ಲೋಕದರ್ಶನವರದಿ
ತಾಳಿಕೋಟೆ೨೦: ತಮ್ಮ ಕುಟುಂಬವನ್ನು ಲೆಕ್ಕಿಸದೇ ಜನರಿಗೋಸ್ಕರ್ ಹಗಲು ರಾತ್ರಿ ಎನ್ನದೇ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ಸಿಬ್ಬಂದಿಗಳು ಸಕರ್ಾರದ ನಿಯಮದಂತೆ ಕಟ್ಟುನಿಟ್ಟಿನ ಕಾರ್ಯ ಮುಂದುವರೆಯಲಿ ಅದರಲ್ಲಿ ನಾನು ಎಂದೂ ಹಸ್ತಕ್ಷೇಪ ಮಾಡುವದಿಲ್ಲಾವೆಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಹೇಳಿದರು.
ಬುಧವಾರರಂದು ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ತಮ್ಮ ವೈಯಕ್ತಿಕ ದಿನಸಿ ಕಿಟ್ಗಳನ್ನು ವಿತರಿಸಿ ಮಾತನಾಡುತ್ತಿದ್ದ ಅವರು ಕೊರೊನಾ ವೈರಸ್ ರೋಗ ಜನರಿಗೆ ತಗುಲದಿರಲಿ ಎಂಬ ಉದ್ದೇಶದಿಂದ ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ ಕೂಡಾ ಕೆಲವು ನಿಯಮಗಳನ್ನು ಪಾಲನೆಗೆ ಸೂಚನೆಯನ್ನು ನೀಡಿದೆ ಆ ಸೂಚನೆಯ ಪಾಲನೆಯಲ್ಲಿ ಪೊಲೀಸ್ರು ಮೊದಲಿಗರಾಗಿ ಕೆಲಸ ನಿರ್ವಹಿಸುತ್ತಾ ಬಂದಿದ್ದೀರಿ ಅದರ ಜೊತೆಗೆ ಜನರಿಗೆ ಅಂತರ ಕಾಯ್ದುಕೊಳ್ಳಲು ಸಲಹೆಗಳನ್ನು ಮಾರ್ಗದರ್ಶನವನ್ನು ಮಾಡುತ್ತಾ ಸಾಗಿರುವದನ್ನು ಅಭಿನಂದನೆಯನ್ನು ಸಲ್ಲಿಸುತ್ತೇನೆಂದ ಅವರು ಮಹಾ ಮಾರಿ ಕೋರೊನಾ ವೈರಸ್ನ್ನು ಗೆಲ್ಲಲು ಯೋಧರಂತೆ ಎಲ್ಲರೂ ಕಾರ್ಯನಿರ್ವಹಿಸಬೇಕಿದೆ ಈ ರೋಗ ಪೊಲೀಸ್ರಿಗೆ ಬರುವದಿಲ್ಲಾವೆಂಬಂತಿಲ್ಲಾ ಇದು ಯಾರನ್ನೂ ಕೂಡಾ ಬಿಡುವದಿಲ್ಲಾ ಇಂತಹ ರೋಗಕ್ಕೆ ಸೈನಿಕರಂತೆ ಪೊಲೀಸ್ರು ಕಾರ್ಯನಿರ್ವಹಿಸಿ ಈಗಾಗಲೇ ಮಾಸ್ಕ್ಧರಿಸದವರಿಗೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸುತ್ತಾಡದವರಿಗೆ ತಮ್ಮದೇ ಆದ ರೀತಿಯಲ್ಲಿ ತಿಳುವಳಿಕೆ ಹೇಳುತ್ತಾ ಸಾಗಿದ್ದಾರೆ ಈ ಕಾರ್ಯದಲ್ಲಿ ಪೊಲೀಸ್ ಸಿಬ್ಬಂದಿಗಳು ಮುಖ್ಯವಾಹಿನಿಯಲ್ಲಿ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸುತ್ತಿರುವದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಮಯದಲ್ಲಿ ತಾಲೂಕಾ ತಹಶಿಲ್ದಾರ ಅನೀಲಕುಮಾರ ಢವಳಗಿ, ಬಿಇಓ ರೇಣುಕಾ ಕಲ್ಬುಗರ್ಿ, ತಾಪಂ ಇಓ ಮಂಜುನಾಥ ಶಿವಪೂರೆ, ಪಿ.ಎಸ್.ಆಯ್.ವಸಂತ ಬಂಡಗಾರ, ಪೊಲೀಸ್ ಸಿಬ್ಬಂದಿಗಳಾದ ಬಸವರಾಜ ಕಳ್ಳಿಗುಡ್ಡ, ಗೀರೀಶ ಚಲವಾದಿ, ಎಂ.ಎಲ್.ಪಟ್ಟೇದ, ಆರ್.ಎಸ್.ವಡೆಯರ, ಎಸ್.ಕೆ.ಕುಂಟೋಜಿ, ಶಿವನಗೌಡ ಬಿರಾದಾರ, ಗುರು ನಾಯಕ, ಎಂ.ಎಲ್.ಅವಟಿ, ಸೋಮು ರಾಠೋಡ, ಚಾಂದ ವಠಾರ, ಒಳಗೊಂಡು ಹೋಮಗಾರ್ಡ ಸಿಬ್ಬಂದಿಗಳು, ಉಪಸ್ಥಿತರಿದ್ದರು.