ದೇವರಹಿಪ್ಪರಗಿ 07: ನವ ಭಾರತದ ನಿರ್ಮಾಣಕ್ಕಾಗಿ ಅನುದಿನ ಅನುಸರಿಸು ಸಂಸ್ಥೆ ವತಿಯಿಂದ ಊರಿಗೊಂದು ವನ ನಿರ್ಮಾಣ, ಗ್ರಾಮಕ್ಕೊಂದು ಗ್ರಂಥಾಲಯ, ಯೋಗ ಶಾಲೆ ನಿರ್ಮಾಣ ಮಾಡಿ ಗ್ರಾಮಗಳ ಅಭಿವೃದ್ಧಿ ಮತ್ತು ಉಜ್ವಲ ಭಾರತ ನಿರ್ಮಾಣ ಮಾಡುವುದೇ ಸಂಸ್ಥೆಯ ಧ್ಯೇಯ ವಾಕ್ಯ ವಾಗಿದೆ ಎಂದು ಅನುದಿನ ಅನುಸರಿಸು ಸಂಸ್ಥೆಯ ಸಂಸ್ಥಾಪಕರು, ಯಾಳವಾರ ಹಾಗೂ ಹೆಗಡಾಪೂರ ಶ್ರೀಗಳಾದ ದಾರುಕಾಲಿಂಗ ಶಿವಾಚಾರ್ಯರು ಹೇಳಿದರು.
ತಾಲೂಕಿನ ಯಾಳವಾರ ಗ್ರಾಮದ ಗುರು ಮಹಾಂತೇಶ್ವರ ಜಾತ್ರಾ ಮಹೋತ್ಸವದಲ್ಲಿ ಅನುದಿನ ಅನುಸರಿಸು ಸಂಸ್ಥೆಯಿಂದ ಶಿಕ್ಷಕರ ಮಹೋತ್ಸವ ನಮ್ಮೂರ ಉತ್ಸವ ಸಮಾರಂಭದ ಉಸ್ತುವಾರಿ ವಹಿಸಿ ಮಾತನಾಡಿದರು.
ಜಾಲಹಳ್ಳಿಯ ಜಯಶಾಂತಲಿಂಗೇಶ್ವರ ಸಂಸ್ಥಾನ ಮಠದ ಜಯಶಾಂತಲಿಂಗ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಮಠ ಮಂದಿರಗಳು ಸಮಾಜದ ಪರಿವರ್ತನಾ ಕೇಂದ್ರಗಳಾಗಿದ್ದು, ಮಾನವೀಯ ಮೌಲ್ಯಗಳು ವೃದ್ಧಿಸುವ ಜೊತೆ ಸಮಸ್ತ ಜನಾಂಗದ ಭಕ್ತರಿಗೆ ಒಳ್ಳೆಯ ಮಾರ್ಗದರ್ಶನ ಸಿಗುವಂತೆ ಮಾಡಿ ಸಮಾಜದ ಸಂಜೀವಿನಿಯಾಗಿ ಕೆಲಸ ಮಾಡುತ್ತೀವಿ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಹೇಡಗಾಪೂರ ಶಿವಲಿಂಗೇಶ್ವರ ಸಂಸ್ಥಾನ ಮಠದ ಶಿವಲಿಂಗ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಕಿರಿಯ ಸ್ವಾಮೀಜಿಗಳಾದ ದಾರುಕಾಲಿಂಗ ಶಿವಾಚಾರ್ಯರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಸಮ್ಮುಖ ಮತ್ತು ದಿನಚರಿ ಪುಸ್ತಕ ಬಿಡುಗಡೆಗೊಳಿಸಿದ ದೇವರಹಿಪ್ಪರಗಿ ಪರದೇಶಿ ಮಠದ ಶಿವಯೋಗಿ ಮಹಾಸ್ವಾಮಿಗಳು ಮಾತನಾಡಿ, ಅನುದಿನ ಅನುಸರಿಸು ಟ್ರಸ್ಟ್ ವತಿಯಿಂದ ಮೊದಲನೆಯ ವರ್ಷ ಸೈನಿಕರಿಗಾಗಿ, ದ್ವಿತೀಯ ವರ್ಷ ರೈತರಿಗಾಗಿ, ತೃತೀಯ ವರ್ಷ ಶಿಕ್ಷಕರಿಗಾಗಿ ಮಹೋತ್ಸವ ಇದಾಗಿದ್ದು ಶಿಕ್ಷಕರು ಈ ಸಮಾಜದ ಸುಧಾರಕರು, ಯುವಕರನ್ನು ವ್ಯಸನ ಮುಕ್ತರನ್ನಾಗಿ ಮಾಡಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದರು.
ವಿಶೇಷ ಉಪನ್ಯಾಸಕರು 2025ರ ಅನುದಿನ ಅನುಸರಿಸು ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕರು ಸಾಹಿತಿಗಳಾದ ಅಶೋಕ ಹಂಚಲಿ ಅವರು ಮಾತನಾಡಿ, ಭಾರತೀಯ ಸಂಸ್ಕೃತಿ, ಭಾರತದ ನೆಲ,ಜಲ, ಆಧ್ಯಾತ್ಮ ಕೇಂದ್ರ ಕಾರ್ಯಗಳ ಬಗ್ಗೆ ಮಾತನಾಡಿದರು.
ಪ್ರಾಸ್ತಾವಿಕವಾಗಿ ಅನುದಿನ ಅನುಸರಿಸು ಸಂಸ್ಥೆಯ ಉಪಾಧ್ಯಕ್ಷ ರಾಚೋಟೇಶ್ವರ ದೇವರು ಮಾತನಾಡಿ, ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಜೊತೆಗೆ ಯೋಗ ಮಾಡಿ ರೋಗ ಮುಕ್ತರಾಗಿ ಜೀವನ ಸಾಗಿಸಬೇಕು. ಸಂಸ್ಥೆ ನಡೆದು ಬಂದ ದಾರಿ ಹಾಗೂ ಉದ್ದೇಶಗಳ ಕುರಿತು ಮಾತನಾಡಿ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.
ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ಶಾಲಾ ಮಕ್ಕಳಿಂದ ಹಾಗೂ ಸರಿಗಮಪ ಖ್ಯಾತಿಯ ಶಿವಾನಿ ಶಿವದಾಸ ಅವರಿಂದ ಗೀತ ಗಾಯನ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಹಾಗೂ ಶಿಕ್ಷಕರ ಸನ್ಮಾನ, ಶಿಕ್ಷಕರ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆಕರ್ಷಣೆಯಾಗಿತ್ತು.
ಸೋಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಜು ಗೌಡ ನಾಡಗೌಡ್ರು, ಮುಖಂಡರುಗಳಾದ ಸಾಹೇಬಗೌಡ ದೊಡಮನಿ, ರಾಮನಗೌಡ ಪಾಟೀಲ, ಅರವಿಂದ ನಾಗರಾಳ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರೌಢಶಾಲಾ ಶಿಕ್ಷಕ ಬಾಪುಗೌಡ ಬಂಟನೂರ ಸ್ವಾಗತಿಸಿದರು, ಸಂಸ್ಥೆಯ ಅಧ್ಯಕ್ಷ ಬೊಮ್ಮಲಿಂಗ ದೇವರು ವಂದಿಸಿದರು.