ವಾರಾಣಾಸಿ, ಏ 26 ವಾರಣಾಸಿ ಜನತೆ ಈ ಬಾರಿಯೂ ಹರಸಿ ಮತ್ತೆ ಐದು ವರ್ಷಗಳ ಆಡಳಿತ ನೀಡುತ್ತಾರೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆಗೆ ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಬಹಳ ನಗುಮುಖದಿಂದ ಮಾತನಾಡಿ, ವಾರಣಾಸಿ ಜನರು ತೋರಿದ ಪ್ರೀತಿ ವಿಸ್ವಾಸವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಮಾಧ್ಯಮ ಪ್ರತಿನಿಧಿಗಳು ಕಳೆದ 24 ಗಂಟೆಗಳ ಕಾಲ ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ ಹೀಗೆ ಮಾಡುವುದರಿಂದ ಎಲ್ಲರೂ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದೂ ಹಾಸ್ಯ ಚಟಾಕಿ ಹಾರಿಸಿದರು. . ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೋದಿ ಅವರು ನಾಮಪತ್ರ ಸಲ್ಲಿಸಿದರು .ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಎಐಎಡಿಎಂಕೆ ನಾಯಕರಾದ ಪನ್ನೀರ್ ಸೆಲ್ವಂ ಎಂ.ತಂಬಿದೊರೈ ಕೇಂದ್ರ ಸಚಿವರಾದ ರಾಜನಾಥ ಸಿಂಗ್ , ಸುಷ್ಮಾ ಸ್ವರಾಜ್ ಮತ್ತು ನಿತಿನ್ ಗಡ್ಕರಿ ಈ ಸಮಯದಲ್ಲಿ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆಗೆ ಮೊದಲು ಮೋದಿ ಅವರು ವಾರಣಾಸಿಯಲ್ಲಿನ ಕಾಲ ಭೈರವ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತನ್ನು ಉದ್ದೇಶಿಸಿ ಮಾತಾಡಿದ ಅವರು, ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ಸಕರ್ಾರದ ಪರವಾದ ಆಡಳಿತ ಅಲೆ ಕಂಡುಬಂದಿದ್ದು ಮತ್ತು ಇಡೀ ದೇಶ ಮೋದಿ ಸಕರ್ಾರ ವನ್ನು ಮತ್ತೆ ಬಯಸುತ್ತಿದೆ ಎಂದು ಹೇಳಿದರು. ಕಳೆದ ಒಂದೂವರೆ ತಿಂಗಳುಗಳಿಂದ ದೇಶದಾದ್ಯಂತ ಪ್ರಯಾಣ ಮಾಡಿ ಜನರ ಭಾವನೆಗಳನ್ನು ಅರಿತಿದ್ದೇನೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇವಲ ಕಾರ್ಯಕರ್ತರು (ಕೆಲಸಗಾರರು), ಈ ಬಾರಿ ಚುನಾವಣೆಗೆಹೋರಾಡುವವರು ಜನರು. ಇತಿಹಾಸದಲ್ಲಿ ಈ ರೀತಿ ಚುನಾವಣೆ ನಡೆಯುತ್ತಿದೆ ಎಂದರು. ದೇಶದಲ್ಲಿ ಸಕರ್ಾರದ ಪರವಾದ ಆಡಳಿತದ ಅಲೆ ಇದೆಯೆ ಹೊರತು ಸಕರ್ಾರಿ ವಿರೋಧಿ ಅಲೆ ಎಲ್ಲಿಯೂ ಕಾಣುತ್ತಿಲ್ಲ ಎಂದರು ಹೇಳಿದರು. ಇದು ಬಿಜೆಪಿ ಕಾಮರ್ಿಕರ ಕಠಿಣ ಕೆಲಸ ಮತ್ತು ಜನರ ಪ್ರೀತಿಯ ಮಿಶ್ರಣವಾಗಿದೆ. ಅವರು ಈಗಾಗಲೇ ಕಾಶಿ ಗೆದ್ದಿದ್ದಾರೆ ಎಂದರು. ವಾರಾಣಾಸಿಯಲ್ಲಿ ಬಿಜೆಪಿ ಎಲ್ಲ ಮತಗಟ್ಟೆಗಳನ್ನೂ ಗೆಲ್ಲುವ ಜವಾಬ್ದಾರಿ ಬೂತ್ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.ಮೋದಿ ಸೋಲಬಹುದು ಇಲ್ಲ ಗೆಲ್ಲಬಹುದು ಬೇರೆ ವಿಷಯ,ಆದರೆ ಬೂತ್ ಕಾರ್ಯಕರ್ತರು ಮಾತ್ರ ಎಂದಿಗೂ ಸೋಲಲೇಬಾರದು ಎಂದು ಮೋದಿ ಒತ್ತಿ ಹೇಳಿದರು.