ನಗದು,ಬಂಗಾರದ ಆಭರಣ ಕಳ್ಳತನ

ಶಿಗ್ಗಾವಿ 27: ಪಟ್ಟಣದ ಬಸವನಗರದ ರಾಣಿ ಚನ್ನಮ್ಮ ಲೇಔಟ್ನ ಮನೆಗಳಲ್ಲಿದ್ದ ನಗದು ಮತ್ತು ಬಂಗಾರದ ಆಭರಣ ಸೇರಿ ಲಕ್ಷಾಂತರ ರೂ. ಕಳ್ಳತನವಾದ ಘಟನೆ ಮಂಗಳವಾರ ಸಂಜೆ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ.

ಬಸವನಗರದ ಅಣ್ಣಪ್ಪ ಶೇರೆವಾಡ ಮತ್ತು ಅವರ ಸೊಸೆಯ ಮನೆಯ ಬಾಗಿಲದ ಚೀಲಕ ಮುರಿದು ಅಲ್ಮೇರಾ ದಲ್ಲಿದ್ದ ಒಟ್ಟು 1.20ಲಕ್ಷ ರೂ. ಮೊತ್ತದ ಬಂಗಾರದ ಆಭರಣ ಮತ್ತು 1.67 ಲಕ್ಷ ರೂ. ನಗದನ್ನು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಈ ಕುರಿತು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.