ಲೋಕದರ್ಶನ ವರದಿ
ಗಂಗಾವತಿ 24: ರಾಜ್ಯದಲ್ಲಿರುವ ಭ್ರಷ್ಟ ಸಮ್ಮಿಶ್ರ ಸರಕಾರವನ್ನು ತೊಲಗಿಸುವ ನಿಟ್ಟಿನಲ್ಲಿ ಆಪರೇಷನ್ ಕಮಲಕ್ಕೆ ಕೈ ಹಾಕುವದಿಲ್ಲ ಎಂದು ಬಿಜೆಪಿ ಯುವಮೋಚರ್ಾ ರಾಜ್ಯ ಪ್ರಧಾನ ಕಾರ್ಯದಶರ್ಿ ವಿಜಯೇಂದ್ರ ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಎಸ್ಎಸ್ಎಲ್ಆರ್ ಸಭಾಂಗಣದಲ್ಲಿ ಭಾನುವಾರ ಬಿಜೆಪಿ ಯುವಮೋಚರ್ಾ ರಾಜ್ಯ ಕಾರ್ಯಕಾರಣಿ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತ್ತೊಮ್ಮೆ ಮೋದಿ: 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಬಸವಕಲ್ಯಾಣದಿಂದ ಆರಂಭಗೊಂಡಿರುವ ತಮ್ಮ ಪ್ರವಾಸ ಬೀದರ, ಗುಲ್ಬಗರ್ಾ, ರಾಯಚೂರು ಜಿಲ್ಲೆಗಳನ್ನು ಮುಗಿಸಿಕೊಂಡು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದೇವೆ ಎಂದು ತಿಳಿಸಿದರು.
ರೈತರ ಸಾಲಮನ್ನಾ ಮಾಡಲಾರದ ಸರಕಾರ: ರೈತರಿಗೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಡೆಯದೆ ರೈತರಿಗೆ ದ್ರೋಹ ಎಸಗಿದ್ದಾರೆ ಎಂದು ಅವರು ಹೇಳಿದರು. ರೈತರ ಬೆಳೆ ಸಾಲ ಮನ್ನಾ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದಿರುವ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಗಳು ವಿಲಾಸಿ ಜೀವನ ಮತ್ತು ಕಾಲಹರಣ ಮಾಡುತ್ತ ದಿನಗಳನ್ನು ದೂಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲಮನ್ನಾ ಮಾಡಲು ಬಿಜೆಪಿ ಮುಖಂಡರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಮಾಡಿರುವ ಆರೋಪವನ್ನು ಅಲ್ಲಗಳೆದ ವಿಜಯೇಂದ್ರ ಜನರಿಗೆ ದಿಕ್ಕು ತಪ್ಪಿಸುವ ಕೆಲಸವನ್ನು ಕುಮಾರಸ್ವಾಮಿಯವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಉತ್ತರ ಕನರ್ಾಟಕಕ್ಕೆ ಅನ್ಯಾಯ: ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಉತ್ತರ ಕನರ್ಾಟಕಕ್ಕೆ ಅನ್ಯಾಯವಾಗಿದೆ. ಸಚಿವರಾದವರಿಗೆ ಹೊಣೆಗಾರಿಕೆಯನ್ನು ನೀಡದೆ ಮುಖ್ಯಮಂತ್ರಿಗಳು ಅವರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಯುವಮೋಚರ್ಾ ಮುಖಂಡರು ಮಾಡಬೇಕು ಎಂದು ಹೇಳಿದರು.
ಯಡಿಯೂರಪ್ಪ ಹೋರಾಟಗಾರ: ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಹೋರಾಟದ ಬದುಕಿನಿಂದ ಬಂದಿದ್ದಾರೆ. ದುರ್ಬಲ ವರ್ಗಗಳ, ರೈತರ, ಕಾಮರ್ಿಕರ ಮತ್ತು ದಲಿತರ ಪರವಾಗಿ ಹೋರಾಟ ಮಾಡುತ್ತ ಬಿಜೆಪಿ ಪಕ್ಷವನ್ನು ಸಂಘಟಿಸಿದ್ದಾರೆ ಎಂದು ಹೇಳಿದರು. ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ, ಸೈಕಲ್ ವಿತರಣೆ ಯೋಜನೆಯನ್ನು ಸಮ್ಮಿಶ್ರ ಸರಕಾರ ಸ್ಥಗಿತಗೊಳಿಸಿ ಜನರಿಗೆ ವಂಚನೆ ಮಾಡಿದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ, ಶಾಸಕ ಪರಣ್ಣ ಮುನವಳ್ಳಿ, ಯಲಬುಗರ್ಾ ಶಾಸಕ ಹಾಲಪ್ಪಾಚಾರ್, ಕುಷ್ಟಗಿ ಮಾಜಿ ಶಾಸಕ ದೊಡ್ಡನಗೌಡ, ಸಂಸದ ಸಂಗಣ್ಣ ಕರಡಿ, ಯುವಮೋಚರ್ಾ ಕಾರ್ಯದಶರ್ಿ ರಮೇಶಗೌಡ, ನವೀನ ಗುಳಗಣ್ಣನವರ್, ತಿಪ್ಪೇರುದ್ರಸ್ವಾಮಿ, ಗಿರೇಗೌಡ ಪಾಲ್ಗೊಂಡಿದ್ದರು.
ಇದಕ್ಕೂ ಮುಂಚೆ ಬಿಜೆಪಿ ಕಾರ್ಯಕರ್ತರಿಂದ ಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಯಿತು.