ಸಾರ್ವಜನಿಕರು ಆರೋಗ್ಯ ಇಲಾಖೆಯ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿ

ಹಾವೇರಿ 26: ಪ್ರತಿಯೊಬ್ಬರ ಆರೋಗ್ಯ ರಕ್ಷಣೆಯೇ ನಮ್ಮ ಆದ್ಯ ಕರ್ತವ್ಯ ಕೊರೊನಾ ವೈರಸ್ ತಡೆಗಟ್ಟುವ ಕೆಲಸ ಎಲ್ಲರ ಸಹಭಾಗಿತ್ವದಲ್ಲಿ ಮಾಡಬೇಕು. ಸಾರ್ವಜನಿಕರು ಸಕರ್ಾರ ಮತ್ತು ಆರೋಗ್ಯ ಇಲಾಖೆಯ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಬೇಕಾಗಿದೆ. ಈ ದಿನ ನಮ್ಮ ಕೆಲಸ ಗುರುತಿಸಿ ಸನ್ಮಾನ ಮಾಡಿದ ಅಮ್ಮಾ ಸಂಸ್ಥೆ(ರಿ)ಯಿಂದ ಇನ್ನೂ ಅನೇಕ ಜನಪರ ಕೆಲಸಗಳಾಗಲಿ ಎಂದು ಕಳಸೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ವೇತಾ ಟಿ.ವಿ ಹೇಳಿದರು.

        ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗ ದೂರ ಗ್ರಾಮದ ಸ್ವಾರಿದುರಗಮ್ಮದೇವಿ ದೇವಸ್ಥಾನದಲ್ಲಿ ಅಮ್ಮಾ ಸಂಸ್ಥೆ ಹಾಗೂ ಗ್ರಾಮದ ವತಿಯಿಂದ ಆಯೋಜಿಸಿದ ಅಂಗನವಾಡಿ ಕಾರ್ಯಕರ್ತರಿಗೆ, ಆರೋಗ್ಯ ಸಹಾಯಕಿಯರಿಗೆ ಹಾಗೂ  ಆಶಾ ಕಾರ್ಯಕರ್ತರ ಕೊರೂನಾ ವಾರಿಯರ್ಸರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

         ಪ್ರತಿಯೊಬ್ಬರು ಸಾಮಾಜಿಕ ಅಂತರ,ದೇಹದ ಭಾಗಗಳನ್ನು ಸ್ವಚ್ಚವಾಗಿಟ್ಟುಕೊಳ್ಳುಬೇಕು. ಅವಶ್ಯಕತೆ ಇದ್ದು ಹೋರಗೆ ಹೋದಾಗ  ಮಾಸ್ಕ್  ಹಾಕಿಕೊಳ್ಳಬೇಕು. ಗ್ರಾಮಕ್ಕೆ ಬೇರೆಕಡೆಯಿಂದ ಯಾರಾದರೂ ಬಂದರೆ ಮಾಹಿತಿ ನೀಡಿ. ಅನಾರೋಗ್ಯ ಉಂಟಾದರೆ ನಮ್ಮ ಗಮನಕ್ಕೆ ತನ್ನಿ.ನಿಮ್ಮ ಸೇವೆ ಮಾಡಲು ನಾವು ಸದಾ ಸಿದ್ಧರಿದ್ದೇವೆ ಎಂದು ಶ್ರೀಮತಿ ಶ್ವೇತಾ ಟ.ವಿ ಆರೋಗ್ಯ ಸಲಹೆ ನೀಡಿದರು.

