ಬೀಜಿಂಗ್, ಏ 7,ಚೀನಾದಲ್ಲಿ ಜನವರಿ ನಂತರ ಮೊದಲ ಬಾರಿಗೆ ಸೋಮವಾರ ಕೊರೊನಾ ಸೋಂಕಿನ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ.ಸ್ಥಳೀಯವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡಿದ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಪ್ರಾಧಿಕಾರ ತಿಳಿಸಿದೆ. ಸೋಮವಾರ ಕೊರೊನಾ ಸೋಂಕಿನ 32 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಅದು ಸ್ಥಳೀಯವಾಗಿ ಹರಡಿದ ಪ್ರಕರಣಗಳಲ್ಲ. ಒಟ್ಟಾರೆಯಾಗಿ 983 ಆಮದು ಪ್ರಕರಣಗಳು ಚೀನಾದಲ್ಲಿ ಪತ್ತೆಯಾಗಿದೆ. 698 ಜನರು ಇನ್ನೂ ಚೇತರಿಸಿಕೊಂಡಿಲ್ಲ, 21 ಜನರ ಸ್ಥಿತಿ ಗಂಭೀರವಾಗಿದ್ದು 285 ಜನರು ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ. ಆರೋಗ್ಯ ಸಮಿತಿಗೆ 31 ಪ್ರಾಂತ್ಯಗಳಿಂದ ಲಭ್ಯವಾಗಿರುವ ವರದಿ ಪ್ರಕಾರ 81740 ಪ್ರಕರಣಗಳಲ್ಲಿ ಹೊಸ ಮಾದರಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದ್ದು 1242 ಜನರು ಅನಾರೋಗ್ಯದಿಂದ ಬಳಲುತ್ತಿದ್ದು 211 ಜನರ ಸ್ಥಿತಿ ಗಂಭೀರವಾಗಿದೆ. 77167 ಜನರು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ವಾಪಸ್ ಮನೆಗೆ ಕಳುಹಿಸಲಾಗಿದೆ. 3331 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಮಿತಿ ತಿಳಿಸಿದ.