ಲೋಕದರ್ಶನ ವರದಿ
ಉತ್ತಮ ಸಮಾಜ ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದದ್ದು- ಮುನವಳ್ಳಿ
ಮುಧೋಳ 21: “ಉತ್ತಮ ಸಮಾಜ ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದದ್ದು ಅದನ್ನರಿತು ಮಾಧ್ಯಮ ಗಳು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಬೇಕು. ಕಾಲ ಬದಲಾದಂತೆ ಪತ್ರಿಕೋದ್ಯಮದ ಆಯಾಮವೂ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಭರಾಟೆ ಹೆಚ್ಚಾಗಿದ್ದು, ಬ್ರೇಕಿಂಗ್ ನ್ಯೂಸ್ ಬಿತ್ತರಿಸುವ ಧಾವಂತದಲ್ಲಿ ಜನರ ಅಗತ್ಯ ಗಳ ಬಗ್ಗೆ ಯೋಚನೆ ಮಾಡುತ್ತಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮಾಧ್ಯಮಗಳು ವಸ್ತು ನಿಷ್ಠ ವರದಿ ಮಾಡಬೇಕಿದೆ,'' ಎಂದು ಪತ್ರಕರ್ತ ಹಾಗೂ ಮುಧೋಳ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವನಾಥ ಮುನವಳ್ಳಿ ಹೇಳಿದರು.
ಮುಧೋಳ ಸರ್ಕಾರಿ ಪ್ರಥಮ ಧರ್ಜೆ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ 1 ಮತ್ತು 2ರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಮಂಟೂರ ದತ್ತು ಗ್ರಾಮದಲ್ಲಿ ಏಳು ದಿನಗಳವರೆಗೆ ಹಮ್ಮಿಕೊಂಡಿ ರುವ ವಾರ್ಷಿಕ ವಿಶೇಷ ಸೇವಾ ಶಿಬಿರ ಕಾರ್ಯಕ್ರಮದಲ್ಲಿ ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಸಮಾಜವನ್ನು ಜಾಗೃತವನ್ನಾಗಿಸುವುದು ಸಮೂಹ ಮಾಧ್ಯಮಗಳ ಪ್ರಮುಖ ಕರ್ತವ್ಯವಾಗಿದೆ, “ಅಕ್ಷರ ಜೋಡಣೆಯಿಂದ ಆಫ್‌ಸೆಟ್ ಮುದ್ರಣ ದವರೆಗೆ ಅಗಾಧವಾಗಿ ಬೆಳೆದಿರುವ ಮುದ್ರಣ ಮಾಧ್ಯಮಕ್ಕೆ ಎಂದಿಗೂ ಸಾವಿಲ್ಲ ಎಂದು ಹೇಳಿ ಸುದ್ದಿ ಮಾಧ್ಯಮಗಳು ಇಡೀ ಸಮಾಜವನ್ನು ಸುಧಾರಿಸುವ ಮತ್ತು ಆರೋಗ್ಯಕರವಾಗಿ ನಿರ್ಮಿಸುವಂತಹ ಕಳಕಳಿಯ ಸುದ್ದಿಗಳನ್ನು ಬಿತ್ತರಿಸಬೇಕೇ ವಿನಾ, ಗಂಡಹೆಂಡಿರ ಜಗಳದಂತಹ ಕ್ಷುಲ್ಲಕ ಮತ್ತು ವೈಯಕ್ತಿಕ ಸಂಗತಿಗಳನ್ನು ಪ್ರಸಾರ ಮಾಡುತ್ತ ಕಾಲ ಕಳೆಯಬಾರದೆಂದು ಹೇಳಿದರು.
“ಮಾಧ್ಯಮಗಳು ಇತರರ ಖಾಸಗಿ ವಿಷಯವನ್ನು ಗೌರವಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ-್ಯದ ಹೆಸರಿನಲ್ಲಿ ಬರೆಯುವ ಸುದ್ದಿಗಳು ಯಾವುದೇ ವ್ಯಕ್ತಿಯ ಖಾಸಗಿ ಬದುಕಿಗೆ ಧಕ್ಕೆ ಮಾಡಬಾರದು. ಮಾಧ್ಯಮಗಳಿಗೆ ನ್ಯಾಯಾಂಗ ಮತ್ತು ಶಾಸಕಾಂಗಗಳೆರಡು ಕೆಂಪು ದೀಪಗಳಿದ್ದಂತೆ ಎಂದು ಹೇಳಿದ ಅವರು ವಿದ್ಯಾರ್ಥಿಗಳು ತಾವು ಬಳಸುತ್ತಿರುವ ಮೊಬೈಲ್ ಗಳ ಮೂಲಕ ಮಾಹಿತಿಯನ್ನು ಪಡೆದು ಕೊಂಡು ಹೊಸ ಹೊಸ ಜ್ಞಾನವನ್ನು ಸಂಪಾದಿಸಬೇಕೆಂದು ಹೇಳಿದರು.
ಜಾನಪದ ವಿದ್ವಾಂಸ ಡಾ.ಸಿದ್ದಪ್ಪ ಬಿದರಿ ಅವರು ಹಾಡುಗಳನ್ನು ಹಾಡುವದರ ಮೂಲಕ ಜಾನಪದ ಸಾಹಿತ್ಯದ ಕುರಿತು ಮಾತನಾಡಿ ಹಿಂದಿನ ಮತ್ತು ಇಂದಿನ ಕಾಲಘಟ್ಟದ ಬದಲಾವಣೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಚನ್ನಬಸು ಗುರೂಜಿ ಉಪಸ್ಥಿತರಿದ್ದು ಎನ್‌ಎಸ್‌ಎಸ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ದರು. ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಪಿ. ಕೊಕಟನೂರ ಅಧ್ಯಕ್ಷತೆವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ರೇಖಾಮಣಿ ಸಿ.ಎಂ, ಪ್ರೊ.ಶಂಕರೆಪ್ಪ ಹಳಿಂಗಳಿ ಹಾಗೂ ಮಂಟೂರ ಗ್ರಾಮದ ಪ್ರಮುಖರಾದ ರಾಜೇಂದ್ರ ತಿಮಸಾನಿ, ಸುರೇಶ ಕಾಂಬಳೆ, ಲಕ್ಕಪ್ಪ ಪಾಯಗೊಂಡ, ಅಡಿವೆಪ್ಪ ಉಳ್ಳಾಗಡ್ಡಿ, ಚನ್ನಪ್ಪ ಬಾಗಲಕೋಟ, ಕಾಡಪ್ಪ ನಾಗಣ್ಣವರ, ಉಪನ್ಯಾಸಕ ರಾದ ಸೈದುಸಾಬ ನಧಾಪ, ಪಾಂಡುರಂಗ ಜಾಧವ, ಡಾ.ಎಚ್.ವ್ಹಿ.ಕುಲಗೋಡ ವೇದಿಕೆ ಮೇಲೆ ಉಪಸ್ಥಿತರಿದ್ದರು.
--
ಪೊಟೋ ಏ.21ಎಂಡಿಎಲ್ 1. ಎನ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಪತ್ರಕರ್ತ, ಉಪನ್ಯಾಸಕ ವಿಶ್ವನಾಥ ಮುನವಳ್ಳಿ ಮಾತನಾಡುತ್ತಿರುವುದು.
--