ಗುರಿ ಸಾಧನೆಗೆ ಸಕಾರಾತ್ಮಕ ಚಿಂತನೆ ಅತ್ಯಗತ್ಯ ದ್ವಾರಕೀಶ್ ರೆಡ್ಡಿ

ಗುರಿ ಸಾಧನೆಗೆ ಸಕಾರಾತ್ಮಕ ಚಿಂತನೆ ಅತ್ಯಗತ್ಯ ದ್ವಾರಕೀಶ್ ರೆಡ್ಡಿ   Positive thinking is essential to achieve goals: Dwarakish Reddy

ಲೋಕದರ್ಶನ ವರದಿ 

ಹೂವಿನಹಡಗಲಿ 17:  ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ, ಶಿಸ್ತು, ಆತ್ಮವಿಶ್ವಾಸ ಮತ್ತು ಸಮಯ ಪಾಲನೆಯನ್ನು ಜೀವನದಲ್ಲಿ ಅಳವಡಿಸಿ ಕೊಂಡಾಗ ಗುರಿ ಸಾಧನೆಗೆ ಸಾದ್ಯ ಎಂದು ಶಿಕ್ಷಕ ಎಸ್‌. ದ್ವಾರಕೀಶ್ ರೆಡ್ಡಿ ಹೇಳಿದರು.

ಪಟ್ಟಣದ  ದಿ ಬೆಸ್ಟ್‌  ಕೋಚಿಂಗ್ ಸೆಂಟರ್ನಲ್ಲಿ  ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ದಲ್ಲಿ ಮಾತನಾಡಿನಿರಂತರ ಅಭ್ಯಾಸ, ಕಠಿಣ ಪರಿಶ್ರಮ, ಏಕಾಗ್ರತೆ ಹಾಗೂ ಸಕಾರಾತ್ಮಕ ಚಿಂತನೆ ಅಗತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ  ದಿ  ಬೆಸ್ಟ್‌  ಕೋಚಿಂಗ್ ಸೆಂಟರ್ನ  ಸಂಸ್ಥಾಪಕರಾದ  ಮುರ್ತಜ  ಎಂ, ಇಕ್ಬಾಲ್ ಅಹ್ಮದ್  ಎಂ ಸೇರಿದಂತೆ    ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.