ಕಾಗವಾಡ: ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಯುವ ರೈತರು ಸಕ್ಕರೆ ಕಾಖರ್ಾನೆಗಳು ಸಮರ್ಪಕ ದರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೆ ರೈತರು ಭಯ ಪಡದಿರಿ. ಬರುವ ದಿ. 15ರಂದು ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾಯರ್ಾಲಯ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡು ನಿರ್ಣಯ ಕೈಗೊಳ್ಳುವರೆಗೆ ಹಿಂದಕ್ಕೆ ಸರಿಯುವದಿಲ್ಲಾ. ಎಲ್ಲ ರೈತರು ಸಾಥನೀಡಿರಿ ಎಂದು ಬೆಳಗಾವಿ ಜಿಲ್ಲೆಯ ರೈತ ಜಾಗೃತಿ ವೇದಿಕೆ ಅಧ್ಯಕ್ಷ ಪರಮೇಶ್ವರ ಮುಳ್ಳೂರ ಕರೆ ನೀಡಿದರು.
ರವಿವಾರ ಸಂಜೆ ಐನಾಪುರ ಪಟ್ಟಣ ಪಂಚಾಯತಿಯ ಸಭಾ ಭವನದಲ್ಲಿ ಐನಾಪುರ, ಉಗಾರ, ಶಿರಗುಪ್ಪಿ ಸೇರಿದಂತೆ ಅಥಣಿ ತಾಲೂಕಿನ ಕಬ್ಬು ಬೆಳೆಗಾರರ ರೈತರ ಸಮಾವೇಶ ಹಮ್ಮಿಕೊಂಡಿದ್ದರು. ಸಭೆಯಲ್ಲಿ ಪರಮೇಶ್ವರ ಮುಳ್ಳುರ ಮಾತನಾಡುವಾಗ, ಜಿಲ್ಲೆಯ ಸಕ್ಕರೆ ಕಾಖರ್ಾನೆ ಮಾಲಿಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಸಮರ್ಪಕ ಬಿಲ್ಲ ನೀಡುತ್ತಿಲ್ಲಾ. ಇಂತಹ ಸ್ಥಿತಿಯಲ್ಲಿ ನಾವು ರೈತರು ಇನ್ನೊಬ್ಬ ರೈತನ ಟ್ರ್ಯಾಕ್ಟರ್ ಚಕ್ರದ ಗಾಳಿ ಬಿಡುವುದು, ಹೊಡೆಯುವುದು ಬೇಡ. ನಾವು ರೈತರು ಎಲ್ಲಾ ಒಂದೆ ಎಂದು ಹೇಳಿ, ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಎಲ್ಲ ಸಕ್ಕರೆ ಕಾಖರ್ಾನೆಗಳ ಅಧ್ಯಕ್ಷರು, ಅಧಿಕಾರಿಗಳ ಸಭೆ ಹಮ್ಮಿಕೊಂಡು ನಮ್ಮ ಸಮಸ್ಯೆಗಳು ಇತ್ಯರ್ಥಗೊಳಿಸೊಣ ಎಂದು ಹೇಳಿದರು.
ಮುಖ್ಯಮಂತ್ರಿಗಳ ಗಮನಕ್ಕೆ ಈ ಸಮಸ್ಯೆಯಿದೆ:
ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಇವರ ಮುಖಾಂತರ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ರೈತರ ಸಮಸ್ಯೆ ಹೇಳಲಾಗಿದೆ. ಇದೇ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಜರುಗುವ ಆಧಿವೇಶನ ಪೂರ್ವದಲ್ಲಿ ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕಾರಣ ಬೆಳಗಾವಿಯ ಧರಣಿ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಿಂದ ರೈತರು ಪಾಲ್ಗೊಳ್ಳಿರಿ ಎಂದು ರೈತ ಜಾಗೃತಿ ವೇದಿಕೆ ಉಪಾಧ್ಯಕ್ಷ ರಾಜು ನಾಡಗೌಡಾ ಹೇಳಿದರು.
ಸಭೆಯಲ್ಲಿ ಉಗಾರ ಕಬ್ಬು ಬೆಳೆಗಾರರ ಸಂಘದ ಹಿರಿಯ ಸದಸ್ಯರಾದ ಶೀತಲ ಪಾಟೀಲ, ರವೀಂದ್ರ ಗಾಣಿಗೇರ, ಅಪ್ಪಾಸಾಹೇಬ ಚೌಗುಲೆ, ಗಜಾನನ ಯರೆಂಡೋಲಿ, ಸಂಜಯ ಬಿರಡಿ, ರಾಜೇಂದ್ರ ಪೋತದಾರ, ಆದಿನಾಥ ದಾನೋಳಿ, ಸೇರಿದಂತೆ ಅನೇಕ ರೈತರು ಸದರಿ ಧರಣಿ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಿಂದ ಪಾಲ್ಗೊಳ್ಳುವ ಭರವಸೆ ನೀಡಿದರು. ಈ ವೇಳೆ ಕಾಗವಾಡ ಮತ್ತು ಅಥಣಿ ತಾಲೂಕಿನ ಅನೇಕ ರೈತರು ಪಾಲ್ಗೊಂಡಿದ್ದರು.