ಗದಗ 21: ದೇಶದ ಆಂತರಿಕ ಭದ್ರತೆಗೋಸ್ಕರ ಪೊಲೀಸರು ತಮ್ಮ ಪ್ರಾಣವನ್ನು ಮುಡುಪಾಗಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಅವರ ಸೇವೆ ಪ್ರಶಂಸನೀಯವಾದದ್ದು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ತಿಳಿಸಿದರು.
ನಗರದ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳ ಕಚೇರಿ ಆವರಣದಲ್ಲಿಂದು ಜರುಗಿದ ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛವಿರಿಸಿ ಗೌರವ ಸಲ್ಲಿಸಿ ಅವರು ಮಾತನಾಡಿದರು. ನಾಡಿನ ಜನತೆಗೆ ಬದುಕಲು ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಮುಡುಪಾಗಿಟ್ಟು ಸಾರ್ವಜನಿಕರ ಜೀವ ಮತ್ತು ಆಸ್ತಿ ರಕ್ಷಣೆಗಾಗಿ ಹೋರಾಡಿದ್ದಾರೆ. ಹಲವರು ಹುತಾತ್ಮರಾಗಿದ್ದಾರೆ ಅವರ ಸೇವೆ ಸ್ಮರಿಸಿ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಇತ್ತೀಚೆಗೆ ಜಿಲ್ಲೆಯಲ್ಲಿ ನೆರೆ ಹಾವಳಿ ಸಂದರ್ಭದಲ್ಲಿ ಪ್ರವಾಹ ಪೀಡಿತ ಗ್ರಾಮಗಳಲ್ಲಿನ 50,000 ಜನರನ್ನು ಯಾವುದೇ ಪ್ರಾಣಹಾನಿಯಿಲ್ಲದೇ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಸುರಕ್ಷಿತ ಸ್ಥಳಾಂತರಕ್ಕೆ ಜಿಲ್ಲಾಡಳಿತದೊಂದಿಗೆ ಪೊಲೀಸ ಇಲಾಖೆಯ ಸಹಕಾರ ಅನನ್ಯವಾಗಿದೆ. ಕರ್ತವ್ಯದಲ್ಲಿ ಪ್ರಾಣಾರ್ಪಣೆ ಮಾಡಿದ ಪೊಲೀಸರ ಆತ್ಮಕ್ಕೆ ಹಾಗೂ ಅವರ ಕುಟುಂಬಕ್ಕೆ ಪರಮಾತ್ಮನು ಶಾಂತಿ ನೀಡಲಿ ಎಂದು ತಿಳಿಸಿದರು.
ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ ಅವರು ಮಾತನಾಡಿ ವೀರ ಮರಣ ಹೊಂದಿರುವ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೆನಪಿಸಿಕೊಳ್ಳುವದಕ್ಕೋಸ್ಕರ ಈ ಪೊಲೀಸ ಹುತಾತ್ಮರ ದಿನಾಚರಣೆ ಆಚರಿಸುತ್ತಿದ್ದೇವೆ. ತಮ್ಮ ವೈಯಕ್ತಿಕ ಜೀವನ ಲೆಕ್ಕಿಸದೇ ಕರ್ತವ್ಯ ನಿರ್ವಹಣೆ ಮಾಡಿ ದುಷ್ಟ ಶಕ್ತಿಗಳೊಂದಿಗೆ ಹೋರಾಟ ನಡೆಸಿ ಪ್ರಾಣಾರ್ಪಣೆ ಮಾಡಿದ ಪೊಲೀಸರ ಸೇವೆ ಪ್ರಶಂಸನೀಯವಾದದ್ದು. ಅವರ ಕುಟುಂಬಕ್ಕೆ ಭಗವಂತನು ಶಾಂತಿ ನೀಡಲಿ ಎಂದು ಡಾ.ಆನಂದ್ ಕೆ ತಿಳಿಸಿದರು.
