ಶಿರಸಂಗಿ 27: ಸವದತ್ತಿ ತಾಲೂಕಿನಲ್ಲಿ ಇಷ್ಟೊಂದು ಛಾಯಾಗ್ರಾಹಕರಿರುವದು ಸಂತಸದ ವಿಚಾರ. ಅದರಲ್ಲಿಯೂ ಸಂಘಟಿತರಾಗಿ ಸಂಘದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೀರಿ. ಛಾಯಾಗ್ರಹಣ ಒಂದು ಕಲೆ, ಛಾಯಾಗ್ರಾಹಕ ವೃತ್ತಿಯು ಬದುಕಿನಲ್ಲಿ ನಡೆಯುವ ಆಕಸ್ಮಿಕ ಘಟನೆ, ಮಧುರ ಕ್ಷಣ, ವಿಶಿಷ್ಠ ನೆನಪಿನ ಬುತ್ತಿ ನೀಡುವ ಮಹಾನ ವೃತ್ತಿ ಶ್ರೇಷ್ಠವಾದದ್ದು ಎಂದು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪಿ.ಬಿ. ಬಡಿಗೇರ ಹೇಳಿದರು.ಸ್ಥಳೀಯ ಕಾಳಿಕಾ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಕಾರ್ಯನಿರತ ಛಾಯಾಗ್ರಾಹಕರ ಹಾಗೂ ವಿಡಿಯೋಗ್ರಾಫರ್ ಸಂಘದ ವಾಷರ್ಿಕ ಸರ್ವ ಸದಸ್ಯರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತ ತಿಳಿಸಿದರು.
ಅಮ್ಮನ ದೇವಸ್ಥಾನದ ಸನ್ನಿಧಿಯ ಆವರಣದಲ್ಲಿ ನಿಮ್ಮ ಕಾರ್ಯಕ್ರಮವು ಯಶಸ್ವಿಯಾಗಲಿ, ನಿಮ್ಮ ಮುಂದಿನ ವೃತ್ತಿ ಜೀವನ ಸಂತೋಷಮಯವಾಗಿರಲಿ. ನಿಮ್ಮ ಸಂಘಟನೆಯು ಬಲಿಷ್ಠವಾಗಿ ಛಾಯಾಗ್ರಾಹಕರ ಉತ್ತರೋತ್ತರ ಅಭಿವೃದ್ಧಿಯಾಗಲಿ ಕಾಳಿಕಾ ಮಾತೆ ಆ ಅನುಗ್ರಹವನ್ನು ಕರುಣಿಸಲಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಈರಣ್ಣಾ ಕರಲಿಂಗಣ್ಣವರ ಮಾತನಾಡಿ ಎಲ್ಲ ಸದಸ್ಯರ ಸಹಕಾರದಿಂದ ಇಂದು ಸಂಘಟನೆ ರಾಜ್ಯಾದ್ಯಂತ ಹೆಸರು ಮಾಡಿದೆ. ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ನಮ್ಮ ಸಂಘದ ಕಾರ್ಯವು ನಡೆಯುತ್ತಿದೆ ಎಂದ ಅವರು ಛಾಯಾಗ್ರಾಹಕರಿಗೆ ಸಂಘದಿಂದ ರೂಪಿಸಿರುವ ಆಥರ್ಿಕ ಭದ್ರತೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಅಧಿಕಾರಿ ಅಮೃತಾ ಪೂಜೇರ ಮಾತನಾಡಿ ಅಂಚೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಸದಸ್ಯರಿಂದ ಮರು ಪ್ರಶ್ನಿಸಿದ ಪ್ರಶ್ನೆಗಳಿಗೆ ಉತ್ತರಿಸಿ ಸದಸ್ಯರರಿಗೆ ಮನವರಿಕೆ ಮಾಡಿಕೊಟ್ಟರು.ಸಂಘದ ಉಪಾಧ್ಯಕ್ಷರಾದ ಮಹಾಂತೇಶ ಬೆಣ್ಣಿ ಹಾಗೂ ಬಸವರಾಜ ತುಳಜನ್ನರ ಸದಸ್ಯರಿಗೆ ಮಾಹಿತಿ ನೀಡಿದರು. ಫಕ್ಕೀರಪ್ಪ ಸಂಗಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘವು ನಡೆದು ಬಂದ ದಾರಿ ತಿಳಿಸಿ, ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸದಸ್ಯರ ಒಗ್ಗಟ್ಟಿನ ಸಹಕಾರವೇ ಕಾರಣ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಪ್ರಕಾಶ ಘಂಟಿ ಸ್ವಾಗತಿಸಿದರು ರಾಘವೇಂದ್ರ ಬಡಿಗೇರ ನಿರೂಪಿಸಿದರು ಮಹಾಂತೇಶ ಹಿರೇಮಠ ವಂದಿಸಿದರು. ವೇಳೆ ಹಿರಿಯ ಛಾಯಾಗ್ರಾಹಕರಾದ ಅಣ್ಣಪ್ಪ ಕಲಾಲ, ಈಶ್ವರ ನಮಸ್ತೇಮಠ, ಆಡಳಿತ ಮಂಡಳಿಯ ನಿದರ್ೇಶಕರಾದ ಅಶೋಕ ವಿಘ್ನೇಶಿ, ಬಸವರಾಜ ಹುಕ್ಕೇರಿ, ಪ್ರಮೋದ ಬಡಿಗೇರ, ವೆಂಕಟೇಶ ಬಾರಕೇರ, ಗೋಪಾಲ ಹೊಂಗಲ, ಸದಸ್ಯರಾದ ಬಾಬು ಲಮಾಣಿ, ವೀರಯ್ಯಾ ಮುದಕವಿಮಠ, ಉಮೇಶ ಹೂಗಾರ, ಮಂಜುನಾಥ ನಾಯ್ಕರ, ಚಂದ್ರು ಕಲಾಲ, ಶಿವಾನಂದ ಗೊರಗುದ್ದಿ, ಮಹಿಳಾ ಸದಸ್ಯ ಲಕ್ಷ್ಮೀ ಪವಾರ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.