ಲೀಡ್ಸ್, ಅ 19: ಯುರೋ-2020ರ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 6-0 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಬಲ್ಗೇರಿಯಾ ತಂಡದ ಮುಖ್ಯ ಕೋಚ್ ಕ್ರಾಸ್ಮಿರ್ ಬಾಲ್ಕೋವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಶುಕ್ರವಾರ ಪಂದ್ಯದ ಬಳಿಕ ಸಭೆಯಲ್ಲಿ ದೀರ್ಘ ಕಾಲ ಚರ್ಚೆ ನಡೆಸಿದ ಬಳಿಕ ಕ್ರಾಸ್ಮಿರ್ ಬಾಲ್ಕೋವ್ ಅವರ ನಿರ್ಗಮನದ ಬಗ್ಗೆ ನಲ್ಗೇರಿಯಾ ಫುಟ್ಬಾಲ್ ಯೂನಿಯನ್ ಸ್ಪಷ್ಟಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಬಲ್ಗೇರಿಯಾ ರಾಷ್ಟ್ರೀಯ ಫುಟ್ಬಾಲ್ ತಂಡದ ಪ್ರದರ್ಶನ ಸಂಪೂರ್ಣ ತೃಪ್ತಿ ತಂದಿಲ್ಲ. ಈ ಕಾರಣದಿಂದಾಗಿ ಕ್ರಾಸ್ಮಿರ್ ಮುಖ್ಯ ತರಬೇತುದಾರ ಸ್ಥಾನದಿಂದ ಕೆಳಗೆ ಇಳಿದಿದ್ದಾರೆ. ಬಾಲ್ಕೋವ್ ಅವರ ನಿರ್ಧಾರ ಬಲ್ಗೇರಿಯಾ ಫುಟ್ಬಾಲ್ ಯೂನಿಯನ್ ಸದಸ್ಯರಿಗೆ ಸ್ವೀಕಾರರ್ಹವಾಗಿದೆ ಎಂದು ಗೋಲ್.ಕಾಮ್ ವರದಿ ಮಾಡಿದೆ. ಪಂದ್ಯದ ವೇಳೆ ಇಂಗ್ಲೆಂಡ್ ತಂಡದ ಆಟಗಾರರನ್ನು ಬಲ್ಗೇರಿಯಾ ಅಭಿಮಾನಿಗಳು ನಿಂಧಿಸುವ ಕುರಿತಂತೆ ನಾಯಕ ಹ್ಯಾರಿ ಕೇನ್ ಹಾಗೂ ಪಂದ್ಯದ ರೆಫರಿ ಚರ್ಚೆ ನಡೆಸಿದ್ದರು. ಅನುಚಿತ ವರ್ತನೆಯು ಪಂದ್ಯದ ಫಲಿತಾಂಶದ ಮೇಲೆ ಗಭೀರ ಪರಿಣಾಮ ಬೀರುತ್ತದೆ ಎಂಬ ಉದ್ದೇಶದಿಂದ ಪಂದ್ಯವನ್ನು ರದ್ದು ಪಡಿಸುವ ನಿರ್ಧಾರವನ್ನು ಹ್ಯಾರಿ ಕೇನ್ ಹಾಗೂ ಮ್ಯಾಚ್ ರೆಫರಿ ತೆಗೆದುಕೊಂಡರು. ಈ ವೇಳೆ ಇಂಗ್ಲೆಂಡ್ 2-0 ಮುನ್ನಡೆ ಗಳಿಸಿತ್ತು.