್ಟವುದು ಬೇಡ ಖಡಕ್ ಆಗಿ ಹೇಳಿದ್ದಾರೆ. 

ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಹಲವೆಡೆ ಗುಂಪು ಹಲ್ಲೆ ಘಟನೆಗಳು  ಬೆಳಕಿಗೆ ಬಂದಿವೆ. ಇವುಗಳಲ್ಲಿ ಬಹುತೇಕ ಪ್ರಕರಣಗಳು  ಗೋಹತ್ಯೆ ಅಥವಾ ಗೋಕಳ್ಳಸಾಗಾಣಿಕೆ ಪ್ರಕರಣಗಳಿಗೆ ಸಂಬಂಧಿಸಿದ್ದೇ ಆಗಿವೆ. ಕೇಂದ್ರ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಯ ನಂತರ  ಇಂಥ ಘಟನೆಗಳು ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ . 

ಗುಂಪು ಹಲ್ಲೆ ಘಟನೆಗಳ  ನಿಯಂತ್ರಣಕ್ಕೆ ಪ್ರತ್ಯೇಕ  ಕಾನೂನು ರೂಪಿಸಬೇಕೆಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಸರ್ಕಾರಕ್ಕೆ ನಿರ್ದೇಶಿಸಿದ್ದರೂ ಈವರೆಗೆ ಕೇಂದ್ರ ಈವರೆಗೆ  ಕಾನೂನು ರೂಪಿಸಿಲ್ಲ.