ಶಾಲ್ಮಲೆಯ ಜಲಮೂಲ ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ: ಪ್ರೊ. ಪೋದ್ದಾರ


ಲೋಕದರ್ಶನ ವರದಿ

ಧಾರವಾಡ 24:  ಎಲ್ಲರೂ ನದಿಗಳ ಬಗ್ಗೆ ಚಿಂತಿಸುವಾಗ ಕೇವಲ ಗಂಗೆ, ಕಾವೇರಿಯಂತ ದೊಡ್ಡ ನದಿಗಳ ಬಗ್ಗೆಯೇ ಮಾತನಾಡುತ್ತಾರೆ. ಆದರೆ ನಾವು ಯಾವ ಪ್ರದೇಶದಲ್ಲಿರುತ್ತೇವೆಯೋ, ನಮ್ಮ ಜೀವನಕ್ಕೆ ಹತ್ತರಿವಾಗಿರುತ್ತವೆಯೋ ಅಂತಹ ಜಲಮೂಲಗಳನ್ನು ನಾವು ನಿರ್ಲಕ್ಷಿಸಿ ಬಿಡುತ್ತೇವೆ. ಇದಕ್ಕೆ ದೊಡ್ಡ ಉದಾಹರಣೆ ಎಂದರೆ ನಮ್ಮ ಧಾರವಾಡದ ಶಾಲ್ಮಲಾ ನದಿಯ ಉಗಮಸ್ಥಾನ. ಧಾರವಾಡದ ಪವಿತ್ರ ಪುಷ್ಕರಣಿಯಿಂದ ಹುಟ್ಟಿ, ಮುಂದೆ ಬೆಡ್ತಿ ಹಳ್ಳವನ್ನು ಸೇರಿ, 161 ಕಿ.ಮಿ ಉದ್ದದ ಗಂಗಾವಳಿ ನದಿಯೇ ಮುಂದೆ ಶಿಶರ್ಿಯ ಸನಿಹ ಶಾಲ್ಮಲೆಯಾಗಿ ಅಂಕೋಲಾದ ಮಂಜಗುನಿಯ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಇಂತಹ ಜೀವನಾಡಿಯನ್ನು ಕಾಪಾಡುವದು ನಮ್ಮೆಲ್ಲರ ಪ್ರಮೂಖ ಹೊಣೆಯಾಗಿದೆ ಎಂದು ಧಾಡವಾಡದ ನೇಚರ್ ರಿಸರ್ಚ ಸೆಂಟರ್ ನೇತೃತ್ವದಲ್ಲಿ ವಿವಿಧ ಪರಿಸರವಾದಿಗಳೊಂದಿಗೆ ಹಮ್ಮಿಕೊಂಡಿದ್ದ ಶಾಲ್ಮಲಾ ಉಗಮಸ್ಥಾನದ ನದಿ ಸ್ವಚ್ಚಾತಾ ಕಾರ್ಯಕ್ರಮವನ್ನು ಉದ್ಘಾಟಿಸಿದ ವಾಲ್ಮಿಯ ನಿದರ್ೇಶಕರಾದ ಪ್ರೊ. ರಾಜೇಂದ್ರ ಪೋದ್ದಾರ ನೆರದಂತಹ ಜಲ ಕಾರ್ಯಕರ್ತರಿಗೆ ಈ ವಿಷಯವನ್ನು ತಿಳಿಸಿದರು. ಅಷ್ಟೇ ಅಲ್ಲದೇ, ಇಂತಹ ಜಲಮೂಲಗಳನ್ನು ಸಂರಕ್ಷಿಸಲು ಪಣತೊಟ್ಟಿರುವ ನೇಚರ್ ರಿಸರ್ಚ ಸೆಂಟರ್ ಹಾಗೂ ಎಲ್ಲ ಪರಿಸರ ಪ್ರೇಮಿಗಳಿಗೆ ಶ್ಲಾಘಿಸಿ, ಶೀಘ್ರದಲ್ಲಿಯೇ ತಮ್ಮ ವಾಲ್ಮಿ ಸಂಸ್ಥೆಯವತಿಯಿಂದ ಶಾಲ್ಮಲೆಯ ಉಗಮಸ್ಥಾನದ ಸ್ವಚ್ಚತೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಒಂದು ವಿಚಾರ ಸಂಕೀರಣವನ್ನು ಏರ್ಪಡಿಸುವುದಾಗಿ ಹೇಳಿದರು. 

