ಲೋಕದರ್ಶನ ವರದಿ
ಬೆಳಗಾವಿ 09: ನಗುವಿಗೆ ಯಾವ ಭಾಷೆಯಿಲ್ಲ. ಎಲ್ಲ ಭಾಷೆಯವರ ನಗೆಯು ಒಂದೇ ತೊಟ್ಟಿಲದೊಳಗಿನ ಕೂಸು ದಿನಕ್ಕೆ ಐದನೂರು ಬಾರಿ ನಗುತ್ತದೆ. ಮಕ್ಕಳು ಮುನ್ನೂರು ಬಾರಿ ನಕ್ಕರೆ ದೊಡ್ಡವರಾದ ನಂತರ ಯಾರಾದರೂ ನಗಿಸಿದರೆ ಮಾತ್ರ ನಗುತ್ತಾರೆ ಎಂದು ಸಂಶೋಧಕರು ತಮ್ಮ ಸಂಶೋಧನೆಯಿಂದ ಹೇಳುತ್ತಾರೆ.
ವಯಸ್ಸಾದವರನ್ನೂ ನಗಿಸುವಲ್ಲಿ ಇಂದಿನ ಯುವನಗೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎಂ. ಎಸ್. ಇಂಚಲ ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಹಾಗೂ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಭವನ ಸಭಾಭವನದಲಿ ಹಮ್ಮಿಕೊಳ್ಳಲಾಗಿದ್ದ ಯುವನಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ. ಎಸ್. ಇಂಚಲ ಮೇಲಿನಂತೆ ಅಭಿಪ್ರಾಯ ಪಟ್ಟ ಪ್ರೊ. ಇಂಚಲ ಮುಂದೆ ಮಾತನಾಡುತ್ತ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾಥರ್ಿನಿಯರಾದ ಕು. ಸಾವಿತ್ರಿ ಹಣಮಂತ ಮದರಖಂಡಿ, ಕು. ಸಂಜನಾ ಕೊಂಡ ಅವರ ಮಾತಿನಲ್ಲಿಯೇ ಹಾಸ್ಯವಿತ್ತು.
ಉತ್ತರ ಕನರ್ಾಟಕದ ತಿರುಳುಗನ್ನಡದ ಭಾಷಯಲ್ಲಿಯ ವಿನೋದವನ್ನ ಅವರು ತುಂಬ ಸುಂದರವಾಗಿ ಹಂಚಿಕೊಂಡರು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ ಚಿದಂಬರ ಮುನವಳ್ಳಿಯವರು ಮಾತನಾಡುತ್ತ ಬೆಳಗಾವಿ ಜನರು ನಾವು ಭಾಗ್ಯವಂತರು ಏಕೆಂದರೆ ಪ್ರತಿ ತಿಂಗಳು ನಮ್ಮನ್ನೆಲ್ಲ ನಗೆಸುತ್ತ ನೋವುಗಳನ್ನು ಮರೆಸುತ್ತ ಜನರಲ್ಲಿರುವ ಹಾಸ್ಯಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರುವ ಹಾಸ್ಯಕೂಟ ಸಂಸ್ಥೆಯನ್ನು ನಾವು ಹೊಂದಿದ್ದೇವೆ ಎಂದು ಹಾಸ್ಯಕೂಟ ಕಾರ್ಯವನ್ನು ಕೊಂಡಾಡಿದರು.