        ಊರಿನ ಹಿರಿಯರಾದ ಪರಮಯ್ಯಸ್ವಾಮಿ ಹಿರೇಮಠ ಮಾತನಾಡಿ ಕೊರೂನಾ ರೋಗವನ್ನುಎದುರಿಸಲು ಕೊರೂನಾ ವಾರಿಯರ್ಸಗೆಎಲ್ಲರೀತಿಯ ಸಹಕಾರ ನೀಡಬೇಕು.   ಅವರ ಸೇವೆ ಪ್ರೋತ್ಸಾಹಿಸಲು ಸನ್ಮಾನ ಮಾಡುತ್ತಿರುವ ಅಮ್ಮಾ ಸಂಸ್ಥೆಯವರು ಉತ್ತಮ ಕೆಲಸಗಾರರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

       ಪಿಡಿಓ ಯೋಗೇಶಚಾಕರಿ ಮಾತನಾಡಿ ಕೊರೂನಾ ವಾರಿಯರ್ಸ ತಮ್ಮ ವ್ಯಯಕ್ತಿಕ ಕೆಲಸಕ್ಕಿಂತ ಸಮಾಜಿಕ ಕೆಲಸ ಮಾಡುವ ಮೂಲಕ ಅವರ ಸೇವೆ ಅಪಾರವಾಗಿದೆ. ಅವರಿಗೆ ಪಂಚಾಯತಿ ವತಿಯಿಂದ ಅಭಿನಂದನೆಗಳನ್ನು  ಸಲ್ಲಿಸಲಾಗುವುದು ಎಂದರು.

ಅಂಗನವಾಡಿ ಕಾರ್ಯಕತರ್ೆ ನೀಲಮ್ಮ ಹರಿಮುರಿ ಮಾತನಾಡಿ ಅಮ್ಮಾ ಸಂಸ್ಥೆಯವರ ಸನ್ಮಾನ ನಮ್ಮಗೌರವ ಹಾಗೂ ಕರ್ತವ್ಯವನ್ನು ಹೆಚ್ಚು ಜವಾಬ್ದಾರಿಯನ್ನಾಗಿದೆ ಎಂದರು.

 ಆಶಾಕಾರ್ಯಕತರ್ೆ ರೇಣುಕಾ ಪವಾರ ಮಾತನಾಡಿಊರಿನವರಆರೋಗ್ಯರಕ್ಷಣೆಗೆ ಸದಾ ಸಿದ್ದರಿದ್ದೇವೆ.ಎಲ್ಲರ ಸಹಕಾರ ಮುಖ್ಯ ಕೋರೂನಾ ತಡೆಯಲು ಮುಂದಾಗೋಣ ಎಂದರು.

ಸುಸಂದರ್ಭದಲ್ಲಿ ಕಿರಿಯ.ಆ.ಸ ಶ್ವೇತಾ ಟಿ.ವಿ.ಆಶಾಕಾರ್ಯಕತರ್ೆ ರೇಣುಕಾ ಪವಾರ.ಮುತ್ತಕ್ಕ ಗು ಅರಳ್ಳಿಹಳ್ಳಿ. ಲಕ್ಷ್ಮೀ ಮ ನಡುವಿನಮನಿ.ಅ.ಕಾ ವನಿತಾ  ಪಾಟೀಲ ಅವರಿಗೆಗೌರವದಿಂದಸನ್ಮಾನಿಸಲಾಯಿತು. 

       ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಮರಿಯಪ್ಪ ನಡುವಿನಮನಿ, ಕೊಟೆಪ್ಪಆರೇರ, ಫಕ್ಕಿರೇಶ ಕಾಳಿ.ಅಮ್ಮಾ ಸಂಸ್ಥೆಯ ರುಕ್ಮುಣಿ ನಾ ಆರೇರ.ನಿಂಗಪ್ಪ ಎಂ ಆರೇರ,  ಕವಿತಾ ಮರಾಠೆ, ದೀಪಾ ಸಂ ಆರೇರ ಸೇರಿದಂತೆಅಮ್ಮಾ ಸಂಸ್ಥೆ(ರಿ)ಯ ಪದಾಧಿಕಾರಿಗಳು, ಗ್ರಾಮದ ಅನೇಕರು ಪಾಲ್ಗೊಂಡಿದ್ದರು.