ರಾಜ್ಯ ಸರ್ಕಾರ ದುಡಿದು ತಿನ್ನುವ ವರ್ಗದ ಜನರನ್ನೂ ಕೈಬಿಡುವುದಿಲ್ಲ:ಶಾಸಕ ವಿರೂಪಾಕ್ಷಪ್ಪ

ಬ್ಯಾಡಗಿ೧೦: ಕೋವಿಡ್-19 (ಕೋರೊನಾ) ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಆದೇಶದಿಂದ ದೇಶ ಆಥರ್ಿಕ ಸಂಕಷ್ಟಕ್ಕೆ ಸಿಲುಕಿದ್ದು ಸುಧಾರಣೆಗೆ ಕನಿಷ್ಟ 10 ವರ್ಷಗಳೇ ಬೇಕಾಗಬಹುದು, ಪ್ರಕೃತಿ ವಿಕೋಪಕ್ಕಿಂತ ಭೀಕರ ಸನ್ನಿವೇಶ ಎದುರಾಗಿವೆ, ಇಂತಹ ಆಥರ್ಿಕ ಸಂಕಷ್ಟದಲ್ಲಿಯೂ ರಾಜ್ಯ ಸಕರ್ಾರ ಬಡ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ್ದು ಯಾವುದೇ ಕಾರಣಕ್ಕೂ ದುಡಿದು ತಿನ್ನುವ ವರ್ಗದ ಜನರನ್ನು ಕೈಬಿಡುವುದಿಲ್ಲವೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.

 ಪಟ್ಟಣದ ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಆಥರ್ಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉಚಿತ ಸೌರಶಕ್ತಿ (ಸೋಲಾ ರ್) ಬಲ್ಬಗಳನ್ನು ವಿತರಿಸಿ ಅವರು ಮಾತನಾಡಿದರು. ಕೋರೋನಾ ವೈರಸ್ ದೇಶದ ಶೇ.90ರಷ್ಟು ಜನರು ಮನೆ ಯಲ್ಲಿ ಕುಳಿತು ತಿನ್ನುವಂತೆ ಮಾಡಿದೆ, ಸಕರ್ಾರಕ್ಕೆ ನಿರಂತರ ಬರುತ್ತಿದ್ದ ಆದಾಯಕ್ಕೆ ಧಕ್ಕೆ ಬಿದ್ದಿದೆ, ಪ್ರಸ್ತುತ ಸನ್ನಿವೇಶ ಯಾವುದೇ ಪೃಕ್ರತಿ ವಿಕೋಪಕ್ಕಿಂತ ಭೀಕರವಾಗಿದೆ, ಪ್ರತಿನಿತ್ಯ ದುಡಿದು ತಿನ್ನುವ ಕ್ಷೌರಿಕರು, ಟ್ಯಾಕ್ಸಿಚಾಲಕರು, ನೇಕಾರರು, ಮೀನುಗಾರರು ಸೇರಿದಂತೆ ಇನ್ನಿತರ ವರ್ಗದ ಕೂಲಿಕಾಮರ್ಿಕರ ಪ್ರತಿ ಕುಟುಂಬಕ್ಕೆ ರೂ.5 ಸಾವಿರ ಪರಿಹಾರ ಧನ ನೀಡುವ ಮೂಲಕ ಕೊರೋನಾ ಸಂತ್ರಸ್ಥರ ನೆರವಿಗೆ ಬಂದಿದೆ ಎಂದರು.

