ಕುರುಗೋಡು 09: ಪಟ್ಟಣದ ಕಂಪ್ಲಿ ರಸ್ತೆಯಲ್ಲಿನ ಕೆರೆಯ ಮುಂಬಾಗದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮೂರು ಮೂರ್ತಿಗಳ ಧ್ವಂಸ ಪ್ರಕರಣ ಸಂಬಂದಿಸಿದ ಆರೋಪಿಗಳಿಗಾಗಿ ತೀವ್ರ ತನಿಖೆ ಆರಂಭಿಸಲಾಗಿದೆ ಎಂದು ಬಳ್ಳಾರಿ ಗ್ರಾಮೀಣ ಡಿವೈಎಸ್ಪಿ ಅರುಣ್ಕುಮಾರ್ ಜಿ.ಕೋಳೂರು ಸ್ಪಷ್ಟಪಡಿಸಿದರು.
ಅವರು ಪಟ್ಟಣದ ಪೋಲಿಸ್ ಠಾಣೆಗೆ ಭಾನುವಾರ ಬೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸೆ.3 ರಂದು ಮಂಗಳವಾರ ರಾತ್ರಿ ಕುರುಗೋಡಿನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಗಣೆಶ್, ಅಯ್ಯಪ್ಪಸ್ವಾಮಿ ಮತ್ತು ಸುಬ್ರಮಣ್ಯ ಮೂರ್ತಿಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಪರಾರಿಯಾಗಿದ್ದರು. ದೇವಸ್ಥಾನದ ಸಮಿತಿಯವರು ಪ್ರಕರಣ ದಾಖಲಾಗಿಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರಿಂದ ತೀವ್ರ ತನಿಖೆ ಚುರುಕುಗೊಂಡಿದೆ ಎಂದು ತಿಳಿಸಿದ್ದಾರೆ.
ಕುರುಗೋಡು ಪೊಲೀಸರು ಪ್ರಕರಣಕ್ಕೆ ಸಂಬಂದಪಟ್ಟಂತೆ ಅನುಮಾಸ್ಪದವಾಗಿ ಕಂಡುಬಂದ ಸುಮಾರು 6 ಮಂದಿಯನ್ನು ಕರೆತಂದು ವಿಚಾರಣೆ ನಡೆಸಲಾಗಿದೆ. ಆದ್ದರಿಂದ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡದೇ ಪತ್ತೆ ಹಚ್ಚುತ್ತೇವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕುರುಗೋಡು ಪಿಎಸ್ಐ ಎಂ.ಕೃಷ್ಣಮೂರ್ತಿ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.