ಲೋಕದರ್ಶನ ವರದಿ
ಯರಗಟ್ಟಿ 06: ಇಂದಿನ ಸಮಾಜದಲ್ಲಿ ಪಾಶ್ಚಿಮಾತ್ಯ ಉಡುಗೆ ತೊಡುಗೆ, ಆಚಾರ ವಿಚಾರ, ನಡವಳಿಕೆಗಳಿಗೆ ಬೆನ್ನು ಹತ್ತಿ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಪೆಟ್ಟು ಬೀಳುತ್ತಿದೆ, ಇಂದಿನ ಮಕ್ಕಳಲ್ಲಿ ಸಂಭಂದಗಳ ಮಹತ್ವದ ಜೊತೆಗೆ ಭಾಂದವ್ಯದ ಬೆಸುಗೆ ಬೆಸೆಯಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಾಂಬೋಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿನ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ಎಸ್ಡಿಎಮ್ಸಿ ಅಧ್ಯಕ್ಷೆ ಸೃಷ್ಠಿ ಪಟ್ಟಣಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಖಾಸಗಿ ಶಾಲಾ ಸಂಸ್ಥೆಗಳು ಡೊನೆಷನ್ ಪಡೆಯುತ್ತಾ ಶಿಕ್ಷಣವನ್ನು ವ್ಯಾಪಾರಿಕರಣ ಮಾಡಿಕೊಂಡಿದ್ದಾರೆ ಅಷ್ಟೆ, ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ ಎಂದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯ ಮಾನ್ಯರನ್ನು ಸನ್ಮಾನಿಸಲಾಯಿತು, ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.
ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು, ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿದರು, ಗ್ರಾ.ಪಂ.ಅಧ್ಯಕ್ಷೆ ಕಸ್ತೂರಿ ಕಡೆಮನಿ, ಉಪಾಧ್ಯಕ್ಷೆ ಲಕ್ಷ್ಮೀ ಸೊನ್ನದ, ಸದಾಶಿವ ಗುಡಗುಂಟಿ, ಮನೋಹರ ಬೆಲ್ಲದ, ಶಿವಾನಂದ ಕರಿಗೊಣ್ಣವರ, ಗೌಡಪ್ಪ ಉದಪುಡಿ, ಆಶಾ ಪರೀಟ, ಮಹಾದೇವಿ ಪೂಜೇರ, ಎಲ್.ತಿಪ್ಪಾನಾಯ್ಕ, ಎಸ್ಡಿಎಮ್ಸಿ ಹಾಗೂ ಗ್ರಾ.ಪಂ.ಸರ್ವ ಸದಸ್ಯರು, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪಾಲಕರು, ಮುಂತಾದವರಿದ್ದರು. ಮುಖ್ಯ ಶಿಕ್ಷಕ ಆರ್.ಬಿ.ಗಾಣಿಗೇರ ಸ್ವಾಗತಿಸಿದರು, ಶಿಕ್ಷಕ ಎಸ್.ಬಿ.ಪಾಣಿಶೆಟ್ಟಿ ನಿರೂಪಿಸಿದರು, ಶಿಕ್ಷಕ ಶಿವಾನಂದ ಮಿಕಲಿ ವಂದಿಸಿದರು.