ಬಾಗಲಕೋಟೆ13: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ 524.256 ಮೀಟರ್ ಎತ್ತರದಿಂದ ಮುಳುಗಡೆಯಾಗುವ ಒಟ್ಟು 20 ಗ್ರಾಮಗಳಿಗೆ ತಡೆಗೋಡೆ ಇರುವುದಿಲ್ಲವೆಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ, ಪುನರ್ ನಿರ್ಮಾಣ ಮತ್ತು ಭೂಸ್ವಾಧೀನ ಹಾಗೂ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಳುಗಡೆಯಾಗುವ ಒಟ್ಟು 20 ಗ್ರಾಮಗಳ ಪೈಕಿ 11 ಗ್ರಾಮಗಳಿಗೆ ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು, ಆದರೆ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸುವುದು ಅವಶ್ಯವಿರುವದಿಲ್ಲ. ಈ ಯೋಜನೆಯನ್ನು ಕೈಬಿಟ್ಟು 20 ಗ್ರಾಮಗಳನ್ನು ಸ್ಥಳಾಂತರಿಸಲು ಅಧಿಸೂಚನೆ ಹೊರಡಿಸಿ ಸ್ಥಳಾಂತರ ಮಾಡುವುದು ಸರಕಾರದ ನಿರ್ಧಾರ ರವಾಗಿದೆ ಎಂದು ತಿಳಿಸಿದರು.
ಮುಳುಗಡೆಯಾದ 20 ಗ್ರಾಮಗಳಿಗೆ ಬೇಕಾಗುವ ಪುನರ್ರ್ವಸತಿ ನಿರ್ಮಾಣಕ್ಕೆ ಭೂಮಿ ಮತ್ತು ಸ್ಥಳಾಂತಗೊಳ್ಳುವ ಕುಟುಂಬಗಳಿಗೆ ಪರಿಹಾರ ನೀಡಲು ನೋಟಿಪೇಕಶನ್ ನೀಡಲು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು. ಬರುವ ಮಾರ್ಚ ಅಂತ್ಯಕ್ಕೆ ಎಲ್ಲ ನೋಟಿಪಿಕೇಶನ್ಗಳು ಪೂರ್ಣಗೊಳಿಸಬೇಕು. ಹಿಂದೆ ಮಾಡಿದ ತಪ್ಪಿನಿಂದ ಕೆಲವೊಂದು ಗ್ರಾಮಗಳ ಜಂಟಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.
ಹಂಚಿಕೆಯಾದಂತ 173 ಟಿ.ಎಂ.ಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲಿಕ್ಕೆ ಸರಕಾರ ಬದ್ದವಾಗಿದೆ. ಚಿಕ್ಕೂರ ಚಿತ್ರಬಾನುಕೋಟಿಎ ಹಾಗೂ ಆಲಗುಂಡು, ಮಾಚಕನೂರು, ಬುದ್ನಿ ಬಿಕೆ ಸೇರಿದಂತೆ ಯಾವುದೇ ಗ್ರಾಮಗಳಲ್ಲಿ ತಡೆಗೋಡೆ ಬೇಡವೆಂದು ತಿಳಿಸಿದರು. ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ವಿವಿಧ ಕಾಮಗಾರಿಗಳಿಗೆ ಒಟ್ಟು 577 ಕೋಟಿ ಕ್ರೀಯಾ ಯೋಜನೆಗೆ ಮಂಜೂರಾಗಿದ್ದು, ಈ ಪೈಕಿ 236 ಕೋಟಿ ರೂ. ಖಚರ್ಾಗಿದೆ. ಈ ತಿಂಗಳು ಇನ್ನು 15 ಕೋಟಿ ರೂ. ಖಚರ್ುಆಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ 86 ಸ್ಪಿಲ್ ಓವರ್ ಕೆಲಸಗಳ ಪೈಕಿ 23 ಮಾತ್ರ ಪ್ರಗತಿಯಲ್ಲಿರುವದನ್ನು ತಿಳಿಸ ಉಪ ಮುಖ್ಯಮಂತ್ರಿಗಳು ಯಾವುದೇ ಕೆಲಸಗಳಿಗೆ ವಿಳಂಬ ದೋರಣೆ ಅನುಸರಿಸದೇ ಪ್ರಗತಿ ಚುರುಕಾಗಿ ನಡೆಸಬೇಕು ಎಂದರು. ಯುಕೆಪಿಯ ಮುಖ್ಯ ಅಭಿಯಂತರರಿಗೆ ಕೇವಲ 10 ಲಕ್ಷ ರೂ.ಗಳ ಮಂಜೂರಾತಿಗೆ ಮಾತ್ರ ಅಧಿಕಾರವಿದ್ದು, ಉಳಿದಿದ್ದು, ವ್ಯವಸ್ಥಾಪಕ ನಿದರ್ೇಶಕರಿಗೆ ಇದೆ. ಆದ್ದರಿಂದ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಇದ್ದಂತೆ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಮುಖ್ಯ ಅಭಿಯಂತರರಿಗೂ ಹೆಚ್ಚಿನ ಹಣಕಾಸಿನ ಅಧಿಕಾರ ನೀಡುವಂತೆ ತಿಳಿಸಿದಾಗ ಈ ಕುರಿತು ಸರಕಾರಕ್ಕೆ ಇಂದೇ ಪತ್ರ ಬರೆಯಲಾಗುವುದೆಂದು ಕಾರಜೋಳ ತಿಳಿಸಿದರು.
