ಹಾವೇರಿ11: ಜಿಲ್ಲೆಯ 25 ವರ್ಷದ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶಿಗ್ಗಾಂವ ತಾಲೂಕಿನ ಅಂದಲಗಿ ಗ್ರಾಮದ ಲಾರಿ ಮಾಲೀಕ ಕಂ ಚಾಲಕನಾದ ಕ -853 ವ್ಯಕ್ತಿಗೆ ಕರೋನಾ ದೃಢಪಟ್ಟಿದೆ. ಇದು ಜಿಲ್ಲೆಯ ಮೂರನೇ ಕೊರೊನಾ ಸೋಂಕಿತ ಪ್ರಕರಣವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ಸೋಂಕಿತ ಕ -853 ವ್ಯಕ್ತಿ ಮಾವಿನ ಹಣ್ಣು ವ್ಯಾಪರದ ನಿಮಿತ್ಯ ತನ್ನ ತಮ್ಮನೊಂದಿಗೆ ಮೂರುಬಾರಿ ಮುಂಬೈ ಮಾರುಕಟ್ಟೆಗೆ ಹೋಗಿಬಂದಿರುವ ಪ್ರವಾಸ ಇತಿಹಾಸ ಹೊಂದಿದ್ದಾನೆ. ಸೋಂಕಿತ ವ್ಯಕ್ತಿಯು ಸ್ವಾಬ್ ಟೆಸ್ಟ್ ಆಗುವ ಮೊದಲು ವ್ಯಾಪರ ಉದ್ದೇಶದಿಂದ ತನ್ನ ಅಣ್ಣ ತಮ್ಮಂದಿರೊಂದಿಗೆ ಮೂರು ಜನ ಕ್ಲೀನರ್ಗಳು ಲಾರಿಯಲ್ಲಿ ಎಪ್ರಿಲ್ 23 ರಂದು, ಎಪ್ರಿಲ್ 26 ರಂದು ಹಾಗೂ ಎಪ್ರಿಲ್ 29 ರಂದು ಮಹಾರಾಷ್ಟ್ರದ ನವಿ ಮುಂಬೈ ಮಾಕರ್ೆಟ್ಗೆ ತೆರಳಿ ಮಾವಿನಕಾಯಿಯನ್ನು ಅನ್ಲೋಡ್ಮಾಡಿ ಮರಳಿ ಸ್ವಗ್ರಾಮ ಅಂದಲಗೆ ಗ್ರಾಮಕ್ಕೆ ಹಿಂದಿರುಗಿಬಂದ ಕುರಿತಂತೆ ಗ್ರಾಮಸ್ಥರು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೇ 6 ರಂದು ವೈದ್ಯಾಧಿಕಾರಿಗಳು ಅಂದಲಗಿ ಗ್ರಾಮಕ್ಕೆ ತೆರಳಿ ತಪಾಸಣೆಗೊಳಪಡಿಸಿ ಸೀಲ್ಹಾಕಿ ಜಕಿನಕಟ್ಟಿ ಮೊರಾಜರ್ಿದೇಸಾಯಿ ವಸತಿ ಶಾಲೆ ಸಕರ್ಾರಿ ಕ್ವಾರಂಟೈನ್ ಮಾಡಲಾಗಿತ್ತು. ಸದರಿ ವ್ಯಕ್ತಿಯ ಜೊತೆಗೆ ಆತನ ಸಹೋದರ ಮತ್ತು ಕ್ಲೀನರ್ಗಳನ್ನು ಸಹಿತ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿ ಮೊದಲ ಸಲ ಅಂದಲಗಿ ಗ್ರಾಮದಿಂದ ಕೊಪ್ಪರಸಿಕೊಪ್ಪ, ಬೈಲವಾಳ, ಬಸಾಪುರ ದುಂಢಸಿ(ಶಿಗ್ಗಾಂವ ತಾಲೂಕು) ಹುಬ್ಬಳ್ಳಿ ಎವರ್ ಗ್ರೀನ್ ದಾಬಾ, ಧಾರವಾಡ, ಬೆಳಗಾವಿ, ಕೊಲ್ಲಾಪುರ, ವಾಲ್ವಾ ಮುಂಬೈ ಮಾರ್ಗವಾಗಿ ಪ್ರವಾಸ ಮಾಡಿದ್ದಾರೆ. ಎರಡನೇ ಬಾರಿ ಕೋಣನಕೇರಿ, ಹೊಸೂರು, ಹುಬ್ಬಳ್ಳಿ, ಕಿತ್ತೂರು, ಬೆಳಗಾವಿ, ಕೊಲ್ಲಾಪುರ, ಪುಣೆ ಮಾರ್ಗವಾಗಿ ಮುಂಬೈಗೆ ಪ್ರಯಾಣ ಮಾಡಿದ್ದಾರೆ. ಮೂರನೇ ಬಾರಿ ಕೊಪ್ಪರಸಿಕೊಪ್ಪ, ಬೈಲವಾಳ, ಕೋಣನಕೇರಿ, ದುಂಢಶಿ, ಹುಬ್ಬಳ್ಳಿ, ಧಾರವಾಡ, ಕಿತ್ತೂರ, ಬೆಳಗಾವಿ, ಕೊಲ್ಲಾಪೂರ ಮಾರ್ಗವಾಗಿ ಮುಂಬೈಗೆ ಪ್ರಯಾಣ ಮಾಡಿದ್ದಾರೆ.
