ಖರೀದಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಜನ

ಪಾರೇಶ ಭೋಸಲೆ

ಬೆಳಗಾವಿ: 'ಜನ ಮರಳೋ ಜಾತ್ರೆ ಮರಳೋ' ಎನ್ನುವ ದೃಶ್ಯ ನಗರದ ಮಾರುಕಟ್ಟೆಯಲ್ಲಿ ಸೋಮವಾರ ಕಂಡು ಬಂದಿತು. ಇದಕ್ಕೆ ಕಾರಣ ಕೊರೊನಾ ಸೋಂಕಿತರು ಜಿಲ್ಲೆಯಲ್ಲಿ ದಿನ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತೆ ಮಂಗಳವಾರದಿಂದ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತವು ಲಾಕ್ಡೌನ್ ಹೇರುವ ವದ್ದಂತಿಯಿಂದ ಜನ ದಿನಸಿ ವಸ್ತುಗಳನ್ನು ಖರೀದಿಸಲು ಮುಗಿ ಬಿದ್ದಿದ್ದರು.

ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಮತ್ತೆ ಲಾಕ್ಡೌನ್ ಹೇರುವ ಗಾಳಿ ಸುದ್ದಿ ಕೇಳಿದ ನಗರದ ಜನ ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳ ಖರೀದಿಯಲ್ಲಿ ನಿರತವಾಗಿರುವದು ಸೋಮವಾರ ಕಂಡು ಬಂದಿತು. ಎತ್ತ ನೋಡಿದರತ್ತ ಜನವೋ ಜನ ಕಂಡು ಬಂದಿತು. ಕೊರೊನಾಕ್ಕೆ ಕಡಿವಾಣ ಹಾಕುವುದಕ್ಕಾಗಿ ರಾಜ್ಯದಾದ್ಯಂತ ನಾಳೆಯಿಂದಲೇ ಲಾಕ್ಡೌನ್ ಮಾಡಲಾಗುತ್ತದೆ ಎಂಬ ವದಂತಿ ಬೆನ್ನು ಬಿದ್ದ ಜನ ಮನೆಯಲ್ಲಿ ಅಗತ್ಯ ಸಾಮಾಗ್ರಿಗಳನ್ನು ಕೊಳ್ಳುವುದಕ್ಕಾಗಿ ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ.

ಜಿಲ್ಲೆಯಲ್ಲಿ ನಾಳೆಯಿಂದ ಲಾಕ್ಡೌನ್ ಇಲ್ಲವಾದರೂ ಜನ ಮಾತ್ರ ವದಂತಿಗೆ ಕಿವಿಕೊಟ್ಟು ಖರೀದಿಗೆ ತೊಡಗಿದ್ದಾರೆ. ಮಂಗಳವಾರ ಹೇಗಿದ್ದರೂ ಬೆಳಗಾವಿ ಮಾರುಕಟ್ಟೆ ಬಂದ್ ಇರುವುದರಿಂದ ಇಂದೇ ತರಾತುರಿಯಲ್ಲಿ ಸಾಲ ಸೋಲ ಮಾಡಿಯಾದರೂ ಮನೆಗೆ ದಿನಸಿ ಸಾಮಾನು ತುಂಬಿಸಿಕೊಳ್ಳುವುದಕ್ಕೆ ಮಾರುಕಟ್ಟೆಗೆ ಬಂದವರ ಸಂಖ್ಯೆಯೇ ಜಾಸ್ತಿಯಾಗಿತ್ತು. ಹಾಗಾಗಿ ಬೆಳಗಾವಿ ನಗರದ ಪ್ರಮುಖ ಮಾರುಕಟ್ಟೆ ರವಿವಾರ ಪೇಟೆಯಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನದಟ್ಟನೆ ಕಂಡು ಬಂತು.