ಯುವ ಪ್ರತಿಭೆಗಳ ಮಾತಿಗೆ ಪ್ರತಿಕ್ರಿಯೆ ನೀಡಿದ ಜಿ. ಎಸ್. ಸೋನಾರ ಅವರು ಕು. ಸಂಜನಾ ಹಾಗೂ ಕು. ಸಾವಿತ್ರಿ ತುಂಬ ರಸವತ್ತಾಗಿ ಮಾತನಾಡಿ ಜನರನ್ನ ರಂಜಿಸುವಲ್ಲಿ ಯಶಸ್ವಿಯಾದರು. ವಿಜಾಪೂರ, ರಾಯಚೂರ ಜವಾರಿ ಭಾಷಯಲ್ಲಿಯ ನಗೆಯನ್ನು ತುಂಬ ನೈಜವಾಗಿ ಹಂಚಿಕೊಂಡರು. ಇವರಿಗೆ ಒಳ್ಳೇಯ ಭವಿಷ್ಯವಿದೆ.
ಬೇರೆ ಬೇರೆ ಲೇಖಕರ ಕೃತಿಗಳನ್ನು ಓದುವುದರೊಂದಿಗೆ ತಮ್ಮ ಮಾತುಗಳಲ್ಲಿ ಹಂಚಿಕೊಂಡಲ್ಲಿ ಅತ್ಯುತ್ತಮ ಭಾಷಣಕಾರರಾಗುವುದರಲ್ಲಿ ಸಂಶಯವಿಲ್ಲ. ಇವರು ರಾಜ್ಯ ಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ಎಂದು ಯುವಪ್ರತಿಭೆಗಳನ್ನ ಹಾರೈಸಿದುರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಗುಂಡೇನಟ್ಟಿ ಮಧುಕರ, ಯುವ ಪ್ರತಿಭೆಗಳಿಗಾಗಿಯೇ ಈ ಹಾಸ್ಯಕೂಟ ವೇದಿಕೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭೆಗಳು ತಮ್ಮ ಹಾಸ್ಯಭಾಷಣ, ನಗೆಹನಿ, ಅಣಕುಹಾಡು, ಮಿಮಿಕ್ರಿಗಳನ್ನು ಹಂಚಿಕೊಳ್ಳಲು ಮುಂದಾಗುವುದರ ಮೂಲಕ ನಮ್ಮ ಶ್ರಮವನ್ನು ಸಾರ್ಥಕಗೊಳಿಸಬೇಕು.
ಪ್ರತಿಭೆಯೊಂದು ವೇದಿಕೆಯ ಮೂಲಕ ಬೆಳೆದು ರಾಜ್ಯಮಟ್ಟದಲ್ಲಿ ಹೆಸರು ಮಾಡಿದಲ್ಲಿ ಅದವೇ ನೀವು ನಮಗೆ ನೀಡುವ ದೊಡ್ಡ ಬಹುಮಾನ ಎಂದು ಹೇಳಿದರು.
ಡಾ. ಬಸವರಾಜ ಜಗಜಂಪಿ, ಡಾ. ಎಚ್. ಬಿ. ರಾಜಶೇಖರ, ಪ್ರೊ. ಸ್ನೇಹಾ ಜೋಶಿ, ಅರವಿಂದ ಹುನಗುಂದ, ಡಾ. ಹೇಮಾ ಸೊನೊಳ್ಳಿ, ಶ್ರೀಮತಿ ಶಾಂತಾ ಆಚಾರ್ಯ, ಆರ್.ಬಿ. ಬನಶಂಕರಿ, ಶೋಭಾ ಬನಶಂಕರಿ ಮುಂತಾದವರು ಉಪಸ್ಥರಿದ್ದರು. ಪ್ರಾಯೋಜಕತ್ವವನ್ನು ಕೆಇಬಿ ನಿವೃತ್ತ ಮಾಪಕ ಓದುಗ ರಮೇಶ ಅನಗಳ ವಹಿಸಿಕೊಂಡಿದ್ದರು. ವಿ. ವಿ. ಹಡಗಿನಹಾಳ, ಮಲ್ಲಿಕಾಜರ್ುನ ಸುಬ್ಬಾಪೂರಮಠ ಮುಂತಾದವರು ಮಾತನಾಡಿದರು. ಕೆ. ತಾನಾಜಿ ನಿರೂಪಿಸಿದುರು.