ಗದಗ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಶ್ರೀನಾಥ ಜೋಶಿ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ 21-10-1959 ರಂದು ಸಿಆರ್ಪಿಎಫ್ ಇವರ ಒಂದು ಪೊಲೀಸ ಪಾಟರ್ಿ ಶ್ರೀ ಕರಣ್ ಸಿಂಗ್ ಡಿ ಎಸ್ ಪಿ ರವರ ನೇತೃತ್ವದಲ್ಲಿ ಭಾರತ- ಚೀನಾ ಗಡಿಭಾಗದಲ್ಲಿ ಗಸ್ತು ಮಾಡುವಾಗಿ ಹಾಟ್ಸ್ಪ್ರಿಂಗ್ ಪೋಸ್ಟ್ ಹತ್ತಿರ ಚೀನಾ ದೇಶದ ಸೈನಿಕರು ಅತಿಕ್ರಮಣ ಪ್ರವೇಶ ಮಾಡಿದರು. ಭಾರತೀಯ ಪೊಲೀಸರ ಹತ್ತಿರ ಕೇವಲ ಕೆಲವು ರೈಫಲ್ಗಳಿದ್ದು ಚೀನಾ ದೇಶದ ಸೈನಿಕರ ಹತ್ತಿರ ಆಧುನಿಕ ಶಸ್ತ್ರಾಸ್ತ್ರಗಳಿದ್ದು ಮತ್ತು ಸೈನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೂ ಸಹ ಭಾರತದ ಪೊಲೀಸರು ಧೈರ್ಯ ಸಾಹಸದಿಂದ ವೈರಿಗಳ ವಿರುದ್ಧ ತಮ್ಮ ಕೊನೆಯ ಉಸಿರು ಇರುವವರೆಗೂ ಯುದ್ಧ ಮಾಡಿದರು. ಕೆಲವರು ಕೊಲ್ಲಲ್ಪಟ್ಟರು. ಉಳಿದವರು ಚೀನಾ ಸೈನಿಕರ ಬಂಧಿಗಳಾದರು. ಈ ವೀರರು ತಮ್ಮ ದೇಶಕ್ಕಾಗಿ ಪ್ರಾಣವನ್ನೇ ಬಲಿದಾನ ಕೊಟ್ಟ ದಿನದ ಹಾಗೂ ಹುತಾತ್ಮರ ನೆನಪಿಗಾಗಿ ಹಾಟ್ಸ್ಪ್ರಿಂಗ್ ಪೋಸ್ಟ್ ನಲ್ಲಿ ಒಂದು ಸ್ಮಾರಕ ಕಟ್ಟಿಸಲಾಗಿದೆ. ತಮ್ಮ ಪ್ರಾಣವನ್ನು ಬಲಿದಾನ ನೀಡಿದವರ ನೆನಪಿಗಾಗಿ ಹಾಗೂ ಪ್ರತಿ ವರ್ಷ ಕರ್ತವ್ಯದ ಮೇಲೆ ಪ್ರಾಣವನ್ನು ಬಲಿದಾನ ಕೊಟ್ಟ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾಗೂ ಅವರಿಗೆ ಶ್ರದ್ಧಾಂಜಲಿ ಅಪರ್ಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಅಕ್ಟೋಬರ್ 21ರಂದು ಹುತಾತ್ಮರ ದಿನವೆಂದು ಪೊಲೀಸ ಇಲಾಖೆಯಿಂದ ಆಚರಿಸಲಾಗುತ್ತದೆ ಎಂದು ಶ್ರೀನಾಥ ಜೋಶಿ ತಿಳಿಸಿದರು. ಗದಗನಲ್ಲಿ ಪೊಲೀಸ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಹುತಾತ್ಮರಾದ ದಿ. ಶಿವಪ್ರಕಾಶ ವೀರಯ್ಯ ಲೂತಿಮಠ, ದಿ. ವೀರಪ್ಪಾ ತೋಟಪ್ಪ ಲಟ್ಟಿ ಅವರು ಸೇರಿದಂತೆ ವಿವಿಧ ಹುತಾತ್ಮರುಗಳ ಹೆಸರುಗಳನ್ನು ವಾಚಿಸಿದರು.
ಪರೇಡ್ ಕಮಾಂಡರ್ ಡಿ.ಎಸ್. ಧನಗರ್ ಅವರು ಕವಾಯಿತು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಡಿ.ಎಸ್.ಪಿ. ವೈ.ಎಸ್. ಏಗನಗೌಡರ್, ವಿ.ವಿ. ನಾಯಕ, ಸಹಾಯಕ ಆಡಳಿತಾಧಿಕಾರಿ ಎನ್.ಎ. ಹಿಪ್ಪರಗಿ, ಬಿ.ಕೆ ಯಡಹಳ್ಳಿ , ಪೊಲೀಸ ಇನ್ಸ್ಪೆಕ್ಟರ್ ಆರ್.ಎಫ್. ದೇಸಾಯಿ, ಪ್ರೊ. ಕೆ.ಎಚ್. ಬೇಲೂರ, ಗಣೇಶ ಸಿಂಗ್ ಬ್ಯಾಳಿ, ಮಾಜಿ ಸೈನಿಕರು ಹಾಗೂ ಹಿರಿಯ ನಾಗರಿಕರು, ಪೊಲೀಸ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಎಂ.ಟಿ. ಭಟ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಆರ್. ಪಾಟೀಲ ವಂದನಾರ್ಪಣೆ ಸಲ್ಲಿಸಿದರು.