     ಅನ್ನ,ನೀರು ನೀಡಿದವರಿಗೆ ಧನ್ಯವಾದ:ಪುರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ದಿಲೀಪ್ ಶಷಿ ಮಾತನಾಡಿ, ಲಾಕ್ಡೌನ್ ಆದೇಶ ಹೊರ ಬೀಳುತ್ತಿದ್ದಂತೆ ಜನರು ಸಕರ್ಾರ ನೆರವಿಗೆ ಬಹಳಷ್ಟು ಜನರು ನಿಂತಿರುವ ಕಾರ್ಯ ಶ್ಲಾಘನೀಯ, ಉಳ್ಳವರು ಆಥರ್ಿಕ ನೆರವು ನೀಡಿದರೇ ಇನ್ನೂ ಕೆಲ ಶ್ರೀಮಂತ ವರ್ಗದ ಜನರು ನಿರ್ಗತಿಕರು ಕೂಲಿ ಕಾಮರ್ಿಕರು, ಅಲೆ ಮಾರಿಗಳ ಸೇರಿದಂತೆ ವಲಸೆ ಕಾಮರ್ಿಕರು ಕುಟುಂಬಗಳನ್ನು ಗುತರ್ಿಸಿದ್ದು ನಿತ್ಯವೂ ಅವರಿಗೆ ಸಿದ್ಧಪಡಿಸಿದ ಊಟ ಮತ್ತು ಉಪಹಾರ, ಆಹಾರ ಧಾನ್ಯ ಸೇರಿದಂತೆ ವಿವಿಧ ವಸ್ತುಗಳನ್ನು ಉಚಿತವಾಗಿ ವಿತರಿಸುವ ಮೂಲಕ ಸಕರ್ಾರ ಬೆನ್ನಿಗೆ ನಿಂತು ಸಹಕಾರ ನೀಡಿದ್ದು ಅವರೆ ಲ್ಲರಿಗೂ ಸಕರ್ಾರದ ಪರವಾಗಿ ಧನ್ಯವಾದಗಳನ್ನು ಅಪರ್ಿಸುತ್ತೇನೆ ಎಂದರು.

ಸಾಮೂಹಿಕ ಹೊಣೆಗಾರಿಕೆ ಇರಲಿ:ತಹಶೀಲ್ದಾರ ಶರಣಮ್ಮ ಮಾತನಾಡಿ, ಮುಂದಿನ ಮೇ.17 ರವರೆಗೆ ಲಾಕ್ಡೌನ್ ಮುಂದು ವರೆದಿದ್ದು ಮನೆಯಲ್ಲಿರುವ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಲಾಕ್ಡೌನ್ ಆದೇಶಕ್ಕೆ ಸಾಮೂಹಿಕ ಹೊಣೆಗಾರಿಕೆ ತೋರಬೇಕಾಗಿದೆ, ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸಕರ್ಾರ ತೆಗೆದುಕೊಂ ಡಿರುವ ಮುಂಜಾಗ್ರತಾ ಕ್ರಮಗಳನ್ನು ಚಾಚೂ ತಪ್ಪದೇ ಅನುಸರಿಸುವಂತೆ ಮನವಿ ಮಾಡಿದರು. 

  ಕೋರೋನಾ ವಾರಿಯರ್ಸ್ಗಳಾದ ಉಪವಿಭಾಗಾಧಿಕಾರಿ ದಿಲೀಪ್ ಸಷಿ, ತಹಶೀಲ್ಧಾರ ಶರಣಮ್ಮ ಸಿಪಿಐ ಭಾಗ್ಯವತಿ ಸೇರಿದಂತೆ ತಾಲೂಕಿನ ಎಲ್ಲ ವರದಿಗಾರರನ್ನು ಹಾಗೂ ಪುರಸಭೆ ಸಿಬ್ಬಂದಿಗಳಿಗೆ ಪುರಸಭೆ ಆಡಳಿತ ಮಂಡಳಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಸದಸ್ಯರಾದ ಬಿ.ಎಮ್.ಛತ್ರದ, ರಾಮಣ್ಣ ಕೋಡಿಹಳ್ಳಿ, ಶಿವರಾಜ್ ಅಂಗಡಿ, ಚಂದ್ರಣ್ಣ ಶೆಟ್ಟರ, ಈರಣ್ಣಬಣಕಾರ, ಗಾಯತ್ರಿ ರಾಯಕರ್, ಸುಭಾಸ್ ಮಾಳಗಿ, ಮಂಜುನಾಥ ಬಾಕರ್ಿ, ಕವಿತಾ ಸೊಪ್ಪಿನಮಠ, ಫಕ್ಕೀ ರಮ್ಮ ಛಲವಾದಿ, ಸರೋಜಾ ಉಳ್ಳಾಗಡ್ಡಿ, ಶಂಕರ ಕುಸಗೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.