ಮೇ 7 ರಂದು ಶಿಗ್ಗಾಂವ ಆಸ್ಪತ್ರೆಗೆ ಕರೆತಂದು ಸ್ವಾಬ್ನ್ನು ಬೆಂಗಳೂರಿನ ಎನ್.ಐ.ವಿ. ಲ್ಯಾಬ್ಗೆ ಕಳುಹಿಸಲಾಗಿತ್ತು. ಮೇ 10ರ ರಾತ್ರಿ ವ್ಯಕ್ತಿಯು ಕೋವಿಡ್ ಸೊಂಕಿತ ಎಂದು ವರದಿ ಬಂದಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿ 16 ಜನರನ್ನು ಗುರುತಿಸಲಾಗಿದ್ದು, ಅವರೆಲ್ಲರನ್ನೂ ನಿಯಮಾನುಸಾರ ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಕ -853 ಸೋಂಕಿತನ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಂದಲಗಿ ಗ್ರಾಮದಲ್ಲಿ ಸೋಂಕಿತ ವ್ಯಕ್ತಿಯ ಮನೆಯ ಸುತ್ತಮುತ್ತಲಿನ 300 ಮೀಟರ್ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ ಹಾಗೂ ಸುತ್ತಮುತ್ತಲಿನ ಏಳು ಕಿ.ಮೀ. ಬಫರ್ ಜೋನ್ ಎಂದು ಘೋಷಿಸಲಾಗಿದೆ. ಸವಣೂರು ಉಪಭಾಗಾಧಿಕಾರಿ ಇನ್ಸಿಡೆಂಟ್ ಕಮಾಂಡರ್ ಎಂದು ನೇಮಕ ಮಾಡಲಾಗಿದೆ. ಸೀಲ್ಡೌನ್ ಪ್ರದೇಶಕ್ಕೆ ಒಳಹೋಗಲು ಹಾಗೂ ಹೊರ ಬರಲು ಒಂದೇ ಮಾರ್ಗವನ್ನು ನಿಗಧಿಪಡಿಸಲಾಗಿದೆ. ಸೀಲ್ಡೌನ್ ಪ್ರದೇಶದ ಜನರಿಗೆ ಮನೆ ಮನೆಗೆ ದಿನಬಳಕೆ ವಸ್ತುಗಳನ್ನು ವಿತರಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಂದಲಗಿ ಗ್ರಾಮದ ಉನ್ನತೀಕರಿಸಿದ ಸಕರ್ಾರಿ ಉದರ್ು ಹಿರಿಯ ಪ್ರಾಥಮಿಕ ಶಾಲೆಯನ್ನು ಕ್ವಾರಂಟೈನ್ ಹಾಗೂ ಫೀವರ್ ಕ್ಲಿನಿಕ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ದಿನಾಂಕ 23-04-2020 ರಿಂದ ಸೋಂಕಿತನ ಸಂಪರ್ಕದಲ್ಲಿರುವವರು ಕೂಡಲೇ ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಗ್ಗಾಂವ ತಾಲೂಕಾ ಆಸ್ಪತ್ರೆ, ಕೋಣನಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಬಂಕಾಪೂರ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.