ಕೊರೊನಾ ವೈರಸ್ ಸಂದರ್ಭದಲ್ಲಿ ವೈದ್ಯರ ಸೇವೆ ಶ್ಲಾಘನೀಯ

ಲೋಕದರ್ಶನವರದಿ

ರಾಣೇಬೆನ್ನೂರು: ಏ.20: ಕೊರೊನಾ ವೈರಸ್ ಸೊಂಕು ತಗುಲಿತ್ತಿರುವ ಕ್ಲೀಷ್ಠಕರ ಸಂದರ್ಭದಲ್ಲಿಯೂ ಸಹ ತಮ್ಮ ಕುಟುಂಬವನ್ನು ಮರೆತು ನಿತ್ಯವೂ ವೈದ್ಯರು ಜನರ ಆರೋಗ್ಯ ರಕ್ಷಣೆಯ ಸೇವೆಯಲ್ಲಿ ತೊಡಗಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಇಂದಿನ ಸನ್ನಿವೇಶದಲ್ಲಿ  ಅವರ ಆರೋಗ್ಯ ರಕ್ಷಣೆ ಬಹಳ ಮುಖ್ಯವಾಗಿದೆ ಎಂದು ಪಿಕೆಕೆ ಇನಿಸಿಯೇಟಿವ್ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಕೋಳಿವಾಡ ಹೇಳಿದರು.

ಅವರು ಸೋಮವಾರ ಇಲ್ಲಿನ ಹಲಗೇರಿ ರಸ್ತೆಯ ಸಾರ್ವಜನಿಕ ಸಕರ್ಾರಿ ಆಸ್ಪತ್ರೆ ಸಭಾಂಗಣದಲ್ಲಿ ಪಿಕೆಕೆ ಇನಿಸಿಯೇಟಿವ್ ಕೊಡಮಾಡಿದ ಸುರಕ್ಷಾ ಕವಚಗಳನ್ನು ವಿತರಿಸಿ ಮಾತನಾಡಿದರು. 

ಸಾರ್ವಜನಿಕರು ಕರೋನಾ ವೈರಸ್ ಸೊಂಕು ರೋಗಾಣು ಹರಡದಂತೆ ಸಂಪೂರ್ಣ ಸ್ವಯಂ ಗೃಹ ದಿಗ್ಭಂಧನದಲ್ಲಿದ್ದು, ತಾವೂ ಸೇರಿದಂತೆ ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳುವ ಹೊಣೆ ಹೊರಬೇಕಾಗಿದೆ.  ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳು ಅತ್ಯಂತ ಸಕಾಲಿಕವಾಗಿದೆ ಎಂದ ಅವರು ಇದರಿಂದಲೇ ಇಂದು ರಾಜ್ಯದಲ್ಲಿ ಕರೋನಾ ವೈರಸ್ ಶಂಕೆ ಅತ್ಯಂತ ಕಡಿಮೆಯಲ್ಲಿದೆ.  ವಿಶೇಷವಾಗಿ ಜಿಲ್ಲೆಯಲ್ಲಿ ಇಲ್ಲವೇ  ಇಲ್ಲ.  ಇದು ಬರುವುದೂ ಬೇಡ ಅದಕ್ಕಾಗಿ ಮೇ 7ರವರೆಗೆ ಸ್ವಯಂಗೃಹ ದಿಗ್ಭಂಧನದಲ್ಲಿ ಇರಬೇಕಾಗದ ಅಗತ್ಯವಿದೆ ಎಂದರು. ತಾಲೂಕಾ ಆರೋಗ್ಯಾಧಿಕಾರಿ ಡಾ| ಸಂತೋಷ.ಜಿ ಅವರಿಗೆ ಪ್ರಕಾಶ್ ಕೋಳಿವಾಡ ಅವರಿಗೆ 50 ಸುರಕ್ಷಾ ಪಿಪಿಇ ಕಿಟ್ಗಳನ್ನು ವಿತರಿಸಿದರು.

        ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಸದಸ್ಯರಾದ ಏಕನಾಥ ಬಾನುವಳ್ಳಿ, ಜಿಪಂ ಸದಸ್ಯ ಶಿವಾನಂದ ಕನ್ನಪ್ಪಳವರ, ಮಾಜಿ ಸದಸ್ಯ ಕೃಷ್ಣಪ್ಪ ಕಂಬಳಿ, ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಬಸನಗೌಡ ಮರದ, ರಮೇಶ ಬಿಸಲಳ್ಳಿ, ರಾಮಣ್ಣ ನಾಯಕ, ವೀರನಗೌಡ ಪೊಲೀಸಗೌಡ್ರ, ಮಂಜನಗೌಡ ಪಾಟೀಲ, ಬಸವರಾಜ ಹುಚ್ಚಗೊಂಡರ, ಸೀತಾರಾಮರಡ್ಡಿ, ಮಹೇಶ ಕೆಂಚರಡ್ಡಿ, ಶರೀಶ ದೊಡ್ಮನಿ, ಮಧು ಕೋಳಿವಾಡ, ಗಣೇಶ ಜಾಡಮಲಿ, ಬಸವರಾಜ ಸವಣೂರ, ಇಫರ್ಾನ್ ದಿಡಗೂರ, ತಿರುಪತಿ ಅಜ್ಜನವರ, ಇಷರ್ಾದ್ ಬಳ್ಳಾರಿ, ಹನುಮಮತಪ್ಪ ಬ್ಯಾಲದಹಳ್ಳಿ, ಸೇರಿದಂತೆ ಮತ್ತಿತರ ಮುಖಂಡರು ಕಾಂಗ್ರೇಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.