ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 135ಕ್ಕೆ‌ ಏರಿಕೆ

ಕಲಬುರಗಿ, ಮೇ 23, ಸೂರ್ಯ ನಗರಿ ಕಲಬುರಗಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 135ಕ್ಕೆ‌ ಏರಿಕೆ ಆಗಿದೆ.ಅರೋಗ್ಯ  ಇಲಾಖೆಯು ಶನಿವಾರ ಬೆಳಿಗ್ಗೆ ಹೊರಡಿಸಿರುವ ಬುಲೆಟಿನ್ ನಲ್ಲಿ ಮಹಾರಾಷ್ಟ್ರ ಪ್ರವಾಸ  ಹಿನ್ನೆಲೆಯಿಂದ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ರಾಮನಗರ ಗ್ರಾಮದ 26 ವರ್ಷದ   ಯುವಕನಿಗೆ  (ರೋಗಿ ಸಂಖ್ಯೆ1771) ಕೊರೊನಾ ಸೋಂಕು ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.ಈ  ಯುವಕ ರಾಮನಗರ ಗ್ರಾಮದ ಸರ್ಕಾರಿ ಕ್ವಾರಂಟೈನ್ ನಲ್ಲಿದ್ದರು. ಸೋಂಕು ದೃಢಪಟ್ಟ ನಂತರ  ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ‌ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ  ಇದೂವರೆಗೆ ಕೊರೊನಾ‌ ಪೀಡಿತ 135 ರೋಗಿಗಳಲ್ಲಿ 7 ಜನ ನಿಧನ‌ರಾಗಿದ್ದು, 60 ರೋಗಿ  ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 68 ರೋಗಿಗಳಿಗೆ  ಚಿಕಿತ್ಸೆ‌ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.