ಆರ್ & ಆರ್ ಬಿಡುಗಡೆಯಾದ ಅನುದಾನವನ್ನು ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿಗಳ ಖಾತೆಗೆ ಹಣ ವಗರ್ಾವಣೆ ಮಾಡಲು ಸೂಚಿಸಿದರು. ಪುನರ್ವಸತಿ ಮತ್ತು ಪುನರ್ನಿಮರ್ಾಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇರುವ ಒಟ್ಟು 137 ಪುನರ್ರ್ವಸತಿ ಕೇಂದ್ರಗಳ ಪೈಕಿ ಈಗಾಗಲೇ 31 ಕೇಂದ್ರಗಳನ್ನು ಹಸ್ತಾಂತರಿಸಲಾಗಿದೆ. ಉಳಿದ 106 ಕೇಂದ್ರಗಳ ಪೈಕಿ 101 ಹಸ್ಥಾಂತರಿಸಲಾಗಿದ್ದು, 6 ಕೆಂದ್ರಗಳು ಹಸ್ತಾಂತರಕ್ಕೆ ಬಾಕಿ ಉಳಿದಿವೆ ಎಂದರು.
ಹಸ್ತಾಂತರಿಸಲಾದ ಪುನರ್ರ್ವಸತಿ ಕೇಂದ್ರಗಳ ಅಭಿವೃದ್ದಿಗೆ ಜಿಲ್ಲಾ ಪಂಚಾಯತಿಗೆ ಒಟ್ಟು 106 ಕೋಟಿ ರೂ. ಈವರೆಗೆ ನೀಡಲಾಗಿದೆ. ನಗರ ಪ್ರದೇಶದ ಹತ್ತಿರದ ಪುನರ್ವಸತಿ ಕೇಂದ್ರಗಳಿಗೆ ಶಾಸ್ವತ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಆಗಬೇಕು ಅದಕ್ಕಾಗಿ ಈಗಲೇ ಕ್ರೀಯಾಯೋಜನೆ ರೂಪಿಸಿ ಪ್ರಸ್ತಾವನೆ ಸಿದ್ದಗೊಳಿಸಲು ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು. ಕೆಲವೊಂದು ಪುನರ್ರ್ವಸತಿ ಕೇಂದ್ರಗಳಲ್ಲಿ ಜನ ಸ್ಥಳಾಂತರಗೊಳ್ಳದ ಹಿನ್ನಲೆಯಲ್ಲಿ ಮುಳ್ಳು ಜಾಲಿ ಬೆಳೆದಿದೆ. ಅದನ್ನು ಸ್ವಚ್ಚಗೊಳಿಸಲು ಸೂಚಿಸಿದರು.
ಜಂಟಿ ಮೋಜನಿಯಲ್ಲಿ ಅಧಿಕಾರಿಗಳು ಮತ್ತು ಅಭಿಯಂತರರು ಜವಾಬ್ದಾರಿಯಿಂದ ಮಾಡಬೇಕು. ಯಾವುದೇ ರೀತಿಯಲ್ಲಿ ತಪ್ಪು ಮಾಡಬೇಡಿ, ಮಾಡಿದಲ್ಲಿ ನಿದರ್ಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು. ಆಸ್ತಿ ಕಳೆದುಕೊಂಡವರು ಬೇರೆಡೆ ಮನೆ ಕಟ್ಟಿಕೊಳ್ಳಬೇಕಾಗಿರುತ್ತದೆ. ಆದ್ದರಿಂದ ಜಂಟಿ ಮೋಜಣಿಯಲ್ಲಿ ಯಾವುದೇ ರೀತಿಯಲ್ಲಿ ತಪ್ಪು ಮಾಹಿತಿ ನೀಡಬಾರದು. ಟೈಮ್ ಬಾಂಡ್ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆಯಬೇಕು ಎಂದರು. ಮೂರುವರೆ ವರ್ಷದಲ್ಲಿ ಈ ಯೋಜನೆ ಪೂರ್ಣಗೊಳಿಸಿ ನೀರನ್ನು ಸದ್ಬಳಕೆಯಾಗುವಂತೆ ಮಾಡಬೇಕಾಗಿದೆ ಎಂದರು.
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಿದ ಪುನರ್ವಸತಿ ಕೇಂದ್ರಗಳನ್ನು ಪುನಃ ಯುಕೆಪಿಗೆ ಹಸ್ತಾಂತರಿಸಬೇಕು. ಗ್ರಾಮ ಪಂಚಾಯತಿಯಿಂದ ಪುನರ್ವಸತಿ ಕೇಂದ್ರಗಳ ನಿರ್ವಹಣೆ ಸಾಧ್ಯವಾಗುವದಿಲ್ಲ. ಗ್ರಾಮ ಪಂಚಾಯತಿಯಲ್ಲಿ ಅಷ್ಟೊಂದು ಅನುದಾನ ಇರುವದಿಲ್ಲವೆಂದರು. ನಿರ್ವಹಣೆಗೆ ಗ್ರಾಮ ಪಂಚಾಯತಿ ಬದಲಾಗಿ ಜಲಸಂಪನ್ಮೂಲ ಇಲಾಖೆಗೆ ಒಪ್ಪಿಸುವುದು ಸೂಕ್ತವೆಂದರು. ಪ್ರತಿಯೊಂದು ಪುನರ್ವಸತಿ ಕೇಂದ್ರಗಳನ್ನು ಹಸ್ತಾಂತರಿಸಿದರೆ ಸಾಲದು ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಹಾಗೂ ಅಭಿಯಂತರರು ಉಪಸ್ಥಿತರಿದ್ದರು.