ಪುಣೆ, ಅ. 13: ಭಾರತ ತಂಡದ ವೇಗಿ ಜಸ್ಪ್ರಿತ್ ಬುಮ್ರಾ ಅವರು ಗಾಯದಿಂದ ಬಳಲುತ್ತಿದ್ದು, ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಉಮೇಶ್ ಯಾದವ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಇಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 137 ರನ್ ಗಳಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ಅಲ್ಲದೆ ಮೂರು ಪಂದ್ಯಗಳ ಸರಣಿಯನ್ನು, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ವಶಕ್ಕೆ ಪಡೆದುಕೊಂಡಿದೆ. ಮೊದಲ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ತಲಾ ಮೂರು ವಿಕೆಟ್ ಪಡೆದಿರುವ ಉಮೇಶ್ ಅಬ್ಬರಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಉಮೇಶ್, "ವೇಗದ ಬೌಲರ್ಗಳಲ್ಲಿ ತಂಡದಲ್ಲಿ ಸಾಕಷ್ಟು ಸ್ಪರ್ದೆ ಇದೆ. ಸಿಕ್ಕ ಅವಕಾಶವನ್ನು ಬಳಿಸಿಕೊಳ್ಳುವುದನ್ನು ಅರಿತಿದ್ದೇ. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅದ್ಭುತ್ ಕೀಪಿಂಗ್ ಮಾಡಿದ್ದಾರೆ. ನನಗೆ ಲಭಿಸಿದ ವಿಕೆಟ್ ಗಳ ಶ್ರೇಯ ಅವರಿಗೂ ಸಲ್ಲುತ್ತದೆ' ಎಂದಿದ್ದಾರೆ.
ನಾನು ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ. ಅಲ್ಲದೆ ಭಾರತದ ಪಿಚ್ ಗಳಲ್ಲಿ ಬೌಲಿಂಗ್ ಮಾಡುವ ಮರ್ಮ ಗೊತ್ತು. ವಿಕೆಟ್ ಪಡೆಯಲು ಮಾಡಿಕೊಂಡ ಯೋಜನೆಗಳೆಲ್ಲಾ ಫಲಿಸಿವೆ ಎಂದು ಹೇಳಿದ್ದಾರೆ.