ವಿಶ್ವಗುರುವಾಗುವ ಸಾಮಥ್ರ್ಯ ಭಾರತಕ್ಕಿದೆ : ದತ್ತಾತ್ರೆಯ ಹೊಸಬಾಳೆ 2 ದಿನಗಳ ಸ್ಟೆಪ್-2018 ಸಮವೇಶಕ್ಕೆ ಚಾಲನೆ

ಲೋಕದರ್ಶನ ವರದಿ

ಬೆಳಗಾವಿ,01:  ವಿಜ್ಞಾನ ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವಿಶ್ವಕ್ಕೇ ಗುರುವನ್ನು ಕೊಡುವ ಸಾಮಥ್ರ್ಯ ಭಾರತಕ್ಕಿದೆ. ಇದನ್ನು ಬಳಸಿಕೊಂಡು ಮತ್ತೊಮ್ಮೆ ಭಾರತ  ಸರ್ವ ಕ್ಷೇತ್ರಗಳಲ್ಲಿ ವಿಶ್ವಗುರುವಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದ್ದಾರೆ. 

ಬೆಳಗಾವಿಯಲ್ಲಿ ಶನಿವಾರ ಆರಂಭವಾದ ಪ್ರಬುದ್ಧ ಭಾರತ ಆಯೋಜಿಸಿರುವ 2 ದಿನಗಳ ಸ್ಟೆಪ್-2018 ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಭಾರತ ಇಂದು ಜಗತ್ತಿನಲ್ಲೇ ಅಗ್ರಮಾನ್ಯವಾಗಿ ಬೆಳೆಯುತ್ತಿದೆ. ಹಲವು ಶತಮಾನಗಳ ನಂತರ ಮತ್ತೆ ವಿಶ್ವಮಾನ್ಯ ಪಟ್ಟ ಸಿಗುತ್ತಿದೆ. ತನ್ನ ಶ್ರೇಷ್ಠತೆಯನ್ನು ಮೆರೆಯುವ ಅವಕಾಶ ಬರುತ್ತಿದೆ. ಕೇವಲ ಪುಸ್ತಕದ ಪಾಠದ ಬದಲು ಬದುಕುವ ಪಾಠ ಕಲಿಸುವ ಸಾಮಥ್ರ್ಯ ಭಾರತಕ್ಕಿದೆ. ಹಾಗಾಗಿ ಶೀಘ್ರದಲ್ಲೇ ವಿಶ್ವಗುರು ಪಟ್ಟ ಭಾರತಕ್ಕೆ ಲಭಿಸಬೇಕು ಎಂದು ಅವರು ಹೇಳಿದರು. 

ಬೌದ್ಧಿಕ ಪ್ರಾಮಾಣಿಕತೆ, ವೈಯಕ್ತಿಕ ಜೀವನದಲ್ಲಿ ಶುದ್ಧತೆ ಮತ್ತು ಕ್ರಿಯಾತ್ಮಕತೆ ನಿಜವಾದ ಬುದ್ದಿ ಜೀವಿಗಳ ಲಕ್ಷಣವಾಗಬೇಕು. ಅಂದಾಗ ಭಾರತದ ಶ್ರೇಷ್ಠತೆಯನ್ನು ಪುನರ್ ಪ್ರತಿಷ್ಠಾಪಿಸಲು ಸಾಧ್ಯ. ಕೇವಲ ಹಳೆಯ ನೆನಪುಗಳೊಂದಿಗೆ ಬದುಕಲು, ದೇಶ ಕ್ಟಲು ಸಾಧ್ಯವಿಲ್ಲ. ಇತಿಹಾಸವನ್ನು ಮೆಲುಕು ಹಾಕುವುದರೊಂದಿಗೆ ಮತ್ತಷ್ಟು ಪ್ರಬಲವಾಗಿ ದೇಶ ಕಟ್ಟುವ ಕೆಲಸವಾಗಬೇಕು ಎಂದು ಹೊಸಬಾಳೆ ಹೇಳಿದರು. 