ಇನ್ನು ಹೀಗೆ ಮಾರುಕಟ್ಟೆಯಲ್ಲಿ ಖರೀದಿಗೆ ಬಂದವರಲ್ಲಿ ಕೇವಲ ಮನೆಮಟ್ಟಕ್ಕೆ ಕೊಂಡೊಯ್ಯುವವರು ಮಾತ್ರವಲ್ಲ; ಗಲ್ಲಿಗಳಲ್ಲಿ ಅಂಗಡಿ ನಡೆಸುವ ಚಿಕ್ಕಪುಟ್ಟ ವ್ಯಾಪಾರಿಗಳು ಹೆಚ್ಚಾಗಿದ್ದರು. ಲಾಕ್ಡೌನ್ ಆದರೆ ನಂತರ ಖರೀದಿ ಕಷ್ಟ ಎಂಬ ಕಾರಣಕ್ಕೆ ಈಗಲೇ ಖರೀದಿಸಿಟ್ಟುಕೊಳ್ಳುವ ಮುಂಜಾಗ್ರತೆ ಅವರಲ್ಲಿತ್ತು. ಆದರೆ ಹೀಗೆ ಖರೀದಿಗೆ ಬಂದ ಹಲವರು ಕೂಡಾ ಸಾಮಾಜಿಕ ಅಂತರನ್ನು ಕಾಯ್ದುಕೊಂಡಿರಲೇ ಇಲ್ಲ; ಮುಖಕ್ಕೆ ಮಾಸ್ಕ್ ಕೂಡಾ ಧರಿಸಿರಲಿಲ್ಲ ಎಂಬುದು ದುರಂತದ ವಿಚಾರ. ಕೊರೊನಾ ಕಡಿಮೆ ಮಾಡುವುದಕ್ಕಾಗಿ ಲಾಕ್ಡೌನ್ ಯೋಜನೆ ನಡೆಸಲಾಗುತ್ತಿದೆ. ಆದರೆ ಈಗ ಲಾಕ್ಡೌನ್ ವದಂತಿಯಿಂದ ಕೊರೊನಾ ಇನ್ನಷ್ಟು ಹರಡುವಂತಾಯಿತು ಎಂದರೆ ಖಂಡಿತಾ ಸುಳ್ಳಲ್ಲ!

ಕಳೆದ ಬಾರಿ ಲಾಕ್ಡೌನ್ನಲ್ಲಿ ಸಂಕಷ್ಟ ಅನುಭವಿಸಿದವರು ಈಗ ಮುಂಜಾಗ್ರತಾ ಕ್ರಮವಾಗಿ ಅಗತ್ಯ ದಿನಸಿಗಳನ್ನು ಮನೆಯಲ್ಲಿ ತಂದಿಟ್ಟುಕೊಳ್ಳುತ್ತಿದ್ದಾರೆ. ಆದರೆ ಬಾರಿ ಅಂತಹ ಪರಿಸ್ಥಿತಿ ಬರಬಾರದು ಎಂಬ ಕಾರಣಕ್ಕೆ ಬಹುತೇಕರು ತಮ್ಮ ಮನೆಗೆ ಬೇಕಾದ ಅವಶ್ಯಕ ಸಾಮಗ್ರಿಗಳನ್ನು ಕೊಳ್ಳಲು ಮುಗಿಬಿದ್ದರು. ಆದರೆ ಕೊರೊನಾ ಕಂಟಕದ ಬಗ್ಗೆ ಮಾತ್ರ ಯಾರು ಕಿಂಚಿತ್ತು ಚಿಂತನೆ ಮಾಡಿ ಮಾಸ್ಕ ಹಾಕಿಕೊಂಡಿರಲಿಲ್ಲ, ಸಾಮಾಜೀಕ ಅಂತರ ಕಾಯ್ದುಕೊಂಡಿರಲಿಲ್ಲ.

ನಗರದಲ್ಲಿಯೂ ದಿನೇ ದಿನೇ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ಹಾಗಾಗಿ ಈಗ ನಗರವಾಸಿಗಳು ಕೂಡಾ ಮುಂಜಾಗ್ರತೆ ವಹಿಸಲೇಬೇಕಾದ ಅನಿವಾರ್ಯತೆ ಇದೆ. ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿ ಸಾಮಾಜಿಕ ಅಂತರ ಕಾಪಾಡಿಕೊಂಡು ಓಡಾಡಬೇಕಾದುದು ಅಗತ್ಯವಾಗಿದೆ. ಲಾಕ್ಡೌನ್ ಇಲ್ಲ ಎಂಬ ಕಾರಣಕ್ಕೆ ವಿನಾಕಾರಣ ರಸ್ತೆಯಲ್ಲಿ ಓಡಾಟ ನಡೆಸುವುದು ಅಗತ್ಯವಿಲ್ಲ. ಬದಲಾಗಿ ತೀರಾ ಅಗತ್ಯ ಪರಿಸ್ಥಿತಿಯಲ್ಲಿ ಮಾತ್ರ ಮನೆಯಿಂದ ಹೊರಬಂದು ಓಡಾಟ ನಡೆಸಬೇಕಾಗಿದೆ. ಸಾಮಾಜಿಕ ಅಂತರ ಮರೆತು ಮುಂಜಾಗ್ರತೆಗಳನ್ನು ಗಾಳಿಗೆ ತೂರಿ ಓಡಾಡಿದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಸ್ಥಿತಿಯನ್ನು ಅನುಭವಿಸಬೇಕು ಎನ್ನುವದನ್ನು ಇಲ್ಲಿ ನಾವು