ಶಾಶ್ವತ ಅಂಚೆ ಚಿತ್ರ ರದ್ಧತಿ ಬಿಡುಗಡೆ

Permanent postal image cancellation released

ಹಾವೇರಿ 12: ಈ ಶಾಶ್ವತ ಚಿತ್ರ ರದ್ದತಿಯಿಂದ  ಕೃಷ್ಣಮೃಗ ಅಭಯಾರಣ್ಯ ಪ್ರಪಂಚದಾದ್ಯಂತ ಪ್ರಚಾರ ಹೊಂದಲು ಸಹಾಯಕವಾಗುತ್ತದೆ ಎಂದು ಬೆಂಗಳೂರು ಆಫ್ ಪೋಸ್ಟಲ್ ಸರ್ವಿಸಸ್   ವಲಯ  ಡೈರೆಕ್ಟರ್   ವಿ.ತಾರಾ ಅವರು ಹೇಳಿದರು. 

ರಾಣೆಬೆನ್ನೂರು ಮುಖ್ಯ ಅಂಚೆ ಕಚೇರಿಯಲ್ಲಿ ಶುಕ್ರವಾರ ಕೃಷ್ಣಮೃಗ ಅಭಯಾರಣ್ಯದ ಶಾಶ್ವತ ಚಿತ್ರ ರದ್ದತಿ ಬಿಡುಗಡೆ ಸಮಾರಂಭದಲ್ಲಿ  ಶಾಶ್ವತ ಚಿತ್ರ ರದ್ದತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು 

ಶಾಶ್ವತ ಅಂಚೆ ಚಿತ್ರ ರದ್ದತಿಯ ಹಿನ್ನಲೆ ಮತ್ತು ಮಹತ್ವದ ಕುರಿತು ಅಂಚೆ ಅಧೀಕ್ಷಕ ಮಂಜುನಾಥ ಹುಬ್ಬಳ್ಳಿ ಮಾತನಾಡಿದರು. 

ರಾಣೆಬೆನ್ನೂರು ವಲಯ ಅರಣ್ಯಾಧಿಕಾರಿ ಲಿಂಗಾರೆಡ್ಡಿ ಮಂಕಣಿ ಅವರು ಕೃಷ್ಣಮೃಗ ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್‌ ಕುರಿತು ವಿವರಿಸಿದರು.  

ರಾಣೆಬೆನ್ನೂರು ಅಂಚೆ ಕಚೇರಿಯ ಪೋಸ್ಟ್‌ ಮಾಸ್ಟರ್ ಆದ   ವಾಸವಾಂಬ  ಅವರು ಅಧ್ಯಕ್ಷತೆ ವಹಿಸಿದ್ದರು. 

ಈ ಅಂಚೆ ಚಿತ್ರ ರದ್ದತಿಯ ರೇಖಾ ವಿನ್ಯಾಸಕ ಹರೀಶ ಮಾಳಪ್ಪನವರ ಅವರನ್ನು ಸನ್ಮಾನಿಸಲಾಯಿತು.  

ಅಂಚೆ ನೀರೀಕ್ಷಕರಾದ ಮಂಜುನಾಥ ದೊಡ್ಡಮನಿ, ಅಂಚೆ ಸಹಾಯಕಿ ಶ್ರೀಮತಿ ಪ್ರೇಮಾ ವಾಲಿ ಉಪಸ್ಥಿತರಿದ್ದರು, ಮಹಾದೇವ ಕಿತ್ತೂರ (ಆಓ ಕಐಋ) ನಿರೂಪಿಸಿದರು.