ಭಾರತೀಯ ಮನಸ್ಸುಗಳ ಮೇಲೆ ಆಗಿರುವ ವಸಾಹತಿಕರಣದ ಪ್ರಭಾವವನ್ನು ತೊಡೆದುಹಾಕಬೇಕಿದೆ. ಬುದ್ದಿಜೀವಿಗಳಲ್ಲಿ ಅಧಿಕಾರರಶಾಹಿಗಳನ್ನು ಓಲೈಸುವ, ಆಸ್ತಿ ಗಳಿಕೆಗಾಗಿ ತಮ್ಮ ವಿಚಾರಗಳನ್ನು ಬದಲಾಯಿಸುವ ಪ್ರವೃತ್ತಿ ಬೆಳೆದು ಬಂದಿದೆ. ಇದು ಸಾಮಾಜಿಕ, ಆಥರ್ಿಕ, ಸಾಂಸ್ಕೃತಿಕ, ವೈಜ್ಞಾನಿಕ ಸಾಧನೆಗಳಿಗೆ ಅಡ್ಡಗಾಲಾಗಿದೆ. ಇದರಿಂದ ಜನ ಬೇಸತ್ತಿದ್ದಾರೆ. ಸಾಮಾನ್ಯ ಮನುಷ್ಯನಲ್ಲಿ ಬುದ್ಧಿಜೀವಿಗಳನ್ನು ಕಂಡು ಹೇಸುವ, ಅಪನಂಬಿಕೆ ಮಾಡುವ ಮನಸ್ಥಿತಿ ಬೆಳೆದು ಬಂದಿದೆ. ಕಳೆದ ಅನೇಕ ದಶಕಗಳಿಂದ ಬುದ್ದಿಜೀವಿ ಆಗೋದು ದಂಧೆ ಆಗಿದೆ. ಸೆಮಿನಾರ್, ಕಾಯರ್ಾಗಾರಗಳಲ್ಲಿ ಪರಸ್ಪರ ಬುದ್ದಿಜೀವಿ ಎನ್ನುವುದು ಜನರಿಗೆ ಬುದ್ದಿಜೀವಿ ಎಂದರೇನೆ ಅಪಥ್ಯವಾಗುವಂತಾಗಿದೆ ಎಂದು ಅವರು ವ್ಯಂಗ್ಯವಾಡಿದರು. 

ಭಾರತೀಯ ಬೌದ್ಧಿಕ ಪರಂಪರೆ ಪವಿಟಿಯು ಕುಲಪತಿ ಕರಿಸಿದ್ಧಪ್ಪ, ಕೆಎಲ್ಇ ವಿವಿ ಕುಲಪತಿ ವಿವೇಕ ಸಾವೋಜಿ, ಆರ್ ಸಿಯು ಕುಲಪತಿ ಶಿವಾನಂದ ಹೊಸಮನಿ ಮಾತನಾಡಿದರು. 

ಪ್ರಬುದ್ಧ ಭಾರತದ ಸಂಚಾಲಕ ಚೈತನ್ಯ ಕುಲಕಣರ್ಿ ಸ್ವಾಗತಿಸಿದರು. ಸಹ ಸಂಚಾಲಕ ಸಚಿನ್ ಸಬ್ನಿಸ್ ಪರಿಚಯಿಸಿದರು. ದಿವ್ಯಾ ಹೆಗಡೆ ಪ್ರಾರ್ಥನೆ ಹಾಡಿದರು. ಹಷರ್ಿತಾ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸಂದೀಪ್ ನಾಯರ್ ವಂದಿಸಿದರು. 

ರಾಷ್ಟ್ರದ ವಿವಿಧ ಭಾಗಗಳಿಂದ ಸಾವಿರಕ್ಕೂಹೆಚ್ಚು ಪ್ರತಿನಿಧಿಗಳು ಸಮಾವಶದಲ್ಲಿ ಭಾಗವಹಿಸಿದ್ದರು. ಸಂಜೆಯವರೆಗೂ ವಿವಿಧ ಗೋಷ್ಠಿಗಳು ನಡೆದವು.