2019ನೇ ವರ್ಷ ನನ್ನ ಪಾಲಿಗೆ ಅತ್ಯಂತ ಕಠಿಣವಾಗಿತ್ತು: ಕುಲ್ದೀಪ್ ಯಾದವ್

ಪುಣೆ, ಜ 9            ಕಳೆದ 2019ನೇ ವರ್ಷ ನನ್ನ ಪಾಲಿಗೆ ಅತ್ಯಂತ ಕಠಿಣವಾಗಿತ್ತು. ಆದರೆ, ಪ್ರಸಕ್ತ ವರ್ಷದ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಲು ತನ್ನಲ್ಲಿರುವ ನ್ಯೂನತೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿರುವುದಾಗಿ ಭಾರತ ತಂಡದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ತಿಳಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಮೂರನೇ ಟಿ-20 ಪಂದ್ಯದ ನಿಮಿತ್ತ ಮಾತನಾಡಿದ ಅವರು, 2019ನೇ ವರ್ಷ ನನಗೆ ಕಠಿಣವಾಗಿತ್ತು. ನಾನು ಬಹಳಷ್ಟು ವಿಷಯಗಳನ್ನು ಕಲಿಯುತ್ತಿದ್ದೇನೆ ಹಾಗೂ ಧನಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದೇನೆ, ಎಂದರು.

ನನಗೆ ಹೆಚ್ಚಿನ ಸಮಯ ನೀಡಿದ್ದರೆ, ಹೆಚ್ಚು  ಯೋಚಿಸಿ ಇನ್ನು ಉತ್ತಮ ಪ್ರದರ್ಶನ ನೀಡಬಹುದಿತ್ತು. 2020ರಲ್ಲಿ ಪ್ರತಿಯೊಂದು ಪಂದ್ಯದಲ್ಲಿ ಅತ್ಯುತ್ತಮ ಯೋಜನೆ ರೂಪಿಸಲು ಪ್ರಯತ್ನಿಸುತ್ತೇನೆ. ಇದಕ್ಕಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತೇನೆ. ಮುಂದಿನ ಪಂದ್ಯೆಕ್ಕೆ ನೀವು ಹೆಚ್ಚಿನ ಸಮಯ ನೀಡಬೇಕು. ಆ ಮೂಲಕ ಈ ವರ್ಷ ಮಾನಸಿಕವಾಗಿ ಸಿದ್ಧವಾಗಲು ಬಯಸುತ್ತೇನೆ, ಎಂದು ತಿಳಿಸಿದರು. 

ಕುಲ್ದೀಪ್ ಯಾದವ್ ಹೇಗೆ ಬೌಲಿಂಗ್ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಚೈನಾಮನ್, ತಪ್ಪು ಎಸೆತ, ಫ್ಲಿಪರ್ಗಳನ್ನು ಹೊಂದಿದ್ದಾರೆ. ನನ್ನ ಬೌಲಿಂಗ್ನಲ್ಲಿ ಹೆಚ್ಚು ಬದಲಾವಣೆ ತರಬೇಕಾಗಿದೆ. ಇದನ್ನು ಯಾವುದೇ ಬ್ಯಾಟ್ಸ್ಮನ್ ಕಂಡುಹಿಡಿಯಲು ಸಾಧ್ಯವಾಗಬಾರದು, ಎಂದು ಅವರು ಹೇಳಿದರು.

 ಪ್ರಸ್ತುತ ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ-20 ನಡೆಯುತ್ತಿದೆ. ಗುವಾಹಟಿಯಲ್ಲಿ ಮೊದಲನೇ ಪಂದ್ಯ ಮಳೆಗೆ ಬಲಿಯಾಗಿದೆ. ಎರಡನೇ ಪಂದ್ಯದಲ್ಲಿ ಭಾರತ ಜಯ ಸಾಧಿಸಿದ್ದು, 1-0 ಮುನ್ನಡೆ ಸಾಧಿಸಿದೆ. ಮೂರನೇ ಹಾಗೂ ಅಂತಿಮ ಟಿ-20 ಪಂದ್ಯ ನಾಳೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ.