ರಾಷ್ಟ್ರದ ಹಿತ ಕಾಯುವಲ್ಲಿ ಪತ್ರಕರ್ತರ ಪಾತ್ರ ಮುಖ್ಯ

ಬೆಳಗಾವಿ (ಅಹ್ಮದಾಬಾದ್) 29: ರಾಷ್ಟ್ರದ ಮತ್ತು ಸಮಾಜದ ಹಿತ ಕಾಯುವಲ್ಲಿ ಪತ್ರಕರ್ತರ ಪಾತ್ರ ಅತಿ ಮಹತ್ವದ್ದಾಗಿದೆ ಎಂದು ಗುಜರಾತ್ನನ  ರಾಜ್ಯಪಾಲ ಶ್ರೀ ದೇವವ್ರತ್ ಆಚಾರ್ಯ ಹೇಳಿದರು.

ಅವರು ಗುಜರಾತ್ನ ರಾಜಧಾನಿ ಅಹಮದಾಬಾದ್ನಲ್ಲಿ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ನ ಒಂದು ದಿನದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ದೇಶದ ಅಭಿವೃದ್ಧಿಯಲ್ಲಿ ಬಡವರ ಹಿತ ಕಾಯುವಲ್ಲಿ ಸರಕಾರದ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಕಾರ್ಯದಲ್ಲಿ ಪತ್ರಕರ್ತರ ಪತ್ರಿಕೆಗಳ ಕಾರ್ಯ ಅತ್ಯಂತ ಮಹತ್ವದ್ದಾಗಿದೆ  ಎಂಬುದನ್ನು ಮರೆಯಲಾಗದು ಎಂದು ಅವರು ನುಡಿದರು . ದೇಶದ ಸವಾರ್ಂಗೀಣ ಅಭಿವೃದ್ಧಿಯಲ್ಲಿ  ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ  ಆಳುವವರಿಂದ  ಅಕಸ್ಮಾತ್ ತಪ್ಪುಗಳಾದಾಗ ಸಕರ್ಾರದ ನಿರ್ಧಾರಗಳು ಸಮಾಜಕ್ಕೆ ಸರಿಯಲ್ಲ ಅನ್ನಿಸಿದಾಗ

ಆ ನಿಧರ್ಾರಗಳನ್ನು ಸರಿಪಡಿಸಿ ಸರಿಯಾದ ದಿಕ್ಕು ತೋರಿಸುವ ಕಾರ್ಯವನ್ನು ಇಲ್ಲಿಯವರಿಗೆ ಜವಾಬ್ದಾರಿಯಿಂದ ಮಾಡುತ್ತಾ ಬಂದಿದ್ದಾರೆ ಎಂದು ಅವರು ಹೇಳಿದರು.ಪತ್ರಕರ್ತರಿಗೆ ಸೂಕ್ತ ರಕ್ಷಣೆ ಮತ್ತು ಅಗತ್ಯವಿರುವ ಸೌಲಭ್ಯಗಳನ್ನು ಸರ್ಕಾರದಿಂದ ಸಿಗುವಂತೆ ತಾವು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಅವರು ನುಡಿದರು.ಮುಂದುವರಿದ ಅವರು ತಾವು ಕೈಗೊಂಡಿರುವ  ಕೃಷಿ ಕುರಿತಾದ ಮಿಷನ್ಗೆ ದೇಶದಾದ್ಯಂತ ಪತ್ರಕರ್ತರು ಸೂಕ್ತ ಪ್ರಚಾರವನ್ನು ನೀಡಿ  ಕೃಷಿಗೆ ಒತ್ತು ನೀಡುವಂತೆ ಮನವಿ ಮಾಡಿದರು.

ಇಂಡಿಯನ್ ಜರ್ನಲಿಸ್ಟ್ ಯೂನಿಯನ್ನ ರಾಷ್ಟ್ರೀಯ ಅಧ್ಯಕ್ಷ ಕೆಬಿ ಪಂಡಿತ್ ಅವರು ಮಾತನಾಡಿ ಬದಲಾದ ವಾತಾವರಣದಲ್ಲಿ ಪತ್ರಕರ್ತರ ಸಮಸ್ಯೆಗಳು ಕೂಡ ಹೆಚ್ಚಾಗಿದ್ದು ಅವುಗಳ ನಿವಾರಣೆ ಕುರಿತು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಹಿರಿಯ ಪತ್ರಕರ್ತ ವೇದ್ಪ್ರಕಾಶ್ ವೇದ್ ಅವರು ಮಾತನಾಡಿ ಪತ್ರಕರ್ತರ ಜವಾಬ್ದಾರಿ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ನೈತಿಕ ಜವಾಬ್ದಾರಿಯಿಂದ ಕಳಚಿ ಕೊಳ್ಳುತ್ತಿರುವುದು ವಿಷಾದಕರ ಸಂಗತಿ ಎಂದರು.ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ  ಮುರುಗೇಶ್ ಶಿವಪೂಜೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರಲ್ಲದೆ ಕೊನೆಯಲ್ಲಿ ವಂದಿಸಿದರು. ಗುಜರಾತ್ ಪತ್ರಕರ್ತರ ಸಂಘದ ಅಧ್ಯಕ್ಷ ಬೇಕಾಭಾಯಿ ಪ್ರಜಾಪತಿ ಅವರು ಸ್ವಾಗತಿಸಿದರು. ಹಿರಿಯ ಪತ್ರಕರ್ತ ಗೌರಿಶಂಕರ್ ಆಚಾರ್ಯ ಮತ್ತು ಲಕ್ಷ್ಮಣಭಾಯಿ ಪಟೇಲ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದ ಇತರ ಗಣ್ಯರು. ರಾಷ್ಟ್ರೀಯ ಉಪಾಧ್ಯಕ್ಷ ಅನಂತ್ ಮಿತ್ತಲ್, ಗುಜರಾತ್ ಸರ್ಕಾರದ ಅರಣ್ಯ ಸಚಿವ ರಮಣ್ ಭಾಯಿ ಕಾಟ್ಕರ್, ಆರೋಗ್ಯ ಸಚಿವ ಕಿಶೋರ್ ಭಾಯಿ ಕಾನಾನಿ,  ಗುಜರಾತ್ ರಾಜ್ಯ ಪಾಟೀದಾರ್ ಸಮಾಜದ ಅಧ್ಯಕ್ಷ ಭರತ್ ಭಾಯಿ ಪಟೇಲ್, ಇತರ ಹಿರಿಯ ಪತ್ರಕರ್ತರಾದ ಮನುಭಾಯಿ ಪಟೇಲ್,  ಲಕ್ಷ್ಮಣ್ ಪಟೇಲ್, ನಿಲೇಶ್ ಜೋಶಿ, ಗೌರಾಂಗ್ ಪಾಂಡೆ, ವಿವಿಧ ಜಿಲ್ಲೆಗಳ ರಾಜ್ಯಾಧ್ಯಕ್ಷ ರುಗಳಾದ ಪಂಜಾಬ್ನ ಜಸ್ವಿರ್ ಪಟ್ಟಿ,  ಒಡಿಶಾದ ಗ್ಯಾನ್ ಚೌಧರಿ, ರಾಜಸ್ಥಾನದ ಜೈದೇವ್ ಶರ್ಮಾ, ಪಂಜಾಬಿನ ಕಮಲೇಶ್ ಸಿಂಗ್, ಉತ್ತರಾಖಂಡದ ಅನಂತ್ ಮಿತಲ, ಸೇರಿದಂತೆ ಹಲವರು ಉಪಸ್ಥಿತರಿದ್ದರು .