ಹೆಣ್ಣನ್ನು ನೋಡುವ ದೃಷ್ಟಿಕೋನವೂ ಬದಲಾಗಬೇಕಾಗಿದೆ: ಮುಜಾವರ್

ಬ್ಯಾಡಗಿ09: ಸಮಾಜದಲ್ಲಿ ಮಹಿಳೆಯರಿಗೆ ಸಿಗಬೇಕಾದ ಗೌರವ, ಸುರಕ್ಷತೆ ವಿಚಾರದಲ್ಲಿ ಬದಲಾವಣೆಯೊಂದಿಗೆ ಹೆಣ್ಣನ್ನು ನೋಡುವ ದೃಷ್ಟಿಕೋನವೂ ಬದಲಾಗಬೇಕಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ್ ಹೇಳಿದರು. 

ಪಟ್ಟಣದ ಸ್ನೇಹ ಸದನ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರದಲ್ಲಿ  ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ' ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ' ಅಂಗವಾಗಿ ಆಯೋಜಿಸಿದ ಕಾನೂನು ಸಾಕ್ಷರತಾ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಒಂದು ಹೆಜ್ಜೆ ಮುಂದೆಯೇ ಇದ್ದಾರೆ. ಶತ ಶತಮಾನಗಳ  ಶೋಷಣೆ, ಅನ್ಯಾಯಗಳನ್ನು ಸಹಿಸಿ, ಎದುರಿಸಿಯೂ ತನ್ನ ವಿಶಿಷ್ಟ ವ್ಯಕ್ತಿತ್ವವನ್ನು ಉಳಿಸಿಕೊಂಡು ಬಂದಿರುವ ಮಹಿಳೆ ನಿಜವಾಗಲೂ ಕ್ಷಮಯಾ ಧರಿತ್ರಿಯಾಗಿದ್ದಾಳೆ. ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ, ಹೆಣ್ಣು ಸಂಸಾರದ ಕಣ್ಣು, ತಾಯಿಯೇ ದೇವರು ಇತ್ಯಾದಿ ನಾಣ್ಣುಡಿಗಳು ಮಹಿಳೆಯರ ಮಹತ್ವವನ್ನು ಸಾರಿ ಹೇಳುತ್ತವೆ. ಮಹಿಳೆಯತ್ತ ಪುರುಷರ ದೃಷ್ಟಿಕೋನ ಬದಲಾಗಬೇಕಿದೆ. ಮಹಿಳೆಯನ್ನು ಒಂದು 'ಭೋಗದ ವಸ್ತು' ಎಂಬ ಕೆಟ್ಟ ಕಲ್ಪನೆಯನ್ನು ಕಿತ್ತು ಹಾಕಿ ಮಹಿಳೆ ಪ್ರಕೃತಿ ಮನುಕುಲಕ್ಕೆ ನೀಡಿದ ವರದಾನ' ಎಂಬ ಪೂಜ್ಯನೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. 

ಕಿರಿಯ ದಿವಾಣಿ ನ್ಯಾಯಾಧೀಶರಾದ ರಾಜೇಶ ಹೊಸಮನೆ ಮಾತನಾಡಿ, ಮಹಿಳೆಯರ ರಕ್ಷಣೆ ಮತ್ತು ಅಭಿವೃದ್ಧಿಗೆ ಹಲವಾರು ಕಾನೂನುಗಳು ಮತ್ತು ಕಾರ್ಯಕ್ರಮಗಳು ಕಾರ್ಯರೂಪಕ್ಕೆ ಬಂದಿವೆಯಾದರೂ ಅದರಿಂದ ಮಹಿಳೆಯರ ಸಂಪೂರ್ಣ ಉನ್ನತಿ ಸಾಧ್ಯವಾಗಿಲ್ಲ. ತಮಗಿರುವ ಹಕ್ಕು ಮತ್ತು ಅಧಿಕಾರಗಳ ಬಗ್ಗೆ ಶಾಲಾಹಂತದಲ್ಲಿಯೇ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು. 

ಸಿಪಿಐ ಭಾಗ್ಯವತಿ ಬಂತ್ಲಿ ಅವರು ' ಮಧ್ಯ ರಾತ್ರಿಯಲ್ಲಿ ನಿರ್ಭಯಾ' 'ಗಾಂಧೀಜಿಯವರ ನನಸಾಗದ ಕನಸು ' ಕುರಿತು: ಹಾಗೂ ಮಹಿಳಾ ಮೇಲ್ವಿಚಾರಕಿ ಶಿಲ್ಪಾ ಸಿದ್ದಮ್ಮನವರ 'ಮಹಿಳಾ ಸಬಲೀಕರಣ.. ಸಾಧನೆ ಮತ್ತು ಸವಾಲುಗಳು' ಕುರಿತು ಉಪನ್ಯಾಸ ನೀಡಿದರು. ನ್ಯಾಯವಾದಿ ಭಾರತಿ ಕುಲಕಣರ್ಿ ಅವರು 'ಮಹಿಳೆಯರ ಸಂರಕ್ಷಣೆ ಮತ್ತು ಸುರಕ್ಷೆ- ಕಾನೂನುಗಳ ಶ್ರೀರಕ್ಷೆ'  ಹಾಗೂ ನ್ಯಾಯವಾದಿ ಲಕ್ಷ್ಮಿ ಗುಗ್ಗುರಿ ಅವರು ಪೋಕ್ಸೋ,  ಬಾಲ ನ್ಯಾಯ ಕಾಯಿದೆ ಮತ್ತು ಗೃಹಕೃತ್ಯ ದೌರ್ಜನ್ಯ ತಡೆ ಕಾಯಿದೆ ' ಕುರಿತು ಮಾತನಾಡಿದರು. 

ಸ್ನೇಹ ಸದನದ ವ್ಯವಸ್ಥಾಪಕಿ ಸಿಸ್ಟರ್ ಐರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಓ ರಾಮಲಿಂಗಪ್ಪ ಅರಳಿಗುಪ್ಪಿ,  ನ್ಯಾಯವಾದಿಗಳಾದ ಸಿ.ಪಿ. ದೊಣ್ಣೇರ, ಎಸ್.ಎನ್. ಬಾಕರ್ಿ, ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.