ಯಶಸ್ಸಿಗೆ ಅಡ್ಡ ದಾರಿಗಳಿಲ್ಲ : ವಿದ್ಯಾರ್ಥಿಗಳಿಗೆ ಕ್ರಿಕೆಟ್ ದೇವರ ಪಾಠ

 ಮುಂಬೈ, ಅ 26:     ಕ್ರಿಕೆಟ್ ದೇವರೆಂದೇ ಆರಾಧಿಸುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮುಂಬೈನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಪಾಠ ಹೇಳಿಕೊಟ್ಟಿದ್ದಾರೆ. ಶುಕ್ರವಾರ ವೆಸ್ಟರ್ನ್ ಮಹಾರಾಷ್ಟ್ರದ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿನ್, ಜೀವನದಲ್ಲಿ ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ನಾವು ಅಂದುಕೊಂಡ ಕನಸನ್ನು ನನಸಾಗಿಸಲು ಪ್ರತಿಯೊಂದು ಹಂತದಲ್ಲೂ ಕಠಿಣ ಪರಿಶ್ರಮ ಪಡಲೇಬೇಕು ಎಂದು ಕರೆ ನೀಡಿದರು ಕ್ರಿಕೆಟ್ ಆರಂಭದ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಈ ವಿಷಯ ಪ್ರಸ್ತಾಪಿಸಿ, ಶಾಲಾ ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ನಾನು ಭಾರತ ಪ್ರತಿನಿಧಿಸಬೇಕೆಂದು ಕನಸು ಕಟ್ಟಿದ್ದೆ. ನನ್ನ ಕ್ರಿಕೆಟ್ ಜೀವನ 11ನೇ ವಯಸ್ಸಿನಿಂದ ಆರಂಭವಾಗಿತ್ತು. ನನ್ನ ಶಾಲಾ ದಿನಗಳಲ್ಲಿ ನನ್ನ ಮೊದಲನೇ ಆಯ್ಕೆ ಟ್ರಯಲ್ಸ್ ನಲ್ಲಿ ನನ್ನನ್ನು ಆಯ್ಕೆದಾರರು ಕೈಬಿಟ್ಟಿದ್ದರು. ಇನ್ನಷ್ಟು ಪರಿಶ್ರಮ ಪಟ್ಟು ಆಟವನ್ನು ಸುಧಾರಿಸಿಕೊಳ್ಳುವ ಅಗತ್ಯವಿದೆ ಎಂದು ಆಯ್ಕೆದಾರರು ನನಗೆ ಸಲಹೆ ನೀಡಿದ್ದರು ಎಂದು ವಿದ್ಯಾರ್ಥಿಗಳೊಂದಿಗೆ ಹಳೆಯ ನೆನಪುಗಳನ್ನು ಸಚಿನ್ ಮೆಲುಕು ಹಾಕಿದ್ದರು. ನಾನು ಆ ವೇಳೆ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದರೂ  ನನ್ನನ್ನು ಆಯ್ಕೆದಾರರು ಆಯ್ಕೆ ಮಾಡಲಿಲ್ಲ. ಇದು ನನಗೆ ಅತೀವ ಬೇಸರ ತಂದಿತ್ತು. ತದನಂತರ ನನ್ನ ಸಾಮಥ್ರ್ಯಕ್ಕೆ ತಕ್ಕಂತೆ ಇನ್ನಷ್ಟು ಕಠಿಣ ಪರಿಶ್ರಮ ಪಡಬೇಕೆಂದು ನಿರ್ಧರಿಸಿದೆ. ನಿಮ್ಮ ಕನಸು ನನಸಾಬೇಕಾದರೆ ಅಡ್ಡದಾರಿಗಳನ್ನು ಹಿಡಯಬಾರದು ಕಠಿಣ ಪರಿಶ್ರಮ ಪಟ್ಟರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕ್ರಿಕೆಟ್ ದೇವರು ಪಾಠ ಮಾಡಿದರು. ಎರಡೂವರೆ ದಶಕ ಕ್ರಿಕೆಟ್ ವೃತ್ತಿ ಜೀವನದಲ್ಲಿ 200 ಟೆಸ್ಟ್, 463 ಏಕದಿನ ಪಂದ್ಯಗಳಿಂದ ಕ್ರಮವಾಗಿ 15, 921 ಮತ್ತು 18,426 ರನ್ ದಾಖಲಿದ್ದಾರೆ. ನನ್ನ ಕ್ರಿಕೆಟ್ ಯಶಸ್ಸಿನ ಶ್ರೇಯ ನನ್ನ ಕುಟುಂಬ ಹಾಗೂ ಬಾಲ್ಯದ ಕೋಚ್ ರಮಾಕಾಂತ್ ಅರ್ಚ್ಕರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಕ್ರಿಕೆಟ್ ಆರಂಭದ ದಿನಗಳಲ್ಲಿ ನನ್ನ ಕುಟುಂಬದ ಎಲ್ಲರೂ ಸಹಕರಿಸಿದ್ದರು. ಆದರೆ, ನನ್ನ ಸಹೋದರರಾದ ಅಜಿತ್ ಹಾಗೂ ನಿತಿನ್ ಅವರು ಸಹಕಾರ ಇರಲಿಲ್ಲ. ಆದರೆ, ನನ್ನ ಹಿರಿಯ ಸಹೋದರಿ ನನಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದರು. ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ನನ್ನ ಸಹೋದರಿಯೇ ಬ್ಯಾಟ್ ಅನ್ನು ಕೊಡುಗೆಯಾಗಿ ನೀಡಿದ್ದರು. ಇದೀಗ ಅವರು ಮದುಯೆಯಾಗಿ ಪುಣೆಯಲ್ಲಿ ನೆಲೆಸಿದ್ದಾರೆ ಎಂದು ಶಾಲಾ ಮಕ್ಕಳೊಂದಿಗೆ ಸಚಿನ್ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಬದುಕನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.