ಮೇ15 ರಂದು ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ : ಮುದಿಯಪ್ಪ ನಾಯಕ

Protest against power privatization on May 15: Mudiappa leader

ಮೇ15 ರಂದು ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ : ಮುದಿಯಪ್ಪ ನಾಯಕ

ಕೊಪ್ಪಳ 12 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರು ಡಾ. ವಾಸುದೇವ ಮೇಟಿ ಬಣ ವತಿಯಿಂದ ಮೇ 15 ರಂದು ಬೆಳಿಗ್ಗೆ 11 ಗಂಟೆಗೆಕೊಪ್ಪಳ ಜಿಲ್ಲಾ ಕೇಂದ್ರದ ಕಾರ್ಯಪಾಲಕ ಅಭಿಯಂತರರು ಜೆಸ್ಕಾಂ ಕಚೇರಿಯ ಮುಂದೆ ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾಧ್ಯಕ್ಷ ಮುದಿಯಪ್ಪ ನಾಯಕ ಹೇಳಿದರು.ಅವರು ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಉದ್ದೇಶಿಸಿ ಮಾತನಾಡಿ ರಾಜ್ಯ ಸರ್ಕಾರ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸ್ಟಾರ್ಟ್‌ ಕಾರ್ಡ, ಡಿಜಿಟಲ್ ಮೀಟರ್ ಅಳವಡಿಸಲು 10 ಸಾವಿರ ರೂ. ಡಿಪೋಜಿಟ್ ಶುಲ್ಕವನ್ನು ನಿಗಧಿಪಡಿಸಿರುವುದನ್ನು ಹಿಂಪಡೆಯಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಮಾಡಿರುವ ಯತ್ನವನ್ನು  ನಿಲ್ಲಿಸಬೇಕು, ರೈತರಿಗೆ ವಿದ್ಯುತ್ ಪರಿಕರಣಗಳನ್ನು ಅಕ್ರಮ-ಸಕ್ರಮ ಅಡಿಯಲ್ಲಿ ಈ ಹಿಂದೆ ನೀಡಿದ್ದಂತೆಯೇ ರೈತರ ಉಚಿತ ವಿದ್ಯುತ್‌ನ್ನು ಗೌರವದಿಂದ ನೀಡಬೇಕು ಎಂದರು. 

ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಸೋಮ ಸಾಗರ ಮಾತನಾಡಿ ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ್ ಜೋಡಣೆ ಮಾಡುವುದನ್ನು ನಿಲ್ಲಿಸಬೇಕು, ರೈತರ ಜಮೀನಿನಲ್ಲಿ 3-4 ಬೋರ್‌ವೆಲ್ ಗಳು ಇದ್ದು, ಅಂರ್ತಜಾಲ ಕಡಿಮೆ ಆದಂತಹ ಸಂದರ್ಭದಲ್ಲಿ ಆಧಾರ್‌ಕಾರ್ಡ್‌ ಜೋಡನೆ ಮಾಡುವುದರಿಂದ ರೈತರ ಬದುಕು ದುಸ್ಥಿರವಾಗುತ್ತದೆ,ಸರ್ಕಾರದ ಶೀಘ್ರ ಯೋಜನೆ ಅಡಿಯಲ್ಲಿ ಟಿ.ಸಿ.ಗಳನ್ನು ಮಾತ್ರ ನೀಡಲಿದ್ದು, ಉಳಿದ ಕಂಬ ಮತ್ತು ವೈರ್‌ಗಳನ್ನು ರೈತರು ಸ್ವಂತ ಖರ್ಚಿನಿಂದ ಮಾಡಿಸಲು ಸಾಧ್ಯವೇ ಇಲ್ಲ, ಸರ್ಕಾರವೇ ಉಚಿತವಾಗಿ ನೀಡಬೇಕು, ಜಮೀನಿನಲ್ಲಿ ವಾಸವಾಗಿರುವ ರೈತರಿಗೆ ವಿದ್ಯಾರ್ಥಿಗಳಿಗೆ, ಹೈನುಗಾರಿಕೆ ಮಾಡುವಂತವರಿಗೆ ಸಾಯಂಕಾಲ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಸಮರ​‍್ಕ ಯೋಗ್ಯ ವಿದ್ಯುತ್ ನೀಡುವುದು ಸೇರಿದಂತೆ ಇದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.  ರೈತ ಸಂಘದ ಕೊಪ್ಪಳ ತಾಲೂಕ ಅಧ್ಯಕ್ಷ ಅಪ್ಪಣ್ಣ ಡೊಳ್ಳಿನ್ ಮಾತನಾಡಿ ಈ ಪ್ರತಿಭಟನೆಗೆ ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮ ಮಟ್ಟದ ಎಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಗಮಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ  ಯಲಬುರ್ಗಾ ತಾಲೂಕ ಅಧ್ಯಕ್ಷ ಶರಣಬಸಪ್ಪ ದಾನಕೈ, ಶಿವಾನಂದ ವಂಕಲಕುಂಟಿ, ಕುಷ್ಟಗಿ ತಾಲೂಕು ಅಧ್ಯಕ್ಷ ಕಾಶಿಂ ಶ್ರೀಶೈಲ ಉಪಸ್ಥಿತರಿದ್ದರು.