ನೇಚರ್ ರಿಸರ್ಚ ಸೆಂಟರನ ಅಧ್ಯಕ್ಷರು ಹಾಗೂ ನೇಚರ್ ಫಸ್ಟ್ ಇಕೋ ವಿಲೇಜಿನ ಸಂಸ್ಥಾಪಕರಾದ ಪಿ.ವಿ.ಹಿರೇಮಠ ಮಾತನಾಡಿ ಜಲ ವಿಲ್ಲದೇ ಜೀವನವಿಲ್ಲ ಎಂಬ ಅರಿವು ಎಲ್ಲರಿಗೂ ಇದೆ, ಇಷ್ಟಿದ್ದರೂ ಒಂದು ಮಹಾನ ನದಿಯ ಜೀವನಾಡಿಯಾಗಿರುವ ಶಾಲ್ಮಲಾ ನದಿ ಉಗಮಸ್ಥಾನವನ್ನು ನಮ್ಮ ಧಾಮರ್ಿಕ ಆಚರಣೆಯ ಕಾರಣಕ್ಕಾಗಿ ಮಲೀನಗೊಳಿಸುತ್ತಿರುವುದು ಬಲು ವಿಷಾದದ ಸಂಗತಿಯಾಗಿದ್ದು ಇನ್ನಾದರೂ ಜನಗಳು ಜಲಮೂಲಗಳನ್ನು ಸಂರಕ್ಷಿಸದಿದ್ದರೆ ಅಪಾಯ ಖಂಡಿತ ಎಂದು ಈ ಸಂದರ್ಭದಲ್ಲಿ ತಿಳಿಸಿದರು. 

ನೇಚರ್ ರಿಸರ್ಚ ಸೆಂಟರನ ಕಾರ್ಯದಶರ್ಿ ಪ್ರಕಾಶ ಗೌಡರ ಮಾತನಾಡಿ ನೀರು ನಮ್ಮೆಲ್ಲರ ಜೀವನಾಡಿ, ಅದರಲ್ಲೂ ಶಾಲ್ಮಲೆಯ ಉಗಮಸ್ಥಾನ ನಮ್ಮ ಧಾರವಾಡದ ಹೆಮ್ಮೆಯ ಪಾರಂಪರಿಕ ಸ್ಥಳವಾಗಿದ್ದು ಅದನ್ನು ಎಲ್ಲರೂ ಸಂರಕ್ಷಸಿಕೊಂಡು ಹೋಗುವ ಅಗತ್ಯತೆ ಇದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕೆ. ಎಚ್. ನಾಯಕ ಹಾಗೂ ಸ್ಥಳದ ಮಾಲೀಕರಾದ ರುದ್ರೇಶ ಹರಕುಣಿಯವರೂ ಸಹ ಮಾತನಾಡಿದರು. 

ಇದಾದ ನಂತರ ಮೂವತ್ತಕ್ಕೂ ಹೆಚ್ಚು ಜಲ ಕಾರ್ಯಕರ್ತರು ಪುಷ್ಕರಣಿಯ ಹೊರಗೆ ಹರಿದು ಹೋಗುವ ಸ್ಥಳದಲ್ಲಿ ಜಲಾವ್ರತವಾಗಿ ಹರಿವನ್ನು ನಿಲ್ಲಿಸಿದ 5 ಕ್ವಿಂಟಲ್ನಷ್ಟು ಧಾಮರ್ಿಕ ಪೂಜಾ ತ್ಯಾಜ್ಯ ಹಾಗೂ ಪಾಸ್ಟಿಕ್ ತ್ಯಾಜ್ಯದ ಹೂಳನ್ನು ತೆಗೆದು ಸ್ವಚ್ಚಗೊಳಿಸಿ, ನೀರು ಸರಾಗವಾಗಿ ಹರಿದು ಹೋಗುವಂತೆ ತೆರವು ಮಾಡಿದರು. ಅಷ್ಟೇ ಅಲ್ಲದೇ, ತಾತ್ಕಾಲಿಕ ರಸ್ತೆ ನಿಮರ್ಾಣದಿಂದಾಗಿ ನಿಂತದ್ದ ನೀರಿನ ಹರಿವನ್ನು ಜೆ.ಸಿ.ಬಿ ಯಂತ್ರಗಳ ಮೂಲಕ ನೀರು ಹರಿದು ಹೋಗಲು ಸುಗುಮವಾದ ದಾರಿ ಮಾಡಲಾಯಿತು. ನೇಚರ್ ರಿಸರ್ಚ ಸೆಂಟರನ ಅನೀಲ ಅಳ್ಳೋಳ್ಳಿ, ಚಂದ್ರಶೇಖರ ಭ್ಯೆರಪ್ಪನವರ, ಅಸ್ಲಂಜಹಾನ ಅಬ್ಬಿಹಾಳ, ಪರಿಸರ ಪ್ರೇಮಿಗಳಾದ ಕಿರಣ ಹಿರೇಮಠ, ವಿರೇಶ ಕೆಲಗೇರಿ, ಗಿರೀಶ ಹಾಗೂ ನಯನಾ ಯಾಲಕ್ಕಿಶೆಟ್ಟರ, ಪ್ರವೀಣ ಕುಲಕಣರ್ಿ, ಇಂಧುದರ ಹುಲಮನಿ ನೇಚರ್ ಪಸ್ಟ್ ಇಕೋ ವಿಲೇಜಿನ ಸಿಬ್ಬಂದಿಗಳು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.