ರಾಜ್ಯ ಸರ್ಕಾರ ಪಂಚಮ ಸಾಲಿ ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ಹೋರಟಿದೆ. ಎಂ.ಬಿ.ಬಸವರಾಜ
ಹೂವಿನಹಡಗಲಿ 12: ಬೆಳಗಾವಿಯಲ್ಲಿ ಪೊಲೀಸರು ಲಾಠಿ ಪ್ರಹಾರ ಅತ್ಯಂತ ಹೇಯ, ಅಮಾನವೀಯ ಕೃತ್ಯವಾಗಿದೆ. ರಾಜ್ಯ ಸರ್ಕಾರದಿಂದ ಇದುವರೆಗೂ ಪಂಚಮ ಸಾಲಿ ಸಮಾಜಕ್ಕೆ ಮೀಸಲು ನೀಡುವ ಕುರಿತಂತೆ ಯಾವುದೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹಾಗಾಗಿ ಬೆಳಗಾವಿಯಲ್ಲಿ ಬಸವಜಯಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪಂಚಮಸಾಲಿ ಸಮುದಾಯಕ್ಕೆ ಸ್ವಾಮೀಜಿ ಹಾಗೂ ಮುಖಂಡರ ನೇತೃತ್ವದಲ್ಲಿ 2ಎ ಮೀಸಲಾತಿಗೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ನಡೆದಿದೆ ಎಂದು ವಿಜಯನಗರ ಜಿಲ್ಲಾ ಬಿಜೆಪಿ ಮುಖಂಡ ಎಂ ಬಿ ಬಸವರಾಜ ಆರೋಪಿಸಿದರು ಅವರು ನಮ್ಮ ಪತ್ರಿಕಾ ಪ್ರತಿನಿಧಿಯೊಂದಿಗೆ ಬುಧವಾರ ಸಂಜೆ ಮಾತನಾಡಿ ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಮುಖ್ಯಮಂತ್ರಿಗಳು ಆಗಮಿಸಿ ಮನವಿ ಸ್ವೀಕರಿಸಬೇಕಿತ್ತು. ಆದರೆ ಸರಿಯಾದ ಸ್ಪಂದನೆ ಸಿಗದ ಪರಿಣಾಮ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಜನರ ನೋವು ನಲಿವುಗಳನ್ನು ಆಲಿಸಿದೆ ಅವಮಾನೀಸುವ ಧೋರಣೆ ಸರಿಯಲ್ಲ. ಇತ್ತ ಪ್ರತಿಭಟನೆಕಾರರನ್ನು ನಿಯಂತ್ರಿಸುವ ನೆಪದಲ್ಲಿ ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಸ್ವಾಮೀಜಿ, ಸಮಾಜದ ಶಾಸಕರು, ಮುಖಂಡರು ಹಾಗೂಕಾರ್ಯಕರ್ತರನ್ನು ಹೇದರಿಸುವ ಸರಕಾರದ ಕ್ರಮ ಖಂಡನೀಯ. ಕೆಲ ಸಮಾಜದವರು ಪಂಚಮ ಸಾಲಿಗಳಿಗೆ ಮತ್ತು ಕಾಶಪ್ಪನವರ ನಡೆ ಮೀಸಲು ನೀಡದಂತೆ ಮನವಿ ಮಾಡಿರುವುದು. ಹೆತ್ತವರಿಗೆ ದ್ರೋಹ ಮಾಡಿದ ಹಾಗೆ. ಕಾಶಪ್ಪನವರು ಪಂಚಮ ಸಾಲಿ ಸಮಾಜದಿಂದ ಗೆದ್ದು ಇವತ್ತು ಸಮಾಜದ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಗಾಯಗೊಂಡ ಪ್ರತಿಭಟನಾಕಾರರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಬಸವ ಜಯಮೃತ್ಯುಂಜಯ ಸ್ವಾಮಿ ಅವರಿಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ಆಗ್ರಹಿಸಿದರು.