ರಾಮನಗರ ಸೇರಿ ರಾಜ್ಯದಲ್ಲಿ 67 ಹೊಸ ಕೊರೋನಾ ಪ್ರಕರಣಗಳು, ಸೋಂಕಿತರ ಸಂಖ್ಯೆ 2158ಕ್ಕೇರಿಕೆ

ಬೆಂಗಳೂರು, ಮೇ 25,ರಾಜ್ಯದಲ್ಲಿ ಹೊಸದಾಗಿ 69 ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರಿಂದ ಸೋಂಕಿತರ ಒಟ್ಟು ಸಂಖ್ಯೆ 2158ಕ್ಕೇರಿಕೆಯಾಗಿದೆ. ಹಸಿರು ವಲಯವಾಗಿದ್ದ ರಾಮನಗರದಲ್ಲಿ ಕೂಡ ಸೋಂಕು ಕಾಣಿಸಿಕೊಂಡಿದೆ.ಕಲಬುರಗಿ 14, ಯಾದಗಿರಿ 15, ಉಡುಪಿಯಲ್ಲಿ 16, ಮಂಡ್ಯ 2, ಬಳ್ಳಾರಿ 3, ಬೆಂಗಳೂರು ನಗರ 6, ಧಾರವಾಡ 3 ಬೆಳಗಾವಿ, ಬೀದರ್, ಕೋಲಾರ,ವಿಜಯಪುರ, ತುಮಕೂರು ಜಿಲ್ಲೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 55 ವರ್ಷದ ನಿವಾಸಿ ಭಾನುವಾರ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ತೀವ್ರ ಉಸಿರಾಟದ ತೊಂದರೆಯಿಂದ ಮೇ 19ರಂದು ಆಸ್ಪತ್ರೆಗೆ ದಾಖಲಾಗಿದ್ದರು.