ಕಲಬುರಗಿ, ಮೇ 18, ಸೂರ್ಯ ನಗರಿ ಕಲಬುರಗಿಗೆ ಮತ್ತೆ ಕೊರೊನಾ ಬಿಸಿ ಮುಟ್ಟಿದ್ದು, ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆ ಆಗಿದೆ.ಜಿಲ್ಲೆಗೆ ಇತ್ತೀಚೆಗೆ ಮುಂಬೈನಿಂದ ವಲಸೆ ಬಂದ 6 ತಿಂಗಳ ಹೆಣ್ಣು ಮಗು ಸೇರಿ ಒಟ್ಟು ಆರು ಜನರಲ್ಲಿ ಸೋಮವಾರ ಕೊರೊನಾ ಸೋಂಕು ದೃಢಪಟ್ಟಿದೆ.ಇದರಲ್ಲಿ ಮುಂಬೈ ಪ್ರವಾಸ ಹಿನ್ನೆಲೆಯ 24 ವರ್ಷದ ಯುವತಿ (ರೋಗಿ ಸಂಖ್ಯೆ-1187) ಇವರು ಯಾದಗಿರಿ ಜಿಲ್ಲೆಯವರಾಗಿದ್ದು, ಪ್ರಸ್ತುತ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮುಂಬೈ ಪ್ರವಾಸ ಹಿನ್ನೆಲೆಯಿಂದ ಕಲಬುರಗಿ ನಗರದ ಶಹಾಬಜಾರ್ ತಾಂಡಾ ಮೂಲದ 22 ವರ್ಷದ ಮಹಿಳೆ (ರೋಗಿ ಸಂಖ್ಯೆ-1194) ಮತ್ತು 24 ವರ್ಷದ ಮಹಿಳೆಗೆ (ರೋಗಿ ಸಂಖ್ಯೆ-1195) ಕೋವಿಡ್-19 ಸೋಂಕು ಕಂಡುಬಂದಿದೆ. ಇದಲ್ಲದೆ ಕಾಳಗಿ ತಾಲೂಕಿನ ಅರಣಕಲ್ ಗ್ರಾಮದ ಬಳಿಯ ಬುಗಡಿ ತಾಂಡಾ ಮೂಲದ 29 ವರ್ಷದ ಯುವಕ (ರೋಗಿ ಸಂಖ್ಯೆ-1196), 27 ವರ್ಷದ ಮಹಿಳೆ (ರೋಗಿ ಸಂಖ್ಯೆ-1197) ಹಾಗೂ 6 ತಿಂಗಳ ಹೆಣ್ಣು ಮಗುವಿಗೆ (ರೋಗಿ ಸಂಖ್ಯೆ-1198) ಕೋವಿಡ್-19 ಸೋಂಕು ತಗುಲಿದೆ.ಮುಂಬೈ ಪ್ರವಾಸ ಹಿನ್ನೆಲೆಯ ಎಲ್ಲಾ ಕೊರೊನಾ ಸೋಂಕಿತರನ್ನು ಕ್ವಾರಂಟೈನ್ ಸೆಂಟರ್‌ನಿಂದ ಕೋವಿಡ್-19 ಆಸ್ಪತ್ರೆಗೆ ಈಗಾಗಲೇ ದಾಖಲಿಸಲಾಗಿದೆ.