ಮುರಗುಂಡಿಯಲ್ಲಿ ಬುಧವಾರ ವಾರದ ಸಂತೆಗೆ ಗ್ರಾಮ ಅಧ್ಯಕ್ಷರಿಂದ ಚಾಲನೆ

Muragundi village president launched the weekly maret

ಅಥಣಿ 10: ತಾಲ್ಲೂಕಿನ ಮುರಗುಂಡಿ ಗ್ರಾಮದಲ್ಲಿ ಹೊಸದಾಗಿ ಬುಧವಾರ ಸಂತೆಗೆ ಚಾಲನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ವೀನಿ ಶ್ರೀಮಂತ ಕಾಟಕರ ಚಾಲನೆ ನೀಡಿದರು.  

ಪ್ರತಿ ಬುಧವಾರ ವಾರದ ಸಂತೆ ಚಾಲನೆ ನೀಡಿ ಗ್ರಾಮದ ಜನರಿಗೆ ದಿನಸಿ ಹಾಗೂ ತರಕಾರಿ ವಸ್ತುಗಳು ಇನ್ಮೇಲೆ ನಮ್ಮೂರಿನ ಸಂತೆಯಲ್ಲಿ ದೊರೆಯುತ್ತವೆ ಇದರ ಸದುಪಯೋಗವನ್ನು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಾದ ವಡೆಯರ ಹಟ್ಟಿ, ದೇವರದ್ದೇರಟ್ಟಿ, ಮಸರಗುಪ್ಪಿ, ತಂಗಡಿ ಶಿನಾಳ, ಬಸವನಗರ, ಕುಂಬಾರಗುತ್ತಿ ಮುಂತಾದ ಹಳ್ಳಿಗರ ಜನತೆಗೆ ಇದು ತುಂಬಾ ಅನುಕೂಲವಿದೆ ಎಂದು ಈ ಸಂತೆಯನ್ನು ಹಲವಾರು ವರ್ಷಗಳಿಂದ ಗ್ರಾಮದ ಜನತೆ ಆಸಕ್ತಿ ಹಾಗೂ ಕೂಗು ಇವರದಾಗಿತ್ತು ಅದರ ಕಾಲ ಇವಾಗ ಕೂಡಿ ಬಂದಿದೆ ಇದರ ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ ನಿಡೋಣಿ ಕಾರ್ಯದರ್ಶಿ ಭೀಮಾಶಂಕರ ದಂಧರಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶೋಭಾ ಅನಿಲಕುಮಾರ ಪಾಟೀಲ ಗ್ರಾಮ ಪಂಚಾಯತ್ ಸದಸ್ಯರಾದ ಭರಮಾ ಮಗಾಡಿ, ನೀಲವ್ವ ಭೀಮು ಕರಸಿದ್ದಗೋಳ, ರಮೇಶ್ ಕುಸನಾಳೆ, ಮುತ್ತಪ್ಪ ಮಗಾಡಿ, ಬಸವರಾಜ ಪಾಟೀಲ,ಮಲ್ಲಿಕಾರ್ಜುನ ದರೂರ, ಪ್ರೇಮಾ ಅಜೀತ್ ಚಿಪ್ಪರಗಿ, ಬಂಗಾರವ್ವ ಪರಸಪ್ಪ ಪಾಟೀಲ, ಮಾಲಾಶ್ರೀ ಸಿದ್ದಪ್ಪ ನಾಯಿಕ,ಅಕ್ಕವ್ವ ಬಾಳಪ್ಪ ಬಾಳಿಗೇರಿ, ಹಾಗೂ ಗ್ರಾಮ ಹಿರಿಯರಾದ ವಿಶ್ವಾಸ ಪವಾರ, ಶ್ರೀ ಮುರಸಿದ್ದೇಶ್ವರ ದೇವಾಲಯ ಕಮಿಟಿ ಅಧ್ಯಕ್ಷರು ತಮ್ಮಣ್ಣ ಸನಮುರಿ, ಮುರಗೆಪ್ಪ ಸತ್ತಿ, ಗೋಪಾಲ್ ಮಗಾಡಿ,ಕಾಶಿನಾಥ ಕಾಶೀಕರ ಮುರಳಿಧರ್ ನರೋಟಿ, ಉಮೇಶ ಕೇರಿಕಾಯಿ, ಬಾಳಪ್ಪ ಬಾಳಿಗೇರಿ, ಗಜಾನನ ಹಾವರಡ್ಡಿ, ಗಣೇಶ ನಿಂಗನೂರ, ಪಿಂಟು ಸನದಿ ಹಾಗೂ ಪಂಚಾಯತ್ ಸಿಬ್ಬಂದಿಯವರು ಉಪಸ್ಥಿತರಿದ್ದರು.