ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯತೆಯನ್ನು ತರುವ ಆಂದೋಲನದ ಅಗತ್ಯವಿದೆ: ಡಾ. ಮೀನಾ ಚಂದಾವರಕರ

ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯತೆಯನ್ನು ತರುವ ಆಂದೋಲನದ ಅಗತ್ಯವಿದೆ: ಡಾ. ಮೀನಾ ಚಂದಾವರಕರ  There is a need for a movement to bring Indianness into the education system: Dr. Meena Chandavarak

ಲೋಕದರ್ಶನ ವರದಿ 

ಬಾಗಲಕೋಟೆ 17: ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯತೆಯನ್ನು ತರುವ ಆಂದೋಲನದ ಅಗತ್ಯವಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನವಾಗಬೇಕು ಎಂದು ಅಖಿಲ ಭಾರತೀಯ ಶಿಕ್ಷಣ ಮಂಡಲದ ಸಂಯುಕ್ತ ಮಹಾಮಂತ್ರಿ ಡಾ. ಮೀನಾ ಚಂದಾವರಕರ ಹೇಳಿದರು.  

ನಗರದ ಬಿವಿವಿಎಸ್ ಪಾಲಿಟೆಕ್ನಿಕ್ ಸಭಾಭವನದಲ್ಲಿ ಶುಕ್ರವಾರ ನಡೆದ ಭಾರತೀಯ ಶಿಕ್ಷಣ ಮಂಡಲ ಬಾಗಲಕೋಟೆ ಜಿಲ್ಲಾ ಘಟಕದ 2026ಹಿ28್ಫೂ ಸಾಲಿನ ಜಿಲ್ಲಾ ಕಾರ್ಯಕಾರಿಣಿ ಘೋಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

 ಬೆಳಿಗ್ಗೆ ಹತ್ತರಿಂದ ಸಂಜೆ ಐದರ ತನಕ ನಡೆಯುವ ಪಾಠ ಪ್ರವಚನವೇ ಶಿಕ್ಷಣವಲ್ಲ. ಅದು ಬದುಕಿನ ವ್ಯಾಪಕ ಪ್ರಕ್ರಿಯೆ. ಬದುಕಿಗೆ ಇಂಗ್ಲಿಷ್ ಅನಿವಾರ್ಯ ಎಂಬ ತಪ್ಪುಕಲ್ಪನೆಯನ್ನು ಸಮಾಜದಲ್ಲಿ ಬಿತ್ತಲಾಗಿದೆ. ವ್ಯವಹಾರಕ್ಕೆ ಇಂಗ್ಲಿಷ್ ಅಗತ್ಯವಾದರೂ, ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ನಡೆಯಬೇಕು’ ಎಂದು ಹೇಳಿದರು.  

 ಪ್ರಶ್ನಿಸುವ ಗುಣವೇ ಭಾರತದ ಪ್ರಾಚೀನ ಪರಂಪರೆಯ ಅಂತಃಸತ್ವ. ಭಾರತದಷ್ಟು ಉದಾರವಾದ ಶಿಕ್ಷಣ ಪರಿಕಲ್ಪನೆ ಜಗತ್ತಿನ ಬೇರೆ ಯಾವ ನಾಗರಿಕತೆಯಲ್ಲೂ ಇಲ್ಲ. ಇದನ್ನು ಪ್ರತಿಪಾದಿಸುವ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ ಅಗತ್ಯ’ ಎಂದರು.  

ಮುಖ್ಯ ಅತಿಥಿಯಾಗಿ ಮಾತನಾಡಿದ ಬಸವರಾಜ ಯಂಕಂಚಿ, ‘ಗುರುಕುಲ ಪದ್ಧತಿ ಭಾರತದ ಅತ್ಯಂತ ಪ್ರಾಚೀನ ಶಿಕ್ಷಣ ವ್ಯವಸ್ಥೆಯಾಗಿದ್ದು, ಅದನ್ನು ಇಂದಿಗೂ ಮುಂದುವರಿಸುವ ಅಗತ್ಯವಿದೆ’ ಎಂದು ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಭಾರತೀಯ ಶಿಕ್ಷಣ ಮಂಡಲ ಜಿಲ್ಲಾ ಅಧ್ಯಕ್ಷ ಎಸ್‌.ಆರ್‌. ಮನಹಳ್ಳಿ ಮಾತನಾಡಿ, ‘ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಬೋಧನೆಗಿಂತ ಕಲಿಕೆಗೆ ಹೆಚ್ಚಿನ ಮಹತ್ವ ಇದೆ. ಶಿಕ್ಷಣವು ಮಾಹಿತಿ, ವ್ಯಾಖ್ಯಾನ ಮತ್ತು ವಿಮರ್ಶೆಯ ಹಂತವನ್ನು ದಾಟಿ ಸೌಂದರ್ಯಶಾಸ್ತ್ರದ ಹಂತದವರೆಗೆ ವಿಸ್ತರಿಸಿಕೊಂಡಿದೆ. ಆತ್ಮನಿರ್ಭರತೆಯನ್ನು ಸಾಧಿಸುವುದೇ ಶಿಕ್ಷಣದ ಉದ್ದೇಶ’ ಎಂದು ಅಭಿಪ್ರಾಯಪಟ್ಟರು.  

ಪಾಲಿಟೆಕ್ನಿಕ್ ಪ್ರಾಚಾರ್ಯ ಎಂ.ಎಸ್‌. ಮಾಟೂರ ಉಪಸ್ಥಿತರಿದ್ದರು. ಗೀತಾ ಕಂಚಿ ಧ್ಯೇಯ ಶ್ಲೋಕ ಹೇಳಿದರು. ಸುಷ್ಮಾ ಒಡೆಯರ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಎಲ್‌.ಜಿ. ವೈದ್ಯ ವಂದಿಸಿದರು. ಅರುಣಾ ರಘುವೀರ್ ಶಾಂತಿ ಮಂತ್ರ ಪಠಿಸಿದರು.  

ಕಾರ್ಯಕ್ರಮದಲ್ಲಿ ಡಾ. ಅರುಣ ಹೂಲಿ, ಡಾ. ಜಗನ್ನಾಥ ಚವ್ಹಾಣ, ಡಾ. ರವಿ ಕೋಟೆನ್ನವರ, ಡಾ. ಜಿ.ಐ. ನಂದಿಕೋಲ್ಮಠ, ಡಾ. ಬಸವರಾಜ ಕುಂಬಾರ, ಡಾ. ಆರ್‌.ಎಂ. ಕುಲಕರ್ಣಿ ಸೇರಿದಂತೆ ಭಾರತೀಯ ಶಿಕ್ಷಣ ಮಂಡಲದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. 