ಲಂಡನ್, ಮಾ 26,ಕೊರೊನಾ ವೈರಸ್ ಭೀತಿಯಿಂದಾಗಿ ಈ ವರ್ಷದ ವಿಂಬಲ್ಡನ್ ಚಾಂಪಿಯನ್ ಷಿಪ್ ಮುಂದೂಡುವ ಅಥವಾ ರದ್ದಾಗುವ ಸಾಧ್ಯತೆ ಇದೆ ಎಂದು ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ (ಎಇಎಲ್ ಟಿ) ಹೇಳಿದೆ.ಪ್ರೇಕ್ಷಕರನ್ನು ಹೊರಗಿಟ್ಟು ಜೂನ್ 29ರಿಂದ ಜುಲೈ 12ರವರೆಗೆ ಟೂರ್ನಿಯನ್ನು ನಡೆಸಲಾಗದು. ಗ್ರ್ಯಾಂಡ್ ಸ್ಲಾಮ್ ಟೂರ್ನಿಯನ್ನು ಈ ವರ್ಷಾಂತ್ಯದವರೆಗೂ ಮುಂದೂಡಲಾಗುತ್ತದೆ. ಇದರಿಂದ ಯಾವುದೇ ರೀತಿಯ ಅಪಾಯವಿಲ್ಲ ಮತ್ತು ತೊಂದರೆಗಳಿಲ್ಲ ಎದು ಎಇಎಲ್ ಟಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈಗಾಗಲೇ ರಿಯೊ ಒಲಿಂಪಿಕ್ಸ್ ಸೇರಿದಂತೆ ಹಲವು ಟೂರ್ನಿಗಳು ಮುಂದೂಡಲ್ಪಟ್ಟರೆ, ಕೆಲವು ಟೂರ್ನಿಗಳು ರದ್ದಾಗಿವೆ.