ಕೇಂದ್ರದ ಕ್ರಮದಿಂದ ಕಾಶ್ಮೀರ, ಲಡಾಖ್ ಜನರಿಗೆ ಖುಷಿ: ರಾಮ್ ಮಾಧವ್

ಹೈದರಾಬಾದ್, ಅ 5:    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮದ ನಂತರ  ಜಮ್ಮು ಕಾಶ್ಮೀರ ಮತ್ತು ಲಡಾಖ್ ನ ಜನರು ಸಂತೋಷದಿಂದ ಇದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.   

ಆದರೆ ಕಣಿವೆ ರಾಜ್ಯದಲ್ಲಿ ಇನ್ನು ಇನ್ನೂ ಕೆಲವು ಸಮಸ್ಯೆಗಳಿವೆ ಎಂದು ಅವರು ರಾಷ್ಟ್ರೀಯ ಏಕತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.   ಜಮ್ಮುವಿನಲ್ಲಿ ಜನರು ಖುಷಿಯಿಂದಿದ್ದಾರೆ. ದೇಶದೊಂದಿಗೆ ಹೊಂದಿಕೊಂಡು ಹೋಗಲು ಸಿದ್ಧರಾಗಿದ್ದಾರೆ. ಆದರೆ ಕಾಶ್ಮೀರ ಕಣಿವೆಯಲ್ಲಿ ಇನ್ನೂ ಸ್ವಲ್ಪ ತೊಂದರೆಯಿದೆ ಎಂದು ಹೇಳಿದರೂ ಅದನ್ನು ಅವರು ಬಿಡಿಸಿ ಹೇಳಲಿಲ್ಲ.   

ಲಡಾಖ್ ಪ್ರಾಂತ್ಯದ ಜನರೂ ಬಹಳ ಖುಷಿಯಾಗಿದ್ದಾರೆ, ಅವರ ಬಹುದಿನಗಳ ಕನಸು ಈಗ ನನಸಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  

ಕಾಶ್ಮೀರವನ್ನು ವಿಭಜನೆ ಮಾಡಿ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಿ  ಕೇಂದ್ರ ಸರಕಾರ ಇತ್ತೀಚೆಗೆ ಘೋಷಣೆ ಮಾಡಿರುವುದನ್ನು ಇಲ್ಲಿ  ಸ್ಮರಿಸಿಕೊಳ್ಳಬಹುದು.