ವಿದ್ಯಾರ್ಥಿ ಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಎಂಗೆ ಮನವಿ

ಲೋಕದರ್ಶನವರದಿ

ಹಾವೇರಿ೦೮: ಡಿಗ್ರಿ, ಪಿಜಿ, ಇಂಜಿನಿಯರಿಂಗ್, ಡಿಪ್ಲೋಮಾ, ಕಾನೂನು ಹಾಗೂ ಎಲ್ಲಾ ವಿದ್ಯಾಥರ್ಿಗಳ ಪರೀಕ್ಷೆಗಳನ್ನು ರದ್ದುಪಡಿಸಬೇಕು.ವಿದ್ಯಾಥರ್ಿಗಳ ಎಲ್ಲ ಶೈಕ್ಷಣಿಕ ಶುಲ್ಕಗಳನ್ನು ಆರು ತಿಂಗಳ ಕಾಲ ಮನ್ನಾ ಮಾಡಬೇಕು. ಆನ್ಲೈನ್ ಶಿಕ್ಷಣ ಕಡ್ಡಾಯ ಸರಿಯಾದ ಕ್ರಮವಲ್ಲ. ಪೋಷಕರಿಂದ ಹಣವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿದ್ಯಾಥರ್ಿಗಳ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ ವಿದ್ಯಾಥರ್ಿ ಫೆಡರೇಷನ್ (ಎಸ್ಎಫ್ಐ)ಕಾರ್ಯಕರ್ತರು ತಹಶೀಲ್ದಾರ ಶಂಕರಜಿ.ಎಸ್ ಅವರ ಮೂಲಕ  ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.  

  ರಾಜ್ಯದಲ್ಲಿನ 12 ತರಗತಿವರೆಗೆ ಎಲ್ಲ ವಿದ್ಯಾಥರ್ಿಗಳಿಗೆ ಮಧ್ಯಾಹ್ನ ಬಿಸಿಯೂಟ ನೀಡಬೇಕು. ಇಲ್ಲವೇ ಕೇರಳ ರಾಜ್ಯಸಕರ್ಾರದ ಮಾದರಿಯಲ್ಲಿ ಪ್ರತಿ ತಿಂಗಳು 10 ಅಕ್ಕಿ ಹಾಗೂ ಅಗತ್ಯ ಆಹಾರ ಪದಾರ್ಥಗಳನ್ನು 6 ತಿಂಗಳು ಕಾಲ ವಿದ್ಯಾಥರ್ಿಗಳ ಮನೆಗೆ ತಲುಪಿಸಬೇಕು. 

      ವೈದ್ಯಕೀಯ ವಿದ್ಯಾಥರ್ಿಗಳಿಗೆ 16 ತಿಂಗಳಿಂದ ಬಾಕಿ ಉಳಿಸಿರುವ ಶಿಷ್ಯವೇತನ ಕೂಡಲೇ ಬಿಡುಗಡೆಗೊಳಿಸಿ, ಫೆಲೋಶಿಪ್, ಸ್ಕಾಲಶರ್ಿಪ್, ಶೈಕ್ಷಣಿಕ ಆಥರ್ಿಕ ನೆರವುಗಳನ್ನು ವಿದ್ಯಾಥರ್ಿಗಳಿಗೆ ತಲುಪಲು ಸಕರ್ಾರ ಹಾಗೂ ವಿಶ್ವ ವಿದ್ಯಾಲಯಗಳು  ಕ್ರಮ  ಕೈಗೊಳ್ಳಬೇಕು. ಲಾಕ್ಡೌನ್ ಸಮಯದಲ್ಲಿ  ಪ್ರತಿ ವಿದ್ಯಾಥರ್ಿಗಳ ಕುಟುಂಬ ನಿರ್ವಹಣೆಗಾಗಿ ಆರು ತಿಂಗಳ ಕಾಲ 7500/- ರೂಪಾಯಿಗಳನ್ನು ನೀಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅತಿಥಿ_ಶಿಕ್ಷಕರು_ಉಪನ್ಯಾಸಕರು ಹಾಗೂ ಕಾಮರ್ಿಕರಿಗೆ ಬಾಕಿ ಸಂಬಳ ಬಿಡುಗಡೆ ಮಾಡಬೇಕು.

          ದೇಶಾದ್ಯಂತ ಯುವತಿಯರು ಮೇಲಿನ ಅತ್ಯಾಚಾರ ಮತ್ತು ಕೊಲೆಗಳ ಏರಿಕೆ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್-19 ಪರೀಕ್ಷೆಗಳನ್ನು ಉಚಿತವಾಗಿ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗೆದರ ನಿಗದಿ ಮಾಡಿರುವುದು ಖಂಡನೀಯ. ಪೆಟ್ರೋಲ್ ಡೀಸೆಲ್ ಬೆಲೆ_ಏರಿಕೆ ವಿರೋಧಿಸಿ ಮತ್ತು ಪೆಟ್ರೋಲ್ ಡೀಸೆಲ್ ಗ್ಯಾಸ್ಗಳನ್ನು ಜಿಎಸ್ಟಿ  ಪರಿಧಿಯೊಳಗೆ ತರುವಂತಾಗಬೇಕು. ಉದ್ಯೋಗ ಸೃಷ್ಟಿಗೆ ಅವಕಾಶ ನೀಡಬೇಕು. ಹೊಸ ಶಿಕ್ಷಣ ನೀತಿ-2019 ಜಾರಿಯಿಂದಾಗುವ ಶಿಕ್ಷಣದ ಖಾಸಗೀಕರಣ ಮತ್ತು ಕೇಸರೀಕರಣದ ಅಪಾಯಕಾರಿ ಅಂಶಗಳನ್ನು ಅರಿತು ತಡೆಯುವ ಕೆಲಸವನ್ನು ಸಕರ್ಾರ ಮಾಡಲು ಮುಂದಾಗಬೇಕುಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದಶರ್ಿ ಬಸವರಾಜ ಭೋವಿ, ಪ್ರಸನ್ನ ಕಡಕೋಳ ಇತರರು ಇದ